ಸಿದ್ದರಾಮಯ್ಯ ಬಿಜೆಪಿಗೆ ಕರೆತರುತ್ತೇವೆ ಎಂದ ರಮೇಶ್ ಜಾರಕಿಹೊಳಿಗೆ ಸಿದ್ದು ಟಾಂಗ್…

ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುತ್ತೇವೆ ಎಂದ ರಮೇಶ್ ಜಾರಕಿಹೊಳಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಅದು ಬಾಲಿಶವಾದ ಹೇಳಿಕೆ. ಜವಾಬ್ದಾರಿಯಿದ್ರೆ ಹೀಗೆಲ್ಲ ಮಾತನಾಡುವದಿಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ಗಂಭೀರವಾಗಿ ಮಾತನಾಡೋದನ್ನ ಕಲಿಯಬೇಕು. ನಮ್ಮ ಜೀವನದ ಹೋರಾಟನೇ ಕೋಮುವಾದಿ ಶಕ್ತಿ ವಿರುದ್ಧ. ಅವನ್ಯಾರೋ ರಮೇಶ್. ರಮೇಶ್ ಗೆ ಐಡಿಯಾಲಜಿ ಗೊತ್ತಿಲ್ಲ. ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ. ಏನು ಓದುಕೊಂಡಿಲ್ಲ. ಬಾಯಿಗೆ ಬಂದಂಗೆ ಮಾತನಾಡ್ತಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

ಮಲ್ಲಿಕಾರ್ಜುನ ಖರ್ಗೆ ದಲಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಏನೇ ತೀರ್ಮಾನ ಆಗ್ಬೇಕಾದ್ರೆ ಫಲಿತಾಂಶ ಬರಬೇಕು. ಆ ಮೇಲೆ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೆ ನೋಡೋಣ. ಈಗಲೇ ಚರ್ಚೆ ಮಾಡಿದ್ರೆ ಹೇಗೆ. ನಮಗೊಂದು ಹೈಕಮಾಂಡ್ ಇದೆ. ನಾವು ಬೈ ಎಲೆಕ್ಷನ್ ನಲ್ಲಿ ೧೦ಸೀಟು ಗೆಲ್ಲಬೇಕು. ೫ಸೀಟು ಗೆದ್ರೆ ಬಿಜೆಪಿ ೧೧೨ ಸ್ಥಾನ ಆಗುತ್ತೆ. ಕಾಂಗ್ರೆಸ್ ೧೦, ಜೆಡಿಎಸ್ ಒಂದು,ಎರಡು ಗೆಲ್ಲಬೇಕು. ಆಗ ಚರ್ಚೆಗೆ ಬರೋದು. ಇನ್ನು ಫಲಿತಾಂಶವೇ ಬಂದಿಲ್ಲ ಈಗಲೇ ಚರ್ಚೆ ಮಾಡಿದ್ರೆ ಹೇಗೆ ಎಂದ ಸಿದ್ದರಾಮಯ್ಯ ಪ್ರಶ್ನಿಸಿದರು. ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದರು.

ಇನ್ನೂ ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ಏಕಾಂಗಿ ವಿಚಾರವಾಘಿ ಮಾತನಾಡಿ, ಅದೆಲ್ಲ ಸುಳ್ಳು. ಬಿಜೆಪಿಯವ್ರು ಪ್ರಚಾರಕ್ಕಾಗಿ ಹಾಗೆ ಹೇಳ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ. ಬಿಜೆಪಿ ಅಪಪ್ರಚಾರವದು, ಲಕ್ಷಾಂತರ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ.

ಬೈ ಎಲೆಕ್ಷನ್ ಬಳಿಕ ಆಪರೇಷನ್ ಕಮಲ ವಿಚಾರಕ್ಕೆ ಮಾತನಾಡಿ, ಆಪರೇಷನ್ ಕಮಲ ಮಾಡೋಕೆ ಮುಂದಾದ್ರೆ ಜನ ಬಿಜೆಪಿಯವರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ.

ಸಿದ್ದರಾಮಯ್ಯ ಹೊರಗಿಟ್ಟು ಎಚ್ ಡಿ ಕೆ -ಡಿಕೆಶಿ ಭೇಟಿ ವಿಚಾರಕ್ಕೆ ಹೈಕಮಾಂಡ್ ನವಿರು ಹೇಳಿದ್ದಾರೆ ಏನ್ರಿ. ಈ ಬಗ್ಗೆ ಹೈಕಮಾಂಡ್ ನವ್ರು ಹೇಳಿದ್ರೇನ್ರಿ ಎಂದ ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಗರಂ ಆದರು.

 

Leave a Reply

Your email address will not be published.