Ranji Trophy : ಕರ್ನಾಟಕ – ಮುಂಬೈ ಪಂದ್ಯ ಡ್ರಾನಲ್ಲಿ ಅಂತ್ಯ : ಕೆ.ವಿ ಸಿದ್ಧಾರ್ಥ್ ಪಂದ್ಯಶ್ರೇಷ್ಠ

ಬೆಳಗಾವಿಯ ಕೆಎಸ್ ಸಿಎ ಮೈದಾನದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವೆ ನಡೆದ ರಣಜಿ ಟ್ರೋಫಿ ಪಂದ್ಯ ನಾಲ್ಕನೇ ದಿನವಾದ ಶುಕ್ರವಾರ ಡ್ರಾನಲ್ಲಿ ಅಂತ್ಯಗೊಂಡಿದೆ.

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಮೊತ್ತ ಕಲೆ ಹಾಕಿತ್ತು. ಕರ್ನಾಟಕ ಪರವಾಗಿ ಕೃಷ್ಣಮೂರ್ತಿ ಸಿದ್ಧಾರ್ಥ್ 161, ಕೌನೇನ್ ಅಬ್ಬಾಸ್ 64 ಹಾಗೂ ಶ್ರೇಯಸ್ ಗೋಪಾಲ್ 48 ರನ್ ಗಳಿಸಿದ್ದರು.

ಮುಂಬೈ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 205ಕ್ಕೆ ಆಲೌಟ್ ಆಗಿತ್ತು. ಕರ್ನಾಟಕದ ಪರ ರೋನಿತ್ ಮೋರೆ 5, ಶ್ರೇಯಸ್ ಗೋಪಾಲ್ 2 ಹಾಗೂ ಪ್ರಸಿಧ್ ಕೃಷ್ಣ 2 ವಿಕೆಟ್ ಪಡೆದಿದ್ದರು.

195 ರನ್ ಮುನ್ನಡೆ ಪಡೆದುಕೊಂಡು 2ನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಅಂತಿಮ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಕರ್ನಾಟಕದ ಪರ ಕೆವಿ ಸಿದ್ಧಾರ್ಥ್ ಅಜೇಯ 71 ಹಾಗೂ ಸ್ಟುವರ್ಟ್ ಬಿನ್ನಿ 30 ರನ್ ಬಾರಿಸಿದರು.

ಪ್ರಥಮ ಇನ್ನಿಂಗ್ಸ್ ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ ಅರ್ಧಶತಕ ಬಾರಿಸಿದ ಕೆ.ವಿ ಸಿದ್ಧಾರ್ಥ್ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನ ಪಡೆದರು.

Leave a Reply