Supreme court : ಬಡ್ತಿ ಮೀಸಲಾತಿ ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್‌….

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು ಮೀಸಲಾತಿಯಡಿ ನೌಕರರಾಗಿ ನೇಮಕಾತಿ ಆಗಿದ್ದರೂ ಬಡ್ತಿ ನೀಡುವಾಗ ಮೀಸಲಾತಿ ಒದಗಿಸುವುದು ಮೂಲಭೂತ ಹಕ್ಕಲ್ಲ. ರಾಜ್ಯ ಸರ್ಕಾರಗಳು ಬಡ್ತಿ ಮೀಸಲಾತಿ ನೀಡಲು ಬದ್ದವಾಗಬೇಕಾಗಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಮೀಸಲಾತಿ ನೀಡುವುದು ಮೂಲಭೂತ ಹಕ್ಕಲ್ಲ. ಹಾಗಾಗಿ ರಾಜ್ಯ ಸರ್ಕಾರಗಳಿಗೆ ಮೀಸಲಾತಿ ಕೊಡುವಂತೆ ನ್ಯಾಯಾಲಯ ನಿರ್ದೇಶನ ನೀಡಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

2012ರ ಸೆಪ್ಟೆಂಬರ್ 5ರಂದು ಉತ್ತರಖಂಡ್ ಸರ್ಕಾರ ಎಲ್ಲಾ ಹುದ್ದೆಗಳಿಗೂ ಲೋಕಸೇವಾ ಆಯೋಗದ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮೀಸಲಾತಿ ನೀಡದೆ ನೇಮಕಾತಿ ಮಾಡಲು ತೀರ್ಮಾನಿಸಿತ್ತು. ಈ ಸಂಬಂಧದ ಅರ್ಜಿಯನ್ನು ವಿಚಾರಣಡ ನಡೆಸಿರುವ ಸುಪ್ರೀಂಕೋರ್ಟ್ ಮೇಲಿನ ತೀರ್ಪು ನೀಡಿದೆ.

ಉತ್ತರಖಂಡ್ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣ ಹೈಕೋರ್ಟ್ ನಲ್ಲಿ ಬಿದ್ದುಹೋಯಿತು. ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಾರ್ವಜನಿಕ ಹುದ್ದೆಗಳಿಗೆ  ನೇಮಕಾತಿ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಸರ್ಕಾರಗಳುಮೀಸಲಾತಿ ಒದಗಿಸುವಂತೆ ನಿರ್ದೇಶನ ನೀಡಲು ಬರುವುದಿಲ್ಲ. ಈ ಮಧ್ಯೆ ಬಡ್ತಿ ನೀಡುವಾಗಲೂ ಸರ್ಕಾರ ಮೀಸಲಾತಿ ನೀಡಲು ಬದ್ದವಾಗಿರಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರ ಒಂದೊಮ್ಮೆ ನಿರ್ದೇಶಿಸಿದರೆ ಅವಕಾಶವನ್ನು ಸೃಷ್ಟಿಸಬೇಕು. ಸರ್ಕಾರದ ಗುಣಮಟ್ಟದ ಡೇಟಾ ತೋರಿಸಲು 2012ರಲ್ಲಿ ಉತ್ತರಖಂಡ್ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಎತ್ತಿಹಿಡಿದಿದೆ. ST/ST ನೌಕರರಿಗೆ ಬಡ್ತಿ ನೀಡುವಾಗ ಮೀಸಲಾತಿ ಒದಗಿಸಬೇಕಾಗಿಲ್ಲ ಎಂದು ತಿಳಿಸಿದೆ.

ಉತ್ತರ ಖಂಡ್ ಹೈಕೋರ್ಟ್ ಕೂಡ ಸರ್ಕಾರದ ತೀರ್ಮಾನ ಕಾನೂನುಬಾಹಿರ ಎಂದು ಘೋಷಿಸಿರಲಿಲ್ಲ. ಸಾರ್ವಜನಿಕ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಮೀಸಲಾತಿ ಒದಗಿಸಬೇಕೇ ಅಥವಾ ಬೇಡವೇ ಎಂಬುದನ್ನು ಸರ್ಕಾರ ತೀರ್ಮಾನಿಸಬೇಕು ಎಂದು ಸಹ ಅಭಿಪ್ರಾಯ ಪಟ್ಟಿದೆ.

ಸಂವಿಧಾನದ ಆರ್ಟಿಕಲ್ 16 (4), 16(4ಎ) ಸಾರ್ವಜನಿಕ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಒದಗಿಸಬೇಕು ಎಂದು ಹೇಳಿಲ್ಲ. ಎಂದು ಸುಪ್ರೀಂಕೋರ್ಟ್ ತಿಳಿಸಿದೆ.