ರೋಮ್ಯಾಂಟಿಕ್ ಆಗಿ ಪಾಠ ಮಾಡಿದ ಶಿಕ್ಷಕನಿಗೆ ಬಿತ್ತು ಮಹಿಳೆಯರಿಂದ ಗೂಸಾ….

ವಿದ್ಯಾರ್ಥಿಗಳಿಗೆ ಪಾಠ ಮಾಡೋ ಆಸಾಮಿ ಅಂದ್ರೆ ರೋಮ್ಯಾಟಿಂಗ್ ಪಾಠ ಮಾಡಲು ಹೋಗಿ ಶಿಕ್ಷಕನೊಬ್ಬ ಸಿಕ್ಕಿ ಬಿದ್ದು ಗೂಸಾ ತಿಂದಿದ್ದಾನೆ.
ಹೌದು…. ವಿಜ್ಞಾನ ಶಿಕ್ಷಕ ಯತೀಶ್  ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿನಿಯರ ಹತ್ತಿರ ಅಶ್ಲೀಲವಾಗಿ ಮಾತನಾಡುತ್ತಿದ್ದುದೇ ಘಟನೆ ಕಾರಣ ಎನ್ನಲಾಗಿದೆ. ತುಮಕೂರು ತಾಲೂಕಿನ ಕೈದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಹುಡುಗಿಯರಿಗೆ ರೋಮ್ಯಾನ್ಸ್ ಪಾಠ ಮುಂದಾದ ಶಿಕ್ಷಕನ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮುಕ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.