ಬಿಜೆಪಿಯಿಂದ 60 ಕೋಟಿ ಆಫರ್..! : 500 ಕೋಟಿ ಕೊಟ್ಟರೂ ಹೋಗಲ್ಲ – ಶಾಸಕ ಶಿವಲಿಂಗೇಗೌಡ

ಆಪರೇಷನ್ ಕಮಲಕ್ಕೆ ಸಾಥ್ ನೀಡಲು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರಿಗೆ 60 ಕೋಟಿ ರೂಪಾಯಿ ಆಫರ್ ಬಂದಿತ್ತೆಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಸ್ವತ: ಜೆಡಿಎಸ್ ಶಾಸಕ ಶಿವಲಿಂಗೇಗೌಡರೇ ಹೇಳಿಕೊಂಡಿದ್ದಾರೆ. ಜೆಡಿಎಸ್ ಶಾಸಕ ಶಿವಲಿಂಗೇಗೌಡರಿಗೆ ಈ ವಿಚಾರವನ್ನು  ಶಾಸಕ ಗೌರಿ ಶಂಕರ್ ಹೇಳಿದರೆಂದು ಅವರು ತಿಳಿಸಿದ್ದಾರೆ.

ನಮಗೆ ಬಿಜೆಪಿಯಿಂದ 60 ಕೋಟಿ ಅಲ್ಲ 500 ಕೋಟಿ ಆಫರ್ ಬಂದರೂ ಕೂಡ ಹೋಗಲ್ಲ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಕುದರೆ ವ್ಯಾಪಾರ ಬಿಜೆಪಿ ಅವರು ಅದ್ಯಾಕ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿರೋಧ ಪಕ್ಷದವರಾಗಿ ನಾವು ಕೂಡ ಆಡಳಿತ ನಡೆಸಿದ್ದೇವೆ. ಹಾಗೆ ಅವರೂ ಕೂಡ ನಡೆಸಲಿ. ಅದರಕ್ಕೆ ತಪ್ಪೇನಿದೆ..? ಬಿಜೆಪಿಯವರು ಅದ್ಯಾಕೆ ಇಂತಹ ಆಗದ ಕೆಲಸಗಳಿಗೆ ಕೈ ಹಾಕುತ್ತಿದ್ದಾರೋ..? ಗೊತ್ತಿಲ್ಲಾ . ಜಗಧೀಶ್ ಶೆಟ್ಟರ್ ಸ್ವತ: ಕಾಲ್ ಮಾಡಿ ಹಣದ ಆಮಿಷ ಒಡ್ಡಿದ್ದಾರೆ. ಜೆಡಿಎಸ್ ಪಕ್ಷ ದ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ ಎಂದು ಶಿವಲಿಂಗೇಗೌಡ ಮತ್ತು ಶಾಸಕ ಗೌರಿ ಶಂಕರ್ ಪಕ್ಷ ನಿಷ್ಠೆ ತೋರಿಸಿದ್ದಾರೆ.

 

Leave a Reply