ಯೋಧ ಸಂದೀಪ್ ಪಾರ್ಥಿವ ಶರೀರ ಇಂದು ತವರೂರಿಗೆ.

ಹಾಸನದ ಹುತಾತ್ಮ ಯೋಧ ಸಂದೀಪ್ ನ ಪಾರ್ಥೀವ ಶರೀರ ಇಂದು ಶ್ರೀ ನಗರದಿಂದ ದೆಹಲಿಗೆ ಬರಲಿದೆ. ನಂತರ ದೆಹಲಿಯಿಂದ ಹಾಸನಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಿಗ್ಗೆ 11.30 ಕ್ಕೆ ಪಾರ್ಥಿವ ಶರೀರ ಶ್ರೀ ನಗರದಿಂದ ದೆಹಲಿ ತಲುಪಲಿದೆ. ದೆಹಲಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ಗೌರವ ವಂದನೆ ಸಲ್ಲಿಸಿದ ಬಳಿಕ ಸೇನಾ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ರವಾನೆಯಾಗಲಿದೆ ಎನ್ನಲಾಗಿದೆ.

ಮೈಸೂರಿನಲ್ಲಿ ಅಂತಿಮ ನಮನ ಬಳಿಕ ಹಾಸನದತ್ತ ಪಾರ್ಥಿವ  ಶರೀರ ಹೊರಡಲಿದೆ. ಸಂಜೆಯೊಳಗೆ ತವರೂರು ತಲುಪುವ ಸಾಧ್ಯತೆ ಇದೆ. ಸಂಜೆ ಹಾಸನಕ್ಕೆ ತಲುಪಿದ ತಕ್ಷಣ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬುಧವಾರ ಬೆಳಿಗ್ಗೆ ಮೆರವಣಿಗೆ ಮೂಲಕ ಮೃತನ ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆಯಾಗಲಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಸಂದೀಪ್ ಹುಟ್ಟೂರು ದೇವಿಹಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ‌ಸಿದ್ಧತೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು  ನಾಳೆ ಮಧ್ಯಾಹ್ನ ಮೃತ ಯೋಧನಿಗೆ ಸಕಲ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಗುವುದು. ಬಳಿಕ ರಾಷ್ಟ್ರಧ್ವಜ ಹಸ್ತಾಂತರ ಮಾಡುವ ಮೂಲಕ ಯೋಧನ ಕಳೆಬರಹ ಕುಟುಂಬಕ್ಕೆ ಹಸ್ತಾಂತರಿಸುತ್ತಾರೆ.

Comments are closed.