ಶಾಲಾ ವಿದ್ಯಾರ್ಥಿಯ ವಿಡಿಯೋ ವೈರಲ್ ಪ್ರಕರಣ : ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದಂತೆ ಗ್ರಾಮಸ್ಥರ ಒತ್ತಾಯ

ಶಾಲಾ ವಿದ್ಯಾರ್ಥಿಯ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಾಲಾ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದಂತೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಶಾಲೆಯ ಸಹಶಿಕ್ಷಕ ಶಾಲಾ ವಿದ್ಯಾರ್ಥಿಗೆ ‘ಪಕ್ಕೆಲುಬು’ ಪದ ಉಚ್ಛಾರಣೆ ಮಾಡಲು ಹೇಳಿಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದನು. ವಿಡಿಯೋ ವೈರಲ್ ಮಾಡಿದ್ದ ಶಾಲೆಯ ಶಿಕ್ಷಕ ಟಿ.ಸೋಮಶೇಖರಪ್ಪ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ ಆದೇಶಿಸಿದ್ದರು.

ಸಚಿವರ ಆದೇಶದ ಮೇರೆಗೆ ಹೂವಿನಹಡಗಲಿ ಬಿಇಓ ಶಿಕ್ಷಕನನ್ನ ಅಮಾನತ್ತು ಮಾಡಿದ್ದರು. ಅಮಾನತ್ತು ನಂತರ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ಶಾಲಾ ಎಸ್ ಡಿಎಂಸಿ ಸದಸ್ಯರು, ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಪೋಷಕರು ತಮ್ಮ ಮಗನಿಗೆ ಹೆಚ್ಚು ಒತ್ತು ನೀಡಲು ಹೇಳಿದ್ದರಿಂದ ಒತ್ತಾಯದಿಂದ ಕಲಿಸಿದ್ದಾರೆಂದ ಗ್ರಾಮಸ್ಥರು ಪತ್ರದಲ್ಲಿ ಒಲ್ಲೇಖಿಸಿದ್ದಾರೆ.