ಭಟ್ರು ಹಾರಿಸಿದ ಎರಡನೇ ಗಾಳಿಪಟ : ಕುದುರೆಮುಖದಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್

ಯೋಗರಾಜ ಭಟ್ಟ ನಿರ್ದೇಶನದ ಗಾಳಿಪಟ-2 ಸಿನಿಮಾ ಶೂಟಿಂಗ್ ಡಿಸೆಂಬರ್ 2 ರಿಂದ ಆರಂಭವಾಗಿದೆ.

ಕುದುರೆಮುಖ ಮತ್ತು ಕಳಸ ಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆದಿದೆ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವೈಭವಿ ಸಾನಿಧ್ಯ ನಟಿಸಿರುವ ಹಾಡಿನ ಚಿತ್ರೀಕರಣ ನಡೆಯಿತು.

ನಾತಿಚರಾಮಿ ಸಿನಿಮಾ ಖ್ಯಾತಿಯ ರಮೇಶ್ ರೆಡ್ಜಿ ನರ್ಮಾಣದ ಸಿನಿಮಾದಲ್ಲಿ ದಿಗಂತ್, ಪವನ್ ಕುಮಾರ್ ಹಾಗೂ ಅನಂತ್ ನಾಗ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸಂಯುಕ್ತಾ ಮೆನನ್ ಹಾಗೂ ಶರ್ಮಿಳಾ ಮಾಂಡ್ರೆ ಕೂಡ ನಟಿಸಿದ್ದಾರೆ.

ಚಿತ್ರತಂದ ಸದ್ಯ ಕುದುರೆಮುಖದಲ್ಲಿ ಕ್ಯಾಂಪ್ ಹಾಕಿದೆ, 2008 ರಲ್ಲಿ ಗಾಳಿಪಟ ಸಿನಿಮಾ ರಿಲೀಸ್ ಆಗಿತ್ತು, ಆದರೆ ಅದಕ್ಕೂ ಈ ಸಿನಿಮಾ ಕಥೆಗೂ ಯಾವುದೇ ಸಂಬಂಧವಿಲ್ಲ, ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ.

Leave a Reply