ಬೇಸಿಗೆ ಬಿಸಿಲು ದೇಹಕ್ಕೆ ತಾಗದಿರಲು ಏನೆಲ್ಲಾ ಪ್ಲಾನ್ ಮಾಡಬಹುದು ನೋಡಿ..

ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ನಾನಾ ದಾರಿಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ತಲೆಯ ಮೇಲೆ ಛತ್ರಿ, ಛತ್ರಿ ವಿತ್ ಟೋಪಿ, ಸ್ಕಾರ್ಪ್, ಟೋಪಿ ಹಾಕಿಕೊಳ್ಳುವ ಜೊತೆಗೆ ತಮ್ಮ ವಾಹನಗಳಿಗೂ ಟೋಪಿ ಹಾಕಿ ಸವಾರಿ ಮಾಡುತ್ತಿದ್ದಾರೆ. ಆ ಮೂಲಕ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಿಸುತ್ತಿದ್ದಾರೆ.

ದ್ವಿಚಕ್ರ ವಾಹನಕ್ಕೆ ಮೊಪೆಡ್‍ಗೆ ಸಮ್ಮರ್ ಪ್ರೂಫ್ ಕ್ಯಾಪ್ ಬಳಕೆ ಕೆಲವರಿಗೆ ಮುಜುಗರ ತಂದರೂ, ಇನ್ನೂ ಕೆಲವರು ರಾಜಾರೋಶವಾಗಿ  ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಮೊಪೆಡ್‍ಗೆ ಸಮ್ಮರ್ ಪ್ರೂಫ್ ಕ್ಯಾಪ್ ಬಳಕೆ ಮಾಡುತ್ತಿದ್ದಾರೆ.

ಅಷ್ಟಕ್ಕೂ ಈ ಕ್ಯಾಪ್ ನ್ನ ನೀವು ದಾರಿಯಲ್ಲಿ ಹೋಗುವಾಗ ನೋಡಿರಬಹುದು. ನೋಡಿ ಒಂದು ಮುಗಳ್ನಗೆ ಕೂಡ ಬಂದಿರಬಹುದು. ಆದರೆ ಇದರ ಬಳಕೆಯಿಂದಲೂ ಸಾಕಷ್ಟು ಪ್ರಯೋಜನ ಇವೆ.  ಇದರಿಂದ ಬಿಸಿಲಿನ ಝಳದಿಂದ ರಕ್ಷಣೆ ಸಿಗುತ್ತಿದೆ. ಜೊತೆಗೆ ಎರಡು ಕಡೆ ತೆರೆದಿರುವುದರಿಂದ ಗಾಳಿಯೂ ಸಿಗುತ್ತಿದೆ. ಈ ಕ್ಯಾಪ್ ನ್ನ ಒಂದು ಬಾರಿ ವಾಹನಕ್ಕೆ ಫಿಕ್ಸ್ ಮಾಡಿದರೆ ಸಾಕು, ಹಿಡಿದುಕೊಳ್ಳುವ ಅಥವಾ ತಲೆ ಮೇಲೆ ಟೊಪಿಯಂತೆ ಹಾಕಿಕೊಳ್ಳುವ ಅಗತ್ಯತೆ ಇರುವುದಿಲ್ಲ. ಇದರಂತೆ ಕಾಲ್ನಡಿಗೆಯಲ್ಲಿ ಓಡಾಡುವಂತವರಿಗೆ ತಲೆ ಟೋಪಿ, ಛತ್ರಿಗಳನ್ನು ಬಳಕೆ ಮಾಡಬಹುದು.

ಸನ್ ಸ್ಟ್ರೋಕ್, ಸ್ಕಿನ್ ಟ್ಯಾನಿಂಗ್, ಡಿಹೈಡ್ರೇಷನ್, ಗ್ಲೂಕೋಸ್ ಕೊರತೆ ಆಗದಂತೆ ಬಿಸಿಲಿನಿಂದ ಇಂತೆಲ್ಲಾ ವಸ್ತುಗಳು ಜನರ ರಕ್ಷಣಾ ಕವಚಗಳಾಗಲಿವೆ.

ಬೆಳಿಗ್ಗೆಯಿಂದ ಸಂಜೆಯಾದ್ರೂ ಬಿಸಿಗಾಳಿ ಬೀಸುತ್ತಿದೆ. ಬೆಳಿಗ್ಗೆ 8 ಗಂಟೆಗೆ ಬಿಸಿಲಿನ ಝಳ ಆರಂಭವಾಗುತ್ತಿದೆ. ಹೀಗಾಗಿ ಕಬ್ಬಿನ ಹಾಲು, ತೆಂಗಿನ ಎಳೆನೀರಿನ ವ್ಯಾಪಾರ ಜೋರಾಗಿದೆ. ಜನ ಬಿಸಿಲಿನಿಂದ ಉಂಟಾಗುವ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕೊಡೆಗಳನ್ನ ಹಿಡಿದು ಮನೆಯಿಂದ ಹೊರಬಂದ್ರೆ ಬಹುತೇಕರು ಟೋಪಿ ಹಾಕಿಕೊಂಡು ಹೊರಬರುತ್ತಿದ್ದಾರೆ.ಒಟ್ಟಿನಲ್ಲಿ, ಕನಿಷ್ಠವೆಂದರೂ 6 ತಿಂಗಳು ಬೇಸಿಗೆ ಕಾಲದ ವಾತಾರವಣವನ್ನೇ ಹೊಂದಿರುವ ಜನ ಈ ಬಾರಿಯ ಬಿರು ಬಿಸಿಲಿಗೆ ನಾನಾ ರೀತಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಗಿಡ ಮರಗಳು ವಿರಳವಾಗಿರುವುದು ಸಹ ಇಲ್ಲಿನ ತಾಪಮಾನದ ಏರಿಕೆಗೆ ಕಾರಣವಾಗಿದೆ. ಅಂತೂ-ಇಂತೂ ಯಾವಾಗ ಬೇಸಿಗೆ ಮುಗಿಯುತ್ತೋ ಅಂತ ಬೇಸಿಗೆ ಆರಂಭದಲ್ಲೇ ಜನ ಕಾಯುತ್ತಿದ್ದಾರೆ.

Leave a Reply