ಹಿರಿಯ ಹಾಸ್ಯನಟ ದೊಡ್ಡಣ್ಣನ ಮನೆಯಲ್ಲಿ ದೊಡ್ಡದಾದ ಮದುವೆ ಸಂಭ್ರಮ…..

ಗದಗನಲ್ಲಿ ಹಾಸ್ಯನಟ ಹಿರಿಯ ನಟ ದೊಡ್ಡಣ್ಣ ಮಗನ‌ ಮದುವೆ ಸಂಭ್ರಮ ನಡೆಯುತ್ತಿದೆ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮದುವೆ ನಡೆಯಲಿದೆ. ಗದಗನ ಗುಗ್ಗರಿ ಕುಟುಂಬದ ಜ್ಯೋತಿಯನ್ನು ದೊಡ್ಡಣ್ಣನವರ ಮಗ ಸೂಗುರೇಶ ವರಿಸಲಿದ್ದಾರೆ.

ಹೌದು.. ಗದಗನಲ್ಲಿ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಹಾಸ್ಯನಟ ದೊಡ್ಡಣ್ಣನವರ ಮಗನ ಮದುವೆ ಸಂಭ್ರಮ ಮನೆ ಮಾಡಿದೆ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಈ ಮದುವೆ ನಡೆಯಲಿದ್ದು, ಗದಗನ ಗುಗ್ಗರಿ ಕುಟುಂಬದ ಜ್ಯೋತಿಯನ್ನು ದೊಡ್ಡಣ್ಣನವರ ಮಗ ಸೂಗೂರೇಶ ವರಿಸಲಿದ್ದಾರೆ.

ಮದುವೆ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರು, ವಿವಿಧ ಮಠಾಧೀಶರು ಹಾಗೂ ಗಣ್ಯರು ಮದುವೆ ಸಂಭ್ರಮದಲ್ಲಿ‌ ಪಾಲ್ಗೊಳ್ಳುವ ಸಾಧ್ಯತೆಯಿದೆ.