ಶಶಿಕಲಾರನ್ನು ಭೇಟಿ ಮಾಡಿದ ತಮಿಳುನಾಡು ಸಚಿವರು!

ಅಕ್ರಮ ಅಸ್ತಿಗಳಿಕೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರುರುವ ಶಶಿಕಲಾ ಭೇಟಿ ಮಾಡಲು ಇಂದು ತಮಿಳುನಾಡಿನ ನಾಲ್ವರು ಸಚಿವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು.

ಶಿಕ್ಷಣ ಸಚಿವ ಸೆಂಗೋಟಿಯನ್, ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್, ಸಹಕಾರ ಸಚಿವ ಸೆಲ್ಲೂರು ರಾಜು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕಾಮರಾಜು ಭೇಟಿ ನೀಡಿದ್ದು ತಮಿಳುನಾಡಿನ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿ ಹೊರನಡೆದಿದ್ದಾರೆ. ಇನ್ನು ಚಿನ್ನಮ್ಮನನ್ನು ಬೇಟಿ ಮಾಡಲು ಬಂದ ಸಚಿವರು ಮಂತ್ರಿ ಪದವಿ ಸಿಕ್ಕ ನಂತರ ಇದೇ ಮೊದಲ ಭಾರಿಗೆ ಬೇಟಿ ಮಾಡಲು ಬಂದಿರುವುದರಿಂದ ಸಿಹಿ ತಿಂಡಿಯೊಂದಿಗೆ ಜೈಲಿಗೆ ಬೇಟಿ ನೀಡಿ ನಂತರ ವಾಪಸ್ ತೆರಳುವಾಗ ಕಾರಿನಿಂದ ಹೊರಗಿಳಿಯದೆ, ಮಾದ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ತೆರಳಿದ್ದಾರೆ.

Comments are closed.