ಮನೆಯ ಹಕ್ಕುಪತ್ರಕ್ಕೆ ಸಹಿ ಹಾಕಲು ಲಂಚ ಪಡೆದ ಶಿರಸ್ತೇದಾರ್…!

ಶಿರಸ್ತೇದಾರ್ ನೊಬ್ಬ ಮನೆಯ ಹಕ್ಕುಪತ್ರಕ್ಕೆ ಸಹಿ ಹಾಕಲು ಲಂಚ ಪಡೆದ ಘಟನೆಯ ದೃಶ್ಯ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ತಹಶೀಲ್ದಾರಿಗೆ ಕೊಡಬೇಕು ಎಂದು ಅಧಿಕಾರಿ ಶಾಂತಮ್ಮ ಎಂಬುವರಿಗೆ ಹಕ್ಕುಪತ್ರ ನೀಡಲು ಲಂಚ ಪಡೆದ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೌತವಳ್ಳಿಯ  ಶಾಂತಮ್ಮರ ಪುತ್ರ ಮೋಹನ್ ರಿಂದ ಲಂಚ ಪಡೆದ ಶಿರಸ್ತೇದಾರ್ ಸತ್ಯನಾರಾಯಣ ವಿರುದ್ಧ ಆರೋಪ ಮಾಡಲಾಗುತ್ತಿದೆ.

ಹಕ್ಕುಪತ್ರ ಪಡೆಯಲು ಎಷ್ಟು ಕೊಡಬೇಕು ಅಂತಾ ನಿಮಗೆ ಗೊತ್ತಿಲ್ವಾ..? ಎಂದು ಪ್ರಶ್ನೆ ಮಾಡಿದ್ದು ದೃಶ್ಯದಲ್ಲಿ ಸೆರೆಯಾಗಿದೆ. ಒಂದು ವಾರ ಸತಾಯಿಸಿ ಲಂಚ ಪಡೆದ ಬಳಿಕ ಶಾಂತಮ್ಮ ಪುತ್ರ ಮೋಹನ್ ಗೆ ಹಕ್ಕು ಪತ್ರವನ್ನು ಸತ್ಯನಾರಾಯಣ ನೀಡಿದ್ದಾನೆ.