ಕಿಚ್ಚ ಕೊಟ್ಟ ಶಾಕ್..! : ಬಿಗ್ ಬಾಸ್ ಮನೆಯಿಂದ ಪ್ರಿಯಾಂಕ, ಭೂಮಿ ಶೆಟ್ಟಿ ಔಟ್?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರೂ ಮನೆಯ ಸದಸ್ಯರಿಗೆ ಇದರ ಅರಿವಿರಲಿಲ್ಲ. ಹೀಗಾಗಿ ಕಿಚ್ಚ ಮನೆಯ ಸದಸ್ಯರನ್ನು ಸರಿಯಾಗಿಯೇ ಬೇಸ್ತು ಬೀಳಿಸಿದ್ದಾರೆ.

ಈ ವಾರ ಎಲಿಮಿನೇಷನ್ ಇಲ್ಲ ಎಂಬ ಅರಿವಿರದ ಸದಸ್ಯರು ಯಾರು ಹೊರ ಹೋಗುತ್ತಾರೋ ಎಂಬ ಭೀತಿಯಲ್ಲಿದ್ದರು. ಕೊನೆಯಲ್ಲಿ ಸುದೀಪ್ ಪ್ರಿಯಾಂಕ ಮತ್ತು ಭೂಮಿ ಶೆಟ್ಟಿ ಇಬ್ಬರೂ ಈ ವಾರ ಮನೆಯಿಂದ ಎಲಿಮಿನೇಟ್ ಆಗುತ್ತೀರಿ ಎಂದರು.

ಇದನ್ನು ಕೇಳಿ ಇಬ್ಬರೂ ಶಾಕ್ ಆದರಲ್ಲದೆ, ಅತ್ತು ಕರೆದು ಇನ್ನು ಮುಂದೆ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೊರ ಹೋಗಲು ಸಿದ್ಧರಾಗಿದ್ದರು. ಆ ವೇಳೆ ಕಿಚ್ಚ ಮತ್ತೊಂದು ಶಾಕ್ ಕೊಟ್ಟಿದ್ದು ಯಾರೂ ಹೊರಹೋಗಬೇಕಿಲ್ಲ ಎಂದರು. ಕಿಚ್ಚ ಕೊಟ್ಟ ಶಾಕ್ ಗೆ ಮನೆಯವರೆಲ್ಲಾ ಶಾಕ್ ಆದರು. ಸುಧಾರಿಸಿಕೊಳ್ಳಲು ಕೆಲವು ಸಮಯವೇ ಹಿಡಿಯಿತು. ಆದರೆ ಮನೆಯವರು ನಿರಾಳವಾಗಬೇಕಿಲ್ಲ. ಯಾಕೆಂದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಗ್ಯಾರಂಟಿ.