ಆಘಾತಕಾರಿ ಸುದ್ದಿ : ಮೈಸೂರು ದಸರಾ ಅಂಬಾರಿ ಹೊರುವ ಅರ್ಜುನನಿಗೆ ತಿನ್ನಲು ಮೇವಿಲ್ಲ..!

ಮೊನ್ನೆ ಮೊನ್ನೆಯಷ್ಟೇ ಹೃದಯಾಘಾತದಿಂದ ದಸರಾ ಆನೆ ದ್ರೋಣ ಸಾವನ್ನಪ್ಪಿದ ಕಹಿ ನೆನಪು ಮಾಸಿಲ್ಲ. ಇಂತಹ ಸಮಯದಲ್ಲೇ ಮೈಸೂರು ದಸರಾ ಅಂಬಾರಿ ಹೊರುವ ಅರ್ಜುನನಿಗೆ ತಿನ್ನಲು ಮೇವಿಲ್ಲ ಅನ್ನೋ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.

ಹೌದು…..ದ್ರೋಣನಂತೆ ಅರ್ಜುನನದ್ದು ದಾರುಣ ಕತೆಯಾಗಿದೆ. ಅರ್ಜುನನಿಗೆ ಶೆಡ್ ಇಲ್ಲ, ತಿನ್ನಲು ಮೇವಿಲ್ಲ. ಹೀಗಾಗಿ ತನ್ನ ಮೇವಿಗಾಗಿ ಕಿ.ಮೀ.ಗಟ್ಟಲೆ ಸುತ್ತಾಡಬೇಕಾದ ಪರಿಸ್ಥಿತಿ ಅರ್ಜುನ ಆನೆಗೆ ಎದುರಾಗಿದೆ.

ಸರ್ಕಾರದಿಂದ ದಸರಾ ಆನೆಗಳಿಗೆ ವಿಶೇಷ ಪ್ಯಾಕೇಜ್‍ ನೀಡಲಾಗ್ತಿದೆ. ಆದ್ರೂ ಲಕ್ಷ ಲಕ್ಷ ಹಣ ಎಲ್ಲಿ ಹೋಗ್ತಿದೆ ಎಂದು ತಿಳಿಯುತ್ತಿಲ್ಲ. ಹೀಗಾಗಿ ಸರ್ಕಾರದ ಹಣ ಎಲ್ಲಿ ಹೋಗ್ತಿದೆ ಎಂಬುದು ತನಿಖೆಯಾಗಬೇಕಿದೆ.

 

Leave a Reply