Covid 19 effect : ಟಿವಿ ಧಾರವಾಹಿಗಳ ಪ್ರಸಾರ ಇನ್ನೆಷ್ಟು ದಿನ ? ಶೂಟಿಂಗ್ ಬಂದ್…

ಕೊರೊನಾ ಭೀತಿಯಿಂದ ಇಡೀಯ ಭಾರತವೇ ಲಾಕ್‌ ಡೌನ್ ಆಗಿದೆ. ಮನೆಯಲ್ಲೇ ಕೂತು ಮಾಡುವುದೇನು? ಸಿನಿಮಾ ಮಂದಿರಗಳು ಈಗಾಗಲೇ ಬಂದ್ ಆಗಿ ಎರಡು ವಾರವಾಯ್ತು. ಈಗ ಧಾರವಾಹಿಗಳಷ್ಟೆ ಮನರಂಜನೆಯ ಸಾಧನಗಳು. ಆದರೆ ಅವೂ ಸಹ ಇನ್ನೆಷ್ಟು ದಿನ ಪ್ರಸಾರವಾಗುತ್ತವೆ?

ಎಲ್ಲಾ ರೀತಿಯ ಚಿತ್ರೀಕರಣಗಳನ್ನು ಬಂದ್ ಮಾಡಿ  2 ವಾರವಾಗುತ್ತಾ ಬಂತು. ಧಾರವಾಹಿಗಳ ಚಿತ್ರೀಕರಣಗಳು ಸಹ ಬಂದ್ ಆಗಿವೆ. ಈಗ ಬರುತ್ತಿರುವ ಧಾರವಾಹಿಗಳು ಮೊದಲು ಚಿತ್ರೀಕರಣ ಮಾಡಿಟ್ಟುಕೊಟ್ಟಂತಹಾ ಎಪಿಸೋಡ್‌ಗಳಷ್ಟೆ. ಮಾರ್ಚ್ 19 ರಂದೇ ಎಲ್ಲಾ ಚಿತ್ರೀಕರಣಗಳು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಧಾರವಾಹಿಗಳ ಚಿತ್ರೀಕರಣಗಳೂ ಸಹ ಬಂದ್ ಆಗಿವೆ ಆದರೆ ಹೆಚ್ಚು ದಿನ ಈ ಧಾರವಾಹಿಗಳು ಪ್ರಸಾರವಾಗುವುದಿಲ್ಲ.

ಎಲ್ಲಾ ಚಿತ್ರೀಕರಣ ಬಂದ್ ಮಾಡುವಂತೆ ಆದೇಶ ಹೌದು ಕೊರೊನಾ ಭಾರತಕ್ಕೆ ಪ್ರವೇಶವಿಟ್ಟ ಕೆಲವೇ ದಿನಗಳಲ್ಲಿ ಮುಂಜಾಗೃತೆಯಾಗಿ ಚಿತ್ರೀಕರಣಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಯಿತು. ರಾಜ್ಯದಲ್ಲೂ ಸಹ ಈ ಆದೇಶಗಳು ಬೇಗನೇ ಜಾರಿಗೆ ಬಂದವು.

ಹೆಚ್ಚು ಶೂಟಿಂಗ್ ಮಾಡಿಟ್ಟುಕೊಂಡಿದ್ದವು ಕೆಲವು ಧಾರವಾಹಿಗಳು ಚಿತ್ರೀಕರಣ ಬಂದ್ ಮಾಡುವ ಮುನ್ನಾ ಸಿಕ್ಕ ಕಡಿಮೆ ಕಾಲಾವಕಾಶದಲ್ಲಿ ಧಾರವಾಹಿ ಯುನಿಟ್‌ಗಳು ದಿನಕ್ಕೆರಡು ಶಿಫ್ಟ್‌ಗಳಂತೆ ಚಿತ್ರೀಕರಣ ಮಾಡಿ ದಿನವೊಂದಕ್ಕೆ ಎರಡು-ಮೂರು ಎಪಿಸೋಡ್‌ಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದರು.

ಕೆಲವು ಧಾರವಾಹಿಗಳ ಬಳಿ ಕೇವಲ ಈ ವಾರಕ್ಕಾಗುವಷ್ಟು ಮಾತ್ರವೇ ಸರಕು ಉಳಿದಿದೆ. ಇನ್ನು ಕೆಲವು ಧಾರವಾಹಿ ತಂಡದ ಬಳಿ ಏಪ್ರಿಲ್ ಮೊದಲ ವಾರ ಮುಗಿಸುವಷ್ಟು ಸರಕು ಇದೆ. ಉತ್ತಮ ಗುಣಮಟ್ಟದ ಧಾರವಾಹಿಗಳು ಒಂದು ಎಪಿಸೋಡ್ ಚಿತ್ರೀಕರಣ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಅವುಗಳ ಬಳಿ ಹೆಚ್ಚಿನ ‘ಎಪಿಸೋಡ್ ಬ್ಯಾಂಕ್’ ಇಲ್ಲ ಹಾಗಾಗಿ ಕೆಲವೇ ದಿನಗಳಲ್ಲಿ ಧಾರವಾಹಿಗಳು ಮರುಪ್ರಸಾರ ಆರಂಭವಾಗಲಿದೆ.