ಶ್ರೀ ಗುರು ಸಿದ್ದರಾಮ ಶಿವಯೋಗಿ ಜಯಂತಿ ಮಹೋತ್ಸವದಲ್ಲಿ ಶಾಸಕರ ಮಸ್ತ್ ಸ್ಟೆಪ್…

ಚಿಕ್ಕಮಗಳೂರಿನ ಶ್ರೀ ಗುರು ಸಿದ್ದರಾಮ ಶಿವಯೋಗಿ ಜಯಂತಿ ಮಹೋತ್ಸವದಲ್ಲಿ ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಮಸ್ತ್ ಡಾನ್ಸ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.

ಶಾಸಕ ಸುರೇಶ್ ಸ್ಟೆಪ್ ಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದಾರೆ.  ‘ಗಡಿಬಿಡಿ ಕೃಷ್ಣ… ಸುಮ್ನೆ ದಾರಿ ಬಿಡು ಕೃಷ್ಣ…’ ಹಾಡಿಗೆ ಶಾಸಕರು ಸಖತ್ ಸ್ಟೇಪ್ ಹಾಕಿದ್ದಾರೆ.

ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಗೇಟ್ ನಿಂದ ಸೊಲ್ಲಾಪುರ ದವರೆಗೆ ಮೆರವಣಿಗೆಯಲ್ಲಿ ಶಾಸಕರ ಜೊತೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ.