ಹಸಿವು ಮುಕ್ತ ಕರ್ನಾಟಕವೇ ನನ್ನ ಗುರಿ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನು ಹಸಿವು ಮುಕ್ತ ಮಾಡಲು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬೇಳೆ ಕಾಳುಗಳು, ಆನ್ ಲೈನ್ ಮೂಲಕ ಪಡಿತರ ಚೀಟಿ, ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ವಿತರಿಸುವ ಸೌಲಭ್ಯಕ್ಕೆ ಮುಖ್ಯಮಂತ್ರಿ ಗಳಿಂದ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಪೌಷ್ಠಿಕಾಂಶ ಇರುವ ತೊಗರಿ ಬೇಳೆಯನ್ನು ಫಲಾನುಭವಿಗಳಿಗೆ ಅರ್ಧ ಬೆಲೆಗೆ ನೀಡಲು ತೀರ್ಮಾನಿಸಲಾಗಿದೆ. ಬಹಳಷ್ಟು ಮಂದಿ ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಬೇಳೆ ನೀಡಲು ನಿರ್ಧರಿಸಿದೆ. ಮಕ್ಕಳಿಗೆ ಶಾಲೆಗಳಲ್ಲಿ ಹಾಲು ಕೊಡುತ್ತಿರುವುದರಿಂದ ಪೌಷ್ಟಿಕಾಂಶ ಕೊರತೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಫಲಾನುಭವಿಗಳಿಗೆ ಹಣ ಕೊಡಬೇಡಿ. ಆಹಾರ ಧಾನ್ಯಗಳನ್ನೇ ಕೊಡಿ ಎಂದು ಆಹಾರ ಸಚಿವರಿಗೆ ಸೂಚಿಸಿದ್ದೇನೆ. ಅದನ್ನೇ ಮುಂದುವರಿಸುತ್ತೇವೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ 15 ದಿನದಲ್ಲಿ ಪಡಿತರ ಚೀಟಿ ಸಿಗಲಿದೆ. ಎಲ್ಲಾ ಅರ್ಹರಿಗೂ ಪಡಿತರ ಚೀಟಿ ಸಿಗಬೇಕು ಎಂದು ತಿಳಿಸಿದರು.

Comments are closed.