ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಸುಮನ್

ಬಹುಭಾಷಾ ನಟಿ ಸುಮನ್ ರಂಗನಾಥನ್ ಅವರು ಉದ್ಯಮಿ ಸಜನ್ ಅವರ ಜೊತೆ ಸೋಮವಾರದಂದು ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ, ತೆಲಗು, ತಮಿಳು, ಹಿಂದಿ, ಭೋಜ್‍ಪುರಿ ಹೀಗೆ ಬಹುಭಾಷೆಗಳಲ್ಲಿ ಸಿನಿಮಾ ಮಾಡಿ ಮಿಂಚಿರುವ ಚಂದನವನದ ಚೆಲುವೆ ಸುಮನ್, ಉದ್ಯಮಿ ಸಜನ್ ಅವರನ್ನು ವರಿಸಿದ್ದಾರೆ. ಮೂಲತಃ ಕೊಡಗಿನವರಾದ ಸಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿಂದೆ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಹೇಳದ ಸುಮನ್ ಅವರು ಮದುವೆಯ ನಂತರ ಮಾಧ್ಯಮಗಳಿಗೆ ತಮ್ಮ ಲವ್ ಸ್ಟೋರಿ ತಿಳಿಸಿದ್ದಾರೆ.

ಸೋಮವಾರದಂದು ಖಾಸಗಿಯಾಗಿ ತಮ್ಮ ಆತ್ಮೀಯ ಬಳಗ ಹಾಗೂ ಕುಟುಂಬಸ್ಥರ ಆಶೀರ್ವಾದ ಪಡೆದು ಸಿಂಪಲ್ ಆಗಿ ಸಜನ್ ಅವರ ಜೊತೆ ಸುಮನ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಬಗ್ಗೆ ತಿಳಿದು ನವ ಜೋಡಿಗೆ ಶುಭಕೋರಲು ಮಾಧ್ಯಮದವರು ಅವರನ್ನು ಭೇಟಿಯಾದಾಗ ಬಹಳ ಉತ್ಸಾಹದಿಂದ ಸುಮನ್ ತಮ್ಮ ಪ್ರೇಮ್ ಕಹಾನಿ ಹಂಚಿಕೊಂಡಿರು.

ತಮ್ಮ ಪತಿ ಬಗ್ಗೆ ಮಾತನಾಡಿದ ಸುಮನ್, 8 ತಿಂಗಳ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು. ಕೆಲವು ಭೇಟಿ ನಂತರ ಸ್ನೇಹ ಬೆಳೆಯಿತು. ಹೀಗೆ ಭೇಟಿ ಮಾಡುತ್ತಾ ನಾವಿಬ್ಬರು ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ ಮಾಡಿದೆವು. ಬಳಿಕ ಇದು ಮದುವೆಯಾಗಲು ಸರಿಯಾದ ಸಮಯವೆಂದು ನಿರ್ಧರಿಸಿ, ಎರಡೂ ಕುಟುಂಬದವರ ಒಪ್ಪಿಗೆ ಪಡೆದು ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದರು.

Leave a Reply

Your email address will not be published.