ಸರ್.. ಪ್ಲೀಸ್.. ಸರ್.. ಮದುವೆ ಮಾಡ್ಸಿ ಸರ್.. ಪ್ಲೀಸ್… ನನಗೆ ಯಾವ ಹುಡುಗಿ ಸಿಗ್ತಾಯಿಲ್ಲ..

ವಯಸ್ಸು ಬಂದಾಗ ಎಲ್ಲರಿಗೂ ಮದುವೆಯಾಗೋ ಆಸೆ ಇದ್ದೇ ಇರುತ್ತೆ. ಅಂತೆಯೇ ಉತ್ತರ ಪ್ರದೇಶದಲ್ಲಿ 2 ಅಡಿ 3 ಇಂಚು ಉದ್ದದ ವ್ಯಕ್ತಿಯೊಬ್ಬ ತನಗೆ ಹುಡುಗಿ ಹುಡುಕಿ ಮದುವೆ ಮಾಡಿಕೊಡಿ ಅಂತಾ ಪೊಲೀಸರ ಮೊರೆ ಹೋದ ವಿಚಿತ್ರ ಪ್ರಸಂಗ ನಡೆದಿದೆ.

ಅಜೀಮ್ ಮನ್ಸೂರಿ ಎಂಬ ಎರಡು ಅಡಿ ಉದ್ದದ ವ್ಯಕ್ತಿ ತನಗೆ ತುರ್ತಾಗಿ ಹುಡುಗಿ ಹುಡುಕಿ, ಮದುವೆ ಮಾಡಿಸಿ ಎಂದು ಪೊಲೀಸ್ ಅಧಿಕಾರಿಗೆ ದೂರು ನೀಡಿ ಜೊತೆಗೆ ಮನವಿ ಕೂಡಾ ಮಾಡಿದ್ದಾರೆ.

ಐದನೇ ಕ್ಲಾಸಿಗೆ ವಿದ್ಯಾಭ್ಯಾಸ ಬಿಟ್ಟ ಅಜೀಮ್‍ ಗೆ ಪೋಷಕರು ಹುಡುಗಿ ಹುಡುಕಲು ನಿರಾಕರಿಸಿದ್ದಾರಂತೆ. ಇದ್ರಿಂದ ನೊಂದ ಆತ ಪೊಲೀಸರ ಮೊರೆ ಹೋಗಿದ್ದಾನೆ. ಅಜೀಮ್ ಮನವಿಯ ಮೇರೆಗೆ ಪೊಲೀಸ್ ಅಧಿಕಾರಿಗಳು ಆತನ ಮನೆಗೆ ಬಂದು ವಿಚಾರಿಸಿದಾಗ, ಪೋಷಕರು 2 ತಿಂಗಳು ಸಮಯವಕಾಶ ಕೊಡಿ ಅಂತಾ ಹೇಳಿದ್ದಾರೆ. ಒಂದು ವೇಳೆ ಪೋಷಕರು 2 ತಿಂಗಳೊಳಗೆ ಹುಡುಗಿ ಹುಡುಕದಿದ್ದರೆ, ಸಹಾಯ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಜೀಮ್‍ ತಂದೆ ನಸೀಮ್ ಮನ್ಸೂರಿ ಜನರಲ್ ಸ್ಟೋರ್ ನಡೆಸುತ್ತಿದ್ದು, ಎನ್‍ಜಿಒ ಒಂದರ ಅಧ್ಯಕ್ಷ ಕೂಡಾ ಆಗಿದ್ದಾರೆ. ಮಗನಿಗೆ ವಯಸ್ಸಾಗಿದ್ರೂ, ಆತ ಇನ್ನೂ ಮುಗ್ದ ಮಕ್ಕಳಂತೆ ಕಾಣ್ತಾನೆ. ಹೀಗಾಗಿ ಅವನಿಗೆ ಮದುವೆ ಮಾಡಲಾಗ್ತಿಲ್ಲ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಅಜೀಮ್ ಈ ವರ್ಷ ರಂಜಾನ್ ಹಬ್ಬವನ್ನು ತನ್ನ ಪತ್ನಿಯೊಂದಿಗೆ ಆಚರಿಸುವ ಕನಸು ಕಂಡಿದ್ದಾನೆ. ಹಾಗೆಯೇ ಮದುವೆಯಾಗಿ ಕುಟುಂಬವನ್ನು ಸಾಕ್ತೀನಿ ಎಂಬ ವಿಶ್ವಾಸ ಕೂಡಾ ಆತನಿಗಿದೆ.

Leave a Reply