ಲೇಔಟ್ ಒಂದರ ಒಳಚರಂಡಿಯಲ್ಲಿ ಸಿಕ್ತು ಮನುಷ್ಯನ ಅಸ್ತಿ ಪಂಜರಾ…!

ಒಳಚರಂಡಿಯಲ್ಲಿ ಮನುಷ್ಯನ ಅಸ್ತಿ ಪಂಜರಾ ಪತ್ತೆಯಾಗಿ ಜನರನ್ನು ಆತಂಕಕ್ಕೆ ಗುರಿ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಹರಿಹರೇಶ್ವರ ಲೇಔಟ್ ಬಳಿ ನಡೆದಿದೆ.

ಹೌದು…  ಯುಜಿಡಿ ಸಂಪರ್ಕ ಕಲ್ಪಿಸಲು ಛೇಂಬರ್ ತೆಗೆದಾಗ ಆಸ್ತಿಪಂಜರ ಪತ್ತೆಯಾಗಿದೆ. ಆರು ತಿಂಗಳ ಹಿಂದೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಅಸ್ಥಿ ಪಂಜರ ಯುವಕನದ್ದು ಎಂಬ ಸಂಶಯ ಬಂದಿದೆ.

ಕೊಲೆ ಮಾಡಿ ಛೇಂಬರ್ ಒಳಗೆ ಹಾಕಿದ್ದಾರೆಂದು ಸಂಶಯವಿದ್ದು, ಈ ಯುವಕನ ಗುರುತು ಮಾಥ್ರ ಪತ್ತೆಯಾಗಿಲ್ಲ. ಅಸ್ಥಿ ಪಂಜರ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳಿಸಲಾಗಿದ್ದು, ಪೊಲೀಸರು ಕೃತ್ಯದ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ.  ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.