ನಾಗರಹಾವಿನ ಜೊತೆ ಕೆರೆ ಹಾವಿನ ಸರಸ ಸಲ್ಲಾಪ : ಅಪರೂಪದ ದೃಶ್ಯ ಮೊಬೈಲ್ನಲ್ಲಿ ಸೆರೆ

ನಾಗರಹಾವಿನ ಜೊತೆ ಕೆರೆ ಹಾವಿನ ಸರಸ ಸಲ್ಲಾಪದ ಅಪರೂಪದ ದೃಶ್ಯ ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಹೆರೂರು ಕಿಬ್ಲಿ ಗ್ರಾಮದಲ್ಲಿ ಕಂಡಿದೆ.

ಕಿಬ್ಲಿ ಗ್ರಾಮದ ಅವಿನಾಶ್ ಎಂಬುವರ ತೋಟದಲ್ಲಿ ಎರಡು ಗಂಟೆಗೂ ಹೆಚ್ಚುಕಾಲ ನಾಗರಹಾವಿನ ಜೊತೆ ಕೆರೆ ಹಾವು  ಸರಸ ಸಲ್ಲಾಪದಲ್ಲಿ ನೃತ್ಯವಾಡಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಸರಸ ಸಲ್ಲಾಪದಲ್ಲಿ ತೊಡಗುವ ಹಾವುಗಳನ್ನು ಕಂಡು ಸ್ಥಳೀಯ ಗ್ರಾಮಸ್ಥರು ಭಯ ಹಾಗೂ ಆಶ್ಚರ್ಯಗೊಂಡಿದ್ದಾರೆ.

ಭಾರಿ ಗಾತ್ರದ ಹಾವುಗಳನ್ನು ಕಂಡು ಭಯಗೊಂಡ ತೋಟದ ಮಾಲೀಕ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.  ಅಪರೂಪದ ದೃಶ್ಯ ಸ್ಥಳೀಯರೂ ಕಣ್ತುಂಬಿಕೊಂಡಿದ್ದಾರೆ.