ಸೌರಭ್ ಸಿಂಗ್ ಶತಕ ಭಾರತಕ್ಕೆ ಅಲ್ಪ ಮುನ್ನಡೆ!

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್ ಸೌರಭ್ ಸಿಂಗ್ ಬಾರಿಸಿದ ಶತಕದ ನೆರವಿನಿಂದ ಭಾರತ 19 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯ 2ನೇ ಟೆಸ್ಟ್‌ ನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ವಿಧರ್ಭ ಅಂಗಳದಲ್ಲಿ ಗುರುವಾರ ನಡೆದ ಮೂರನೇ ದಿನದ ಪಂದ್ಯದಲ್ಲಿ 3 ವಿಕೆಟ್‌ಗೆ 153 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ, 9 ವಿಕೆಟ್‌ಗೆ 388 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 2 ವಿಕೆಟ್‌ಗೆ 34 ರನ್ ಕಲೆ ಹಾಕಿದೆ.

ಭಾರತದ ಪರ ಡೇರಿಲ್ ಹಾಗೂ ಸೌರಭ್ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು. ಡೇರಲ್ 55 ರನ್ ಬಾರಿಸಿ ಔಟಾದರು. ಈ ಜೋಡಿ 28.1 ಓವರ್‌ಗಳಲ್ಲಿ 97 ರನ್ ಸೇರಿಸಿತು. 6ನೇ ವಿಕೆಟ್‌ಗೆ ಸೌರಭ್ ಅವರನ್ನು ಸೇರಿಕೊಂಡ ಸಿದ್ಧಾರ್ಥ್ ಅಕ್ರೆ 22.3 ಓವರ್‌ಗಳಲ್ಲಿ 74 ರನ್ ಸೇರಿಸಿತು.

ಸೌರಭ್ ಸಿಂಗ್ ತಾಳ್ಮೆಯ ಬ್ಯಾಟಿಂಗ್ ನಡೆಸಿದರು. 292 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 109 ರನ್ ಬಾರಿಸಿದ ಇವರು ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ದ್ವಿತೀಯ ಇನಿಗ್ಸ್ ಆರಂಭಸಿದಿ ಇಂಗ್ಲೆಂಡ್ ತಂಡಕ್ಕೆ ಡೇರಿಲ್ ಹಾಗೂ ಹರ್ಷ ತ್ಯಾಗಿ ಶಾಕ್ ನೀಡಿದರು. ಫಲವಾಗಿ ಪ್ರವಾಸಿ ತಂಡ ಆರಂಭಿಕ ಆಘತಕ್ಕೆ ಒಳಗಾಯಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 374

ಭಾರತ ಮೊದಲ ಇನಿಂಗ್ಸ್ 9 ವಿಕೆಟ್ ನಷ್ಟಕ್ಕೆ 388 (ಡಿಕ್ಲೇರ್)

ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 2 ವಿಕೆಟ್‌ಗೆ 34. 

 

Comments are closed.