State BJP : ಯಡ್ಡೆ ಕೈ ಮೇಲೆ, ರಾಜ್ಯ ಬಿಜೆಪಿ ಕಾರ್‍ಯಕಾರಿಣಿಗೆ ವಿಜಯೇಂದ್ರ ನೇಮಕ ಸಾಧ್ಯತೆ..

ಮೈತ್ರಿ ಸರಕಾರ ಉರುಳಿಸಿ ಬಿಎಸ್ವೈ ಸರಕಾರ ತರುವಲ್ಲಿ ತೆರೆಮರೆಯ ರೂವಾರಿ ಬಿವೈ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ದೊಡ್ಡ ಹುದ್ದೆ ದೊರಕುವ ಸಾಧ್ಯತೆಗಳು ದಟ್ಟವಾಗಿದೆ.

ಸದ್ಯ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್‍ಯದರ್ಶಿಯಾಗಿರುವ ವಿಜಯೇಂದ್ರ ಅವರನ್ನು ಮತ್ತಷ್ಟು ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯ ಕಾರ್‍ಯಕಾರಿಣಿಯಲ್ಲಿ ಸ್ಥಾನ ಕಲ್ಪಿಸುವ ಚಿಂತನೆ ನಡೆದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ತಮ್ಮ ಪುತ್ರ ವಿಜಯೇಂದ್ರಗೆ ರಾಜ್ಯ ರಾಜಕಾರಣದಲ್ಲಿ ಭದ್ರ ನೆಲೆ ಕಲ್ಪಿಸುವ ಇರಾದೆಯಿದ್ದು ಅದರಂತೆ ಅವರನ್ನು ಪಕ್ಷದ ಮುಂಚೂಣಿ ನಾಯಕರನ್ನಾಗಿ ರೂಪಿಸುವ ಹಂಬಲ ಹೊಂದಿದ್ದಾರೆ.

ರಾಜ್ಯ ಬಿಜೆಪಿ ಘಟಕಗಳ ಪುನಾರಚನೆ ಪ್ರಕ್ರಿಯೆಗೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದ್ದು ಎಲ್ಲ ಎಂಟು ಘಟಕಗಳಿಗೆ ಹೊಸ ಮುಖಗಳನ್ನು ನೇಮಿಸುವ ಸಾಧ್ಯತೆಯಿದೆ. ಇದೇ ರೀತಿ ಮಂತ್ರಿಮಂಡಲದಲ್ಲಿ ಸ್ಥಾನ ಸಿಗದ ನಾಯಕರಿಗೆ ಪಕ್ಷದ ಜವಾಬ್ದಾರಿ ತಲೆಗೆ ಕಟ್ಟಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇಷ್ಟೆಲ್ಲ ಚಟುವಟಿಕೆಗಳ ನಡುವೆ ಹಾಲಿ ಪದಾಧಿಕಾರಿಗಳಲ್ಲಿ ಹಲವರು ತಮ್ಮ ಹುದ್ದೆ ಉಳಸಿಇಕೊಳ್ಳಲು ತೀವ್ರ ಲಾಬಿ ಶುರುವಿಟ್ಟುಕೊಂಡಿದ್ದಾರೆ ಎಂದೂ ಹೇಳಲಾಗಿದೆ.,