ಶಿಕ್ಷಕನ ಕಿರುಕುಳಕ್ಕೆ ವಿದ್ಯಾರ್ಥಿ ಆತ್ಮಹತ್ಯೆ : ಮರಣಪತ್ರ ಬರೆದಿಟ್ಟು ನೇಣಿಗೆ ಶರಣು

ಬೆಂಗಳೂರಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ. ಉತ್ತರಹಳ್ಳಿಯ ನಿವಾಸಿ ಧನುಷ್ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣವೇನು ಎಂಬುದು ಡೆತ್‌ನೋಟ್ ಮೂಲಕ ಬಹಿರಂಗಗೊಂಡಿದೆ.

ಶಿಕ್ಷಕರ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿ ಡೆತ್ ನೋಟ್ ನಲ್ಲಿ ಬರೆದಿದ್ದು ಹೀಗೆ ‘ ಶಾಲೆಯಲ್ಲಿ ಎಲ್ಲರ ಮುಂದೆ ನನ್ನನ್ನು ನಿಂದಿಸುತ್ತಾರೆ, ತನಗೆ ಹೊಡೆದಿದ್ದಾರೆ ಶಿಕ್ಷಕನ ಕಿರುಕುಳದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.  ಧನುಷ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಧನುಷ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.

ಶಿಕ್ಷಕ ಬಾಲಕೃಷ್ಣ ಎಂಬವವರ ವಿರುದ್ಧ ಡೆತ್ ನೋಟ್ ಬರೆಯಲಾಗಿದ್ದು, ಬಾಲಕೃಷ್ಣ ಎಂಬ ಶಿಕ್ಷಕ ಎಲ್ಲರ ಮುಂದೆ ನಿಂದಿಸಿ, ತನ್ನನ್ನು ಹೊಡೆದರು ಎಂಬ ಕಾರಣಕ್ಕೆ ವಿದ್ಯಾರ್ಥಿ ಮನನೊಂದಿದ್ದನು. ಅಲ್ಲದೇ ಶಿಕ್ಷಕನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸದ್ಯ ಈ ಘಟನೆ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಗನನ್ನು ಕಳೆದುಕೊಂಡ ಪೋಷಕರು ಇದೀಗ ಕಣ್ಣೀರಿಡುತ್ತಿದ್ದಾರೆ, ಆದರೆ ಮಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಮಗನ ಸಾವಿಗೆ ಕಾರಣವಾದ ಶಿಕ್ಷಕನನ್ನು ಬಂಧಿಸಬೇಕೆಂದು ಪೋಷಕರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published.