ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ನಲ್ಲಿತ್ತು ಮಾರಕಾಸ್ತ್ರಗಳು…!

ಮಂಗಳೂರು ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಗ್ ಪರಿಶೀಲನೆ ಬೆನ್ನಲ್ಲೆ ಹಾಸನ ಜಿಲ್ಲೆಯ ಚನ್ನರಾಯಪಟ್ಟದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಪ್ರಯಾಣಿಕರನ್ನು ಆತಂಕಕ್ಕೆ ಗುರಿ ಮಾಡಿದೆ.

ಹೌದು… ಬಸ್‌ನಲ್ಲಿ ಅಪರಿಚಿತರು ಬ್ಯಾಗ್ ಬಿಟ್ಟು ಹೋಗಿದ್ರು, ಅನುಮಾನ ಬಂದ ಪೊಲೀಸರು ಬಸ್‌ ನಿಲ್ದಾಣಕ್ಕೆ ಆಗಮಿಸಿ ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಹುಶಃ ಯಾರೋ ಪ್ರಯಾಣಿಕರು ಬ್ಯಾಗ್ ಬಿಟ್ಟು ಹೋಗಿರುವ ಅನುಮಾನ ಆರಂಭದಲ್ಲಿ ವ್ಯಕ್ತವಾಗಿತ್ತು. ಈ ಬಗ್ಗೆ ವಿಚಾರಣೆಗೆಂದು ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಯಾವುದೋ ಸುಪಾರಿ ಪಡೆದು ಕೊಲೆ ಮಾಡಲು ಬಂದಿದ್ದಾರೆಂಬ ಮಾಹಿತಿ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ರಾಮ್ ನಿವಾಸ್ ಸೆಪಟ್ ಸ್ಪಷ್ಟನೆ ನೀಡಿದ್ದಾರೆ. ಬ್ಯಾಗ್ ನಲ್ಲಿ ಎರಡು ಗನ್ ಗಳಿದ್ದವು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಯಾವುದೇ ಅನುಮಾನ ಬೇಡ. ಮಂಗಳೂರು ಬಾಂಬ್ ಪತ್ತೆ ಪ್ರಕರಣಕ್ಕೂ ಇದಕ್ಕೂ ಸಂಭಂದವಿಲ್ಲಾ. ಚಾಕು, ಡ್ರ್ಯಾಗನ್ ಸೇರಿ ಇನ್ನಿತರ ವಸ್ತುಗಳಿದ್ದವು. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಆರೋಪಿಗಳು ಹೊರ ಜಿಲ್ಲೆಯವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ರಾಮ್ ನಿವಾಸ್ ತಿಳಿಸಿದ್ದಾರೆ.