ಪೂನಾದ ಸೇನಾ ತರಬೇತಿಯಲ್ಲಿದ್ದ ಯುವಕ ಅನುಮಾನಾಸ್ಪದ ಸಾವು…!

ಸೇನಾ ತರಬೇತಿಯಲ್ಲಿದ್ಧ ಯುವಕ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ನಡೆದಿದೆ.

ಬೋಪಣ್ಣ (22) ಸಾವನ್ನಪ್ಪಿದ ಯುವಕ. ಪೂನಾದ ಸೇನಾ ತರಬೇತಿ ಶಿಬಿರದಲ್ಲಿದ್ದ ಬೋಪಣ್ಣ, ಪೂನಾದ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

 

ನಾನು ನನ್ನ ಸ್ವ ಇಚ್ಚೆಯಿಂದ ಸಾಯುತ್ತಿದ್ದೇನೆ. ಇದಕ್ಕೆ ಯಾರೂ ಹೊಣೆಯಲ್ಲ, ಯಾರಿಗೂ ಶಿಕ್ಷಿಸಬೇಕಾಗಿಲ್ಲ ಎಂದು ಬರೆದಿರುವ ಪತ್ರವೂ ಪತ್ತೆಯಾಗಿದೆ.
ಕೇವಲ ಎರಡು ಲೈನ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬೋಪಣ್ಣ ಸಂಬಂಧಿಕರು ಸದ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.