ಬೇವು ಕಹಿಯಾದ್ರು ಸೌಂದರ್ಯ ವಿಚಾರಕ್ಕೆ ತುಂಬಾನೇ ಸಿಹಿ : ಹೇಗೆ..? ಇಲ್ಲಿದೆ ಮಾಹಿತಿ…

ಬೇವು ತಿನ್ನಲು ತುಂಬಾ ಕಹಿಯಾದ್ರು ಸೌಂದರ್ಯ ವಿಚಾರಕ್ಕೆ ತುಂಬಾನೇ ಸಿಹಿ ಅನ್ನೋ ವಿಚಾರ ನಾವ್ಯಾರೂ ಕೂಡ ಮರಿಯೋ ಹಾಗಿಲ್ಲ. ಯಾಕೆಂದ್ರೆ ಬೇವಿನ ಚಮತ್ಕಾರವೇ ಅಂಥದ್ದು. ಯಾವುದೇ ಕ್ರೀಮ್ ಗಳು ತ್ವೆಚೆಯ ಮೇಲೆ ಮಾಡದ ಕೆಲಸವನ್ನ ಬೇವು ಬಹುಬೇಗನೆ ಮಾಡಿ ಮುಗಿಸುತ್ತದೆ.  ಅಲ್ಲದೇ ಇದನ್ನ ಬಹಳ ಹಿಂದಿನ ಕಾಲದಲ್ಲಿ ತ್ವಚೆಯ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಹಾಗಾದ್ರೆ ಬೇವು ಯಾವೆಲ್ಲಾ ಸಮಸ್ಯೆಗಳನ್ನ ನಿವಾರಿಸಬಲ್ಲದು ಅದಕ್ಕೆ ಇಲ್ಲಿದೆ ಮಾಹಿತಿ.

ಹದಿಹರಿಯದ ಹುಡುಗಿಯರಲ್ಲಿ ಕಾಡುವ ದೊಡ್ಡ ಸಮಸ್ಯೆ ಅಂದ್ರೆ ಮೊಡವೆ. ಮೊಡವೆ, ಎಂಥವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ ಬೇವು. ಹೌದು.. ಬೇವು ದೇಹಕ್ಕೆ ತಂಪು ಮತ್ತು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ತ್ವಚೆಯ ರಕ್ಷಣೆ ಮಾಡುತ್ತದೆ. ಬೇವು ನೆನೆಸಿ ಆ ನೀರನ್ನು ಸ್ನಾನಕ್ಕೆ ಬಳಸುವುದರಿಂದ ಮೊಡವೆ ಮತ್ತು ಚರ್ಮದ ಸಮಸ್ಯೆಗಳಿಂದ ದೂರವಿರಬಹುದು.

ಮೊಡವೆ ಸಮಸ್ಯೆಗೆ ಬೇವನ್ನು ಅನಾದಿಕಾಲದಿಂದಲೂ ಬಳಸಿಕೊಳ್ಳಲಾಗುತ್ತಿದೆ. ಬೇವು ಕುದಿಸಿ ಪೇಸ್ಟ್ ಮಾಡಿ ನಂತರ ಸೌತೇಕಾಯಿ ಹಾಗು ಮೊಸರಿನಿಂದ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದ ಮೊಡವೆ ಸಮಸ್ಯೆಯಿಂದ ಮುಕ್ತರಾಗಬಹುದು. ಮೊಡವೆಯ ಗುರುತುಗಳನ್ನ ತಡೆಯುತ್ತದೆ. ಒಣತ್ವಚೆಯವರಿಗೆ ಬೇವಿನ ಬಳಕೆ ಹೆಚ್ಚು ಸೂಕ್ತವಾಗಿರುತ್ತದೆ.

ತಲೆ ಹೊಟ್ಟು ನಿವಾರಣೆ ಕೂಡ ಬೇವು ಸಲೀಸಾಗಿ ಮಾಡುತ್ತದೆ. ತಲೆಯ ಬುಡಕ್ಕೆ ಹಚ್ಚುವುದರಿಂದ ಕೂದಲು ನಯವಾಗಿ ದಟ್ಟವಾಘಿ ಬೆಳೆಯಲು ಸಾಹಾಐವಾಗುತ್ತದೆ. ಜೊತೆಗೆ ಬ್ಲಾಕ್ ಹೇರ್ ಪಡೆಯಲು ಬೇವಿನ ಎಣ್ಣೆ ಉಪಯುಕ್ತವಾಗಿದೆ.