ಸಿನಿ ಪ್ರಿಯರಿಗೆ ಸಿಹಿ ಸುದ್ದಿ : ಮಾರ್ಚ್ ೧ರಿಂದ ಜೀನ ಹೊಸ ಮೂವಿ ಚಾನಲ್ ಪ್ರಸಾರ

ಬೆಂಗಳೂರು, ಮಾರ್ಚ್ ೧೮, ೨೦೨೦: ಕನ್ನಡ ಚಲನಚಿತ್ರ ಪ್ರೇಮಿಗಳ ಹೃದಯಗೆಲ್ಲುವ ಪ್ರಯತ್ನದಲ್ಲಿ ಮತ್ತು ಸರಿಸಾಟಿ ಇಲ್ಲದ ಚಲನಚಿತ್ರ ವೀಕ್ಷಣೆಯ ಅನುಭವದ ಭರವಸೆಯಲ್ಲಿ ಜೀ಼ಲ್‌ನ ಹೊಸ ಮೂವಿ ಚಾನಲ್, ಜೀ಼ ಪಿಚ್ಚರ್ ಮಾರ್ಚ್ ೧ರಿಂದ ಪ್ರಸಾರವಾಗುತ್ತಿದ್ದು, ತನ್ನ ವೀಕ್ಷಕರಿಗೆ `ಹಿಟ್ ದಿನದ ಫೀಲಿಂಗ್ ನೀಡುತ್ತಿದೆ.

ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಖ್ಯಾತಿ ಪಡೆದಿರೋ ಜೀ಼ ಪಿಚ್ಚರ್, ೩೫೦ಕ್ಕೂ ಹೆಚ್ಚು ಸಿನಿಮಾಗಳ ಸಂಗ್ರಹ ಹೊಂದಿದೆ. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ಗೆ ಪರ್ಯಾಯ ಹೆಸರಾಗಿದೆ. ಮೊದಲ ತಿಂಗಳು ೧೨ ದಿನಗಳಲ್ಲೇ ೧೨ ಸಿನಿಮಾಗಳನ್ನೂ ಪ್ರೀಮಿಯರ್ ಮಾಡುವ ಮೂಲಕ, ಜೀ಼ ಪಿಚ್ಚರ್ ಮನೆಯಲ್ಲಿ ಸಿನಿಮಾ ವೀಕ್ಷಣೆಯಅನುಭವವನ್ನು ಮರು ವ್ಯಾಖ್ಯಾನಿಸಲಿದೆ. ಮಾರ್ಚ್ ೧೪ರಿಂದ ಜೀ಼ ಪಿಚ್ಚರ್ ಪ್ರತಿನಿತ್ಯ ಸಂಜೆ ೭ ಗಂಟೆಗೆ ಒಂದು ಹೊಸ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡ್ತಿದೆ; ಇದು ಮಾರ್ಚ್ ೨೫ರವರೆಗೆ ಮುಂದುವರೆಯಲಿದೆ. ಈ ಚಲನಚಿತ್ರಗಳು ವಿಭಿನ್ನ, ವಿಶಿಷ್ಟ ಹಾಗೂ ಅಪರೂಪದ ಅನುಭವವನ್ನ ನೀಡುತ್ತಿದೆ. ಮೊದಲ ಬಾರಿಗೆಜೀ಼ ಪಿಚ್ಚರ್ ನಲ್ಲಿ ಪ್ರಸಾರವಾಗುತ್ತಿರೋ, ಥ್ರಿಲ್ಲರ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಮತ್ತುರೊಮ್ಯಾಂಟಿಕ್ ಸಿನಿಮಾಗಳು, ವೀಕ್ಷಕರಿಗೆ ಅವರ ಪ್ರತಿನಿತ್ಯದ ಸವಾಲುಗಳನ್ನು ಎದುರಿಸಲು ಸ್ಫೂರ್ತಿಯಾಗ್ತಿವೆ. ಅವರ ಪ್ರತಿನಿತ್ಯದ ಜೀವನವನ್ನು ಹಿಟ್‌ ಆಗಿಸುತ್ತಿವೆ.

ಈ ಹೊಸ ಸಿನಿಮಾ ಚಾನಲ್‌ತನ್ನ ಲಾಂಚ್‌ನಲ್ಲಿ, ತನ್ನ ಬ್ರಾಂಡಿಂಗ್ ನಲ್ಲಿ ಒಂದು ಟ್ಯಾಗ್ ಲೈನ್‌ ಅನ್ನೋ ಪ್ರಚಾರಕ್ಕಾಗಿ ಬಳಿಸಿಕೊಂಡಿದೆ. ಅದುವೆ `ಹಿಟ್ ದಿನದ ಫೀಲಿಂಗ್. ಈ ಹಿಟ್‌ ಅನುಭವವನ್ನು ನೀಡುವ ವಿಶಿಷ್ಟ ಬ್ರಾಂಡ್ ಫಿಲ್ಮ್ ಗಳನ್ನೂ ಕೂಡ ಈ ಚಾನಲ್‌ನಲ್ಲಿ ರಿಲೀಸ್ ಮಾಡಿದೆ. ಕನ್ನಡಿಗರ ಪ್ರತಿನಿತ್ಯದ ಅನುಭವಗಳನ್ನು ಮನಸ್ಸಿನಲ್ಲಿರಿಸಿಕೊಂಡ ತಯಾರಾಗಿರೋ ಈ ಎರಡು ಬ್ರಾಂಡ್‌ಫಿಲಂ ಗಳು(ಜಾಹೀರಾತುಗಳು)ಕನ್ನಡಿಗರ ಪ್ರೀತಿ ಮತ್ತು ಬಯಕೆಗಳನ್ನು ಅನಾವರಣಗೊಳಿಸಿವೆ. ಮೊದಲ ಬ್ರಾಂಡ್ ಫಿಲಂ (https://youtu.be/2DiNW1al-Tc) ನಲ್ಲಿ ವೃದ್ಧ ದಂಪತಿಗಳ ನಡುವಿನ ಸಹಜ ಪ್ರೀತಿಯನ್ನುಚಿತ್ರಿಸಲಾಗಿದೆ. ಈ ಬ್ರಾಂಡ್‌ಫಿಲಂ ಮೂಲಕ ಜೀ಼ ಪಿಚ್ಚರ್‌ನಲ್ಲಿಕನ್ನಡದಅಪರೂಪದ ರೊಮ್ಯಾಂಟಿಕ್ ಹಾಗೂ ಫ್ಯಾಮಿಲಿ ಎಂಟರ್‌ಟೈನಿಂಗ್ ಸಿನಿಮಾಗಳು ಪ್ರಸಾರವಾಗಲಿವೆ, ಈ ಮೂಲಕ ಪಿಚ್ಚರ್ ನೋಡುವವರ ದಿನವನ್ನ ಹಿಟ್ ಮಾಡಲಿವೆ ಅನ್ನೋ ಸಂದೇಶ ನೀಡಲಾಗಿದೆ. ಇನ್ನೂಎರಡನೇ ಬ್ರಾಂಡ್ ಫಿಲಂನಲ್ಲಿ (https://youtu.be/q2SqaLE-laA) ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗೆ ಲಂಚ ನೀಡಲು ಬರುವ ಹುಡುಗರಿಗೆ, ಫಿಲ್ಮಿ ಸ್ಟೈಲ್‌ನಲ್ಲಿ ಹೇಗೆ ಪೊಲೀಸ್‌ ಅಧಿಕಾರಿ ಉತ್ತರಿಸ್ತಾನೆ, ಅನ್ನೋದನ್ನತೋರಿಸಲಾಗಿದೆ. ಈ ಮೂಲಕ ಪವರ್‌ಫುಲ್ ಡೈಲಾಗ್‌ಗಳು, ಪಂಚಿಂಗ್ ಸೀನ್‌ಗಳಿರೋ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ, ಜೀ ಪಿಚ್ಚರ್‌ನಲ್ಲಿ ನೋಡುವ ವೀಕ್ಷಕರ ದಿನ ಕೂಡ ಫಿಲ್ಮಿಂ ಆಗಿರುತ್ತೆಅನ್ನೋ ಸಂದೇಶ ನೀಡಲಾಗಿದೆ. ಜೀ಼ ಪಿಚ್ಚರ್ ಮುಂಚೂಣಿಯ ಡಿಟಿಎಚ್ ಆಪರೇಟರ್‌ಗಳಲ್ಲಿ ಕೂಡಾ ಲಭ್ಯವಿದ್ದು ಟಾಟಾ ಸ್ಕೈ, ಏರ್‌ಟೆಲ್‌ ಡಿಟಿಎಚ್, ಡಿಶ್ ಟಿವಿ, ಡಿ೨ಎಚ್ ಮತ್ತಿತರೆ ಕೇಬಲ್ ಆಪರೇಟರ್‌ಗಳಲ್ಲಿ ದೊರೆಯುತ್ತದೆ.

ಮುಂಬರುವ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳು:

ಮಾರ್ಚ್ ೧೯- ಜಾಲಿ ಬಾರು ಮತ್ತು ಪೋಲಿ ಹುಡುಗರು:

ಕಾರಂಜಿ ಶ್ರೀಧರ್ ಅವರ ನಿರ್ದೇಶನ ಮತ್ತು ನಿರ್ಮಾಣದ ಈ ಚಲನಚಿತ್ರದಲ್ಲಿ ಬಹಳ ಪ್ರೀತಿಯಿಂದ ಬೆಳೆದ ಹುಡುಗ ಸಂತುವಿನ ಜೀವನವನ್ನು ಆಧರಿಸಿದ್ದು ಈ ಪಾತ್ರದಲ್ಲಿಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಂತೂ ಶ್ರೀಮಂತ ಬಡ್ಡಿ ವ್ಯಾಪಾರಿ ತಾಯಿಯ ಮಗನಾಗಿದ್ದು, ಆಕೆಯ ಕನಸು ಈತನನ್ನು ಶಾಸಕನನ್ನಾಗಿ ನೋಡುವುದು. ಅವನು ಅವನ ತಾಯಿಯಿಂದ ಸಾಲ ಪಡೆದು, ಬಡ ಹೆಣ್ಣುಗೌರಿ ಪಾತ್ರದ ಮಾನಸಿಯನ್ನು ಭೇಟಿಯಾದಾಗ, ಅವನ ಜೀವನ ಬದಲಾಗುತ್ತದೆ. ತಾಯಿಯ ಮುದ್ದಿನ ಮಗನಿಗೆ ಏನಾಗುತ್ತದೆಎನ್ನುವುದು ಈ ಚಿತ್ರದ ಮುಖ್ಯ ಕಥೆಯಾಗಿದೆ.

ಮಾರ್ಚ್ ೨೦, ಒಂದ್‌ಕಥೆ ಹೇಳ್ಲಾ:

ವೀಕ್ಷಕರನ್ನು ಸೀಟಿನ ತುದಿಯಲ್ಲಿಕೂರಿಸುವ ಹಾರರ್‌ಥ್ರಿಲ್ಲರ್ ಈ ಒಂದ್‌ಕಥೆ ಹೇಳ್ಲಾ ಚಿತ್ರ. ಬೆಂಗಳೂರಿನ ಐವರು ಮಿತ್ರರು ವೀಕೆಂಡ್‌ನಲ್ಲಿಎಂಜಾಯ್ ಮಾಡಲುಒಂದುತಾಣಕ್ಕೆ ತೆರಳುತ್ತಾರೆ. ಅವರ ಪ್ರಯಾಣದಲ್ಲಿ ಪ್ರತಿಯೊಬ್ಬರೂಒಂದು ಹಾರರ್‌ಕಥೆಯನ್ನು ಹೇಳುತ್ತಿರುತ್ತಾರೆ.ಅವರು ಹೇಳುವಅಂತಹುದೇಒAದು ಭಯ ಹುಟ್ಟಿಸುವ ಮನೆಯಲ್ಲಿ ಸೇರಿಕೊಳ್ಳುತ್ತಾರೆ, ಅಲ್ಲಿಅವರು ಕಥೆಗಳು ಮುಂದುವರಿಯುತ್ತವೆ. ನಿರ್ದೇಶಕಗಿರೀಶ್ ಜಿ. ಹಾರರ್ ಕಥೆಗಳ ಗುಚ್ಛ ಸೃಷ್ಟಿಸಿದ್ದು ಈ ಪರಿಕಲ್ಪನೆ ಸ್ಯಾಂಡಲ್‌ವುಡ್‌ನಲ್ಲಿ ಹೊಚ್ಚಹೊಸದು.

ಮಾರ್ಚ್ ೨೧, ಕಾಳಿದಾಸ ಕನ್ನಡ ಮೇಷ್ಟ್ರು:
ಕವಿರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಮೇಘನಾ ಗೌಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಾಸ್ಯದ ಸೆಲೆಯೊಂದಿಗೇ ಗಂಭೀರವಾದ ವಿಷಯ ಒಂದನ್ನ ಜನರಿಗೆತಲುಪಿಸುತ್ತಿದೆ. ಈ ಚಿತ್ರದಲ್ಲಿ ಮಧ್ಯಮ ವರ್ಗದ ಕಾಳಿದಾಸ(ಜಗ್ಗೇಶ್) ಸರ್ಕಾರಿ ಶಾಲೆಯಲ್ಲಿಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತ್ತಿರುತ್ತಾರೆ. ಅವರುತಮ್ಮದುರ್ಬಲ ಇಂಗ್ಲಿಷ್ ಭಾಷೆಯಿಂದ ತನ್ನ ಶ್ರೀಮಂತ ಪತ್ನಿಯಿಂದಅವಮಾನಕ್ಕೆ ಒಳಗಾಗುತ್ತಾನೆ. ಭ್ರಷ್ಟ ಸರ್ಕಾರ, ಸರ್ಕಾರಿ ಶಾಲೆಯನ್ನು ಮುಚ್ಚಲು ನಿರ್ಧರಿಸಿದಾಗ, ಕಾಳಿದಾಸ ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾನೆ ಎನ್ನುವುದು ಚಿತ್ರದ ಕಥೆ.

ಜೀ಼ ಪಿಚ್ಚರ್‌ನಲ್ಲಿಅತ್ಯಂತದೊಡ್ಡ ಸೂಪರ್ ಸ್ಟಾರ್‌ಗಳು ಮತ್ತುಅವರ ಸೂಪರ್ ಹಿಟ್ ಚಿತ್ರಗಳ ಮೂಲಕ ಮನರಂಜನೆ ಪಡೆಯುವ ಮೂಲಕ `ಹಿಟ್ ದಿನದ ಫೀಲಿಂಗ್’ ಪಡೆಯಿರಿ.

ಜೀ಼ ಪಿಚ್ಚರ್‌ನಲ್ಲಿ ಸಂಜೆ ೭.೦೦ಕ್ಕೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳನ್ನು ಮಿಸ್‌ಮಾಡ್ಬೇಡಿ.