Categories
Breaking News District State

ಕಾರವಾರದಲ್ಲಿ ಸಮುದ್ರಕ್ಕಿಳಿದು ಮೀನುಗಾರರ ಪ್ರತಿಭಟನೆ : ಇಬ್ಬರು ಅಸ್ವಸ್ಥ….!

ಕಾರವಾರ ವಾಣಿಜ್ಯ ಬಂದರು‌ ವಿಸ್ತರಣೆಗೆ ಕಾಮಗಾರಿ ಪ್ರಾರಂಭಕ್ಕೆ ವಿರೋಧಿಸಿದ ಮೀನುಗಾರರ ಪೈಕಿ ಇಬ್ಬರು ನೀರಿಗಿಳಿದು ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಆಕ್ರೋಶ ತಾರಕ್ಕಕ್ಕೇರಿದ್ದು ಪೋಲಿಸ್ ಮತ್ತು ಮೀನುಗಾರರ ಜಟಾಪಟಿ ಜೋರಾಯ್ತು.

ಕಳೆದ ಒಂದು ತಿಂಗಳ‌ ಹಿಂದೆಯೇ ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆಯ ಕಾಮಗಾರಿ ಆರಂಭವಾಗಬೇಕಿತ್ತು. ಆದ್ರೆ ಇಲ್ಲಿನ ಮೀನುಗಾರರು ಕಾಮಗಾರಿ ಪ್ರಾರಂಭಕ್ಕೆ ಸಾಕಷ್ಟು ವಿರೋಧ ಮಾಡಿ ಹತ್ತಯ ಹಲವು ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಕ್ಕೆ ತಡೆಯೊಡ್ಡಿದ್ದರು. ಈ ಹಿನ್ನಲೆಯಲ್ಲಿ ವಿಳಂಬವಾಗಿ ಇವತ್ತು ಖಾಕಿ ಸರ್ಪಗವಾಲಿನಲ್ಲಿ ಕಾಮಗಾರಿ ಆರಂಭ ಮಾಡಲಾಗಿತ್ತು. ಮೀನುಗಾರರ ಸಾಕಷ್ಟು ವಿರೋಧದ ಮದ್ಯೆ ಕಾಮಗಾರಿಗೆ ಕೈ ಹಾಕಿದ ಬಂದರು ಇಲಾಖೆ ಮೀನುಗಾರರ ಪ್ರತಿಭನೆಯ ಬಿಸಿ ತಟ್ಟಿಸಿಕೊಂಡ್ರು.

ಕಾಮಾಗಾರಿ ವಿರೋಧಕ್ಕೆ ಮುಂದಾದ ಮೀನುಗಾರರು ಪೋಲಿಸ್ ವಶಕ್ಕೆ

ವಿರೋಧಕ್ಕೆ ಮುಂದಾದ ಮೀನುಗಾರರನ್ನ ಪೋಲಿಸರು ಬಂದಿಸಿದ್ರೆ. ಮೀನುಗಾರ ಮಹಿಳೆಯರು ಪೋಲಿಸ್ ಸರ್ಪಗಾವಲನ್ನ ಮುರಿದು ಕಾಮಗಾರಿ ಸ್ಥಗಿತಕ್ಕೆ ಮುಂದಾದ್ರು.

ಒಂದೆಡೆ ಕಡಲ ತೀರದುದ್ದಕ್ಕೂ ಪೋಲಿಸ್ ಸರ್ಪಗಾವಲನ್ನ ಹಾಕಾಲಗಿತ್ತು..ಇನ್ನೊಂದೆಡೆ ಕಾಮಗಾರಿ ವಿರೋಧಕ್ಕೆ ಮುಂದಾದವರನ್ನ ಪೋಲಿಸರು ವಶಕ್ಕೆ ಪಡೆಯುತ್ತಿದ್ರು. ಮತ್ತೊಂದೆಡೆ ಬಂಧನ ಖಂಡಿಸಿ ಮೀನುಗಾರರ ವಿವಿಧ ಪ್ರತಿಭಟನೆ. ಪೋಲಿಸ್ ಸರ್ಪಗಾವಲಿನಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತೀವ್ರ ವಿರೋಧ. ಈ ದೃಶ್ಯಗಳು ಇವತ್ತಿನ ಕಾರವಾರ ವಾಣಿಜ್ಯ ಬಂದರು‌ವಿಸ್ತರಣೆ ವಿರೋಧದ ಹೈಲೈಟ್ಸ್ ಗಳಾಗಿದ್ದಾವು..

ಸಾಗರಮಾಲ ಯೋಜನೆಯಡಿ ಕಾರವಾರ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಆದ್ರೆ ಬಂದರು ವಿಸ್ತರಣೆಯಿಂದ ಟಾಗೋರ್ ಕಡಲ ತೀರಕ್ಕೆ ಹಾನಿಯಾಗಲಿದ್ದು ಮೀನುಗಾರಿಕೆ ಮೇಲೆ ಪರಿಣಾಮ ಬೀಳಲಿದ್ದು ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆ ಬೇಡ ಎನ್ನುವುದು ಮೀನುಗಾರರ ಆಗ್ರಹವಾಗಿತ್ತು. ಈ ಬಗ್ಗೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇವತ್ತು ಮೀನುಗಾರರ ಹೋರಾಟದ ನಡುವೆಯೇ ಪೋಲಿಸ್ ಸರ್ಪಗಾವಲಿನಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆ ಕಾವು ಜೋರಾಯ್ತು..

ಇನ್ನು ಮೀನುಗಾರರನ್ನ ವಶಕ್ಕೆ ಪಡೆಯುತ್ತಿದ್ದಂತೆ ಸಿಟ್ಟಿಗೆದ್ದ ಕೆಲ ಮೀನುಗಾರರು ಕಾರವಾರ ನಗರದಲ್ಲಿ ಒತ್ತಾಯ ಪೂರ್ವಕವಾಗಿ ಕಾರವಾರ ಬಂದ್ ಮಾಡಲು ಮುಂದಾದರು. ಅಂಗಡಿ ಮುಂಗಟ್ಟು ಬಂದ್ ಮಾಡಲು ಒತ್ತಾಯ ಮಾಡುತ್ತಿದ್ದ ಕೆಲವರನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದರು ಇದರಿಂದ ಕೆಲ ಕಾಲ ಪರಿಸ್ಥಿತಿ ಬಿಗುವಿತ ವಾತವಾರಣಕ್ಕೆ ತಿರುಗಿತ್ತು. ನಂತರ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿದರು. ಅಂಗಡಿ ಮುಂಗಟ್ಟುಗಳನ್ನ ವರ್ತಕರು ಸ್ವಯಂ ಘೋಷಿತವಾಗಿ ಬಂದ್ ಮಾಡಿದರು. ಇನ್ನು ಕಾರವಾರದ ಪೊಲೀಸ್ ಹೆಡ್ ಕ್ವಾಟರ್ ನಲ್ಲಿ ಬಂಧನಕ್ಕೊಳಗಾದ ಮೀನುಗಾರರನ್ನ ಇಡಲಾಗಿತ್ತು. ಪೊಲೀಸರ ಬಂಧನದಲ್ಲೇ ಮೀನುಗಾರರು ಪ್ರತಿಭಟನೆ ಮುಂದುವರೆಸಿದರು.

ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಯನ್ನ ಮುಂದುವರೆಸಿದ್ದು ಮೀನುಗಾರರು ತಮ್ಮ ಹೋರಾಟವನ್ನ ಮುಂದುವರೆಸಿದ್ದಾರೆ. ಇನ್ನೊಂದೆಡೆ ಇಂದು ಮೀನು ಮಾರಾಟ ಮಾಡುವುದನ್ನ ಸಹ ಮಹಿಳೆಯರು ಬಂದ್ ಮಾಡುವ ಮೂಲಕ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಇದೀಗ ಮೀನುಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ದಿನದಲ್ಲೂ ಕಾಮಗಾರಿ ವಿರೋಧಿಸಿ ಇನ್ನಷ್ಟು ಪ್ರತಿಭಟನೆ ನಡೆಯುವುದರಲ್ಲಿ ಅನುಮಾನವಿಲ್ಲ..

 

 

 

Categories
Breaking News District State

ಊಟ ಮಾಡಿದ ೪೦ ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಅಸ್ವಸ್ಥ…!

ನಿನ್ನೆ ರಾತ್ರಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಧಾರವಾಡದ  ಬಿ.ಡಿ.ಜತ್ತಿ ಹೋಮಿಯೋಪತಿ ಕಾಲೇಜಿನಲ್ಲಿ ನಡೆದಿದೆ.

ಹೌದು.. ಫುಡ್ ಫಾಯಿಜನ್ ಹಿನ್ನೆಲೆ ೪೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟ ಮಾಡಿದ ವಿದ್ಯಾರ್ಥಿಗಳಿಗೆ ವಾಂತಿ, ಬೇದಿ, ತಲೆ ಸುತ್ತು ಕಾಣಿಸಿಕೊಂಡಿದೆ.

ನಿನ್ನೆ ರಾತ್ರಿ ಊಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಇಂದು ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ಕಾರಣ ಅಸ್ವಸ್ಥಗೊಂಡಿರೋ ಮಾಹಿತಿ ಹೊರಹೋಗದಂತೆ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಬೆದರಿಕೆ ಹಾಕಿರೋ ಮಾಹಿತಿ ಲಭ್ಯವಾಗಿದೆ.

ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Categories
Breaking News District State

ಬಾವಿ ನೀರು ಕುಡಿದ 8 ವಿದ್ಯಾರ್ಥಿಗಳು ಅಸ್ವಸ್ಥ : ಅಲ್ಲೇ ಇದ್ದ ಕ್ಯಾನ್ ನಲ್ಲಿತ್ತು…

ಶಾಲೆಯ ಬಾವಿ ನೀರು ಕುಡಿದು ಎಂಟು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಪೆರ್ಲ ಎಂಬಲ್ಲಿರುವ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.

ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳ ಪೈಕಿ ಗಂಭೀರಾವಸ್ಥೆಯಲ್ಲಿರುವ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಬಾವಿ ನೀರಿಗೆ ಯಾರೋ ದುಷ್ಕರ್ಮಿಗಳು ವಿಷ ಬೆರೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್(13), 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್(14), ಯೋಗೀಶ್ (14), ರಾಧಾಕೃಷ್ಣ(14), 6ನೇ ತರಗತಿಗಳಾದ ವಿದ್ಯಾರ್ಥಿ ಸುದೀಪ್(12), ರಾಜೇಶ್ (12), ಮೋನಿಸ್( 12) ಹಾಗೂ ಶ್ರವಣ್(12) ಅಸ್ವಸ್ಥಗೊಂಡವರಾಗಿದ್ದಾರೆ.

ಲಭ್ಯ ಮಾಹಿತಿಗಳ ಪ್ರಕಾರ ಈ ದಿನ ಶಾಲಾ ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ನೀರು ಹಾಕುತ್ತಿದ್ದರು. ಈ ಸಮಯ ಎಂಟು ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದರೆನ್ನಲಾಗಿದೆ. ನೀರು ಕುಡಿಯುತ್ತಲೇ ಈ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಿಷಯ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಶಾರದಾ ಪರಿಶೀಲನೆ ಮಾಡಿದಾಗ ಬಾವಿ ಸಮೀಪ ಕ್ಯಾನ್ ಒಂದು ಕಂಡುಬಂದಿದೆ. ಈ ನಡುವೆ ಅಸ್ವಸ್ಥಗೊಂಡ 8 ವಿದ್ಯಾರ್ಥಿಗಳನನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ನಾಲ್ಕು ಮಕ್ಕಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ನಾಲ್ಕು ಮಕ್ಕಳನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ ವಿಷ ಮಿಶ್ರಿತ ನೀರು ಕುಡಿದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಾವಿಗೆ ಯಾರೋ ದುಷ್ಕರ್ಮಿಗಳು ವಿಷ ಸೇವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.