Categories
Breaking News District State

ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಸುರಿಯದೆ ಬಡ ಜನರಿಗೆ ವಿತರಿಸಿದ ಜನತೆ….

ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಸುರಿಯದೆ ಗ್ರಾಮಸ್ಥರು ಬಡ ಜನರಿಗೆ ವಿತರಿಸಿ ಮಾದರಿಯಾದ ಘಟನೆ ಮಂಡ್ಯ ಕೋಮನಹಳ್ಳಿಯಲ್ಲಿ ನಡೆದಿದೆ.

ಹುತ್ತಕ್ಕೆ ಹಾಲೆರೆದು ವ್ಯರ್ಥವಾಗೋ ಹಾಲನ್ನು ಸಂಗ್ರಹಿಸಿದ ಪ್ರಗತಿಪರ ರೈತನೊಬ್ಬ ಊರಿನವರಿಗೆ ಹಂಚಿಕೆ ಮಾಡಿದ್ದಾನೆ. ನೆನ್ನೆ ರಾತ್ರಿ‌ ಆ ಊರಿನಲ್ಲಿ ನಾಗರಪಂಚಮಿ ಆಚರಿಸುವ ಸಂಪ್ರದಾಯವಿತ್ತು. ಈ ವೇಳೆ ಕೋಮನಹಳ್ಳಿಯ ಪ್ರಗತಿಪರ ರೈತ ರೋಬೋ‌ ಮಂಜೇಗೌಡ ನೇತೃತ್ವದಲ್ಲಿ ಜನರ ಮನವೊಲಿಕೆ‌ ಮಾಡಿ ಈ ಉತ್ತಮ ಕೆಲಸ ಮಾಡಲಾಗಿದೆ.

ಹುತ್ತದ ಪೂಜೆಗೆ ಬಂದ ಗ್ರಾಮಸ್ಥರ ಮನವೊಲಿಸಿ ಹುತ್ತಕ್ಕೆ ಹಾಲು ಹಾಕದಂತೆ ಮನವಿ ಮಾಡಿ ಹಾಲು ಸಂಗ್ರಹಣೆ ಮಾಡಿದ್ದಾರೆ. ಮಂಜೇಗೌಡರ ಮನವೊಲಿಕೆ ಮೇರೆಗೆ ಪೂಜೆಗೆಂದು ತಂದಿದ್ದ ಹಾಲನ್ನು ಊರಿನ ಜನರಿಗೆ ಹಂಚಿಕೆ ಮಾಡಲಾಗಿದೆ.

ಹುತ್ತಕ್ಕೆ ಹಾಲು ಹುಯ್ದು ವ್ಯರ್ಥ ಮಾಡದಂತೆ ಮನವಿ ಮಾಡಿ ಗ್ರಾಮಸ್ಥರಿಗೆ ಅರಿವು ಮೂಡಿಸ್ತಿರೋ ಮಂಜೇಗೌಡ ನಿಜವಾಗಲೂ ನಾವೆಲ್ಲ ಹ್ಯಾಂಡ್ಸ್ ಆಪ್ ಹೇಳಲೇ ಬೇಕು.

Categories
Breaking News District State

ಹಜ್ ಯಾತ್ರೆ ಹೆಸರಿನಲ್ಲಿ ದೋಖಾ : 100 ಕ್ಕೂ ಹೆಚ್ಚು ಜನರಿಗೆ ಪಂಗನಾಮ!

ಹಜ್ ಯಾತ್ರೆ ಹೆಸರಿನಲ್ಲಿ ದೋಖಾ ಮಾಡಿ ಹಜ್-ಉಮ್ರಾ ಯಾತ್ರೆ ಹೆಸರಿನಲ್ಲಿ 100 ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ ಘಟನೆ ನಡೆದಿದೆ.

ಹೌದು… ಹಗಲು ರಾತ್ರಿ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣ, ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಲೂಟಿ ಮಾಡಿದ ಘಟನೆ ಶಿವಮೊಗ್ಗದ ಮುಜಾಕೀರ ಮತ್ತು ತಂಡದಿಂದ ನಡೆದಿದೆ.

ಜನರು ಲಕ್ಷಾಂತರ ರೂ. ಕಳೆದುಕೊಂಡು ಪವಿತ್ರ ಹಜ್ ಯಾತ್ರೆನೂ ಇಲ್ಲದೇ ಕೊರಗುತ್ತಿದ್ದಾರೆ. ಶಿವಮೊಗ್ಗದ ಬಸ್ ನಿಲ್ದಾಣ ಬಳಿ ತೂಬ ಇಂಟರ್ ನ್ಯಾಶನಲ್ ಟ್ರಾವಲ್ಸ್ ನ ಸೈಯದ್ ಮುಜಾಕೀರ್, ಎಂಬಾತನೇ ನಂಬಿದವರಿಗೆ ಲಕ್ಷಾಂತರ ರೂ. ದೋಖಾ ಮಾಡಿರುವ ಆರೋಪಿ.

ವಯಸ್ಸಾದ ಅಮಾಯಕರನ್ನು ಹಜ್ ಯಾತ್ರೆಗೆ ಕಳುಹಿಸುವುದಾಗಿ ನಂಬಿಸಿ ಅವರಿಂದ ಲಕ್ಷ ಲಕ್ಷ ರೂ. ಪೀಕಿರುವ ಖದೀಮ, ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿ ವಯಸ್ಸಾದ ಹಜ್ ಯಾತ್ರಿಕರಿಗೆ ಮೋಸ ಮಾಡಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದು, ದೂರು ಆಧಾರದ ಮೇಲೆ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.

Categories
Breaking News District Political State

ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…

ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ  ಮಾಡಿದ್ದಾರೆ.

ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ‌ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕ‌ಗುಬ್ಬಕ್ಕ‌ಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

 

Categories
Breaking News District Political State

ಮಂಡ್ಯ ಜನರಿಗೆ ಮೋಸ ಮಾಡಿದ್ರಾ ಮಾಜಿ ಸಿ.ಎಂ.ಕುಮಾರಸ್ವಾಮಿ….?

ಮಂಡ್ಯ ಜನರಿಗೆ ಮೋಸ ಮಾಡಿದ್ರಾ ಮಾಜಿ ಸಿ.ಎಂ.ಕುಮಾರಸ್ವಾಮಿ? ಮಂಡ್ಯ ಜಿಲ್ಲೆಗೆ ೮೫೦೦ ಕೋಟಿ ಕೊಟ್ಟಿದ್ದು ಚುನಾವಣಾ ಗಿಮಿಕ್ಕಾ? ಹೌದು ಎನ್ನುತ್ತಿವೆ ೨೦೧೯-೨೦ ಬಜೆಟ್ ದಾಖಲೆ ಪ್ರತಿಗಳು.

೨೦೧೯-೨೦ ಮಂಡಿಸಿದ ಬಜೆಟ್ ನಲ್ಲಿ ಮಂಡ್ಯ ನಗರದ ರಸ್ತೆ ಅಭಿವೃದ್ದಿಗೆ ೫೦ ಕೋಟಿ ಮತ್ತು ಮೈಷುಗರ್ ಸಕ್ಕರೆ ಕಾರ್ಖಾನೆಗೆ ೧೦೦ ಕೋಟಿ ಅನುದಾನ ಮಾತ್ರ ಉಲ್ಲೇಖವಾಗಿದೆ. ಆ ಮೀಸಲಿಟ್ಟ ಹಣ ಕೂಡ ಬಿಡುಗಡೆ ಕೂಡ ಆಗದೆ ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ. ಜಿಲ್ಲೆಗೆ ಬಿಡುಗಡೆ ಮಾಡಿದ್ದೆನ್ನೆನ್ನುವ ಅನುದಾನದ ಕಾಮಗಾರಿ ದಾಖಲೆ ತೋರಿಸಲಿ ಎಂದು ಕೈ ನಾಯಕ ಚಲುವರಾಯಸ್ವಾಮಿ ಸವಾಲು‌ ಹಾಕಿದ್ದಾರೆ.

ಮಗ ನಿಖಿಲ್ ಚುನಾವಣೆಗೆ ನಿಂತಾಗ ಜಿಲ್ಲೆಗೆ ೮,೫೦೦ಕೋಟಿ ಅಭಿವೃಧ್ಧಿ ಯೋಜನೆ ಕೊಟ್ಟಿದ್ದೇನೆಂದಿರುವ ಕುಮಾರಸ್ವಾಮಿ ಹೇಳಿಕೆ ಸದ್ಯ ಭಾರೀ ಅನುಮಾನಗಳಿಗೆ ಎಡೆ ಮಾಡಿದೆ.

Categories
Breaking News District State

ಸಮಾರಂಭದಲ್ಲಿ ಜೇನು ಹುಳಗಳ ಅವಾಂತರ : ಎಂಟು ಜನರಿಗೆ ಗಾಯ

ಸಮಾರಂಭದಲ್ಲಿ ಜೇನು ಹುಳಗಳು ಹಬ್ಬಿ ಸುಮಾರು ಏಳರಿಂದ ಎಂಟು ಜನರಿಗೆ ಗಾಯವಾದ ಘಟನೆ ಕೊಪ್ಪಳದ ಯಲಬುರ್ಗಾದಲ್ಲಿ ನಡೆದಿದೆ.

ಹೌದು..  ಕೊಪ್ಪಳ ಕಟ್ಟಡಗಳ ಅಡಿಗಲ್ಲು ಸಮಾರಂಭದಲ್ಲಿ ಅಡುಗೆ ಮಾಡುವ ಸಮಯದಲ್ಲಿ ಎದ್ದ ಜೇನು ಹುಳಗಳಿಂದ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಜೇನು ಹುಳುಗಳು ಕಚ್ಚಿ ಸುಮಾರು ಏಳರಿಂದ ಎಂಟು ಜನರಿಗೆ ಗಾಯವಾದ್ದು,  ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಶಾಸಕ ಹಾಲಪ್ಪ ಆಚಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Categories
Breaking News National Political

ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರ ಕೊಲೆ, ಎಂಟು ಜನರಿಗೆ ಗಾಯ…!

ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸ್ವಾಲ್ ನಗರದಲ್ಲಿ ನಡೆದಿದೆ. ಐವರಲ್ಲಿ ಕಾರ್ಪೋರೇಟರ್ ಕುಟುಂಬದ ಮೂವರು ಕೊಲೆಯಾಗಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಚಾಕು ಸಹಿತ ನುಗ್ಗಿದ ಮೂವರು ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆ ನಡೆದ ಗಂಟೆಯೊಳಗೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಿಜೆಪಿ ಕಾರ್ಪೋರೇಟರ್ ರವೀಂದ್ರ  ಖಾರಟ್ ಒಳಗೊಂಡಂತೆ ಇಬ್ಬರು ಮಕ್ಕಳು ಮತ್ತು ಹಿರಿಯ ಸೋದರ ಸುನಿಲ್ (55) ಹಾಗೂ ಓರ್ವ ಗೆಳೆಯ ಕೊಲೆಯಾದ ನತದೃಷ್ಟರು. ಇನ್ನು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರ್ಪೋರೇಟರ್ ಪತ್ನಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಒಟ್ಟು ಐವರು ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸಂಶಯದ ಮೇಲೆ ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವು ಸಿಕ್ಕಿದ್ದು, ಬಂಧಿತರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುವುದು ಸದ್ಯಕ್ಕೆ ತಿಳಿದು ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ದ್ವೇಷದಿಂದಲೇ ಕೊಲೆಗಳು ನಡೆದಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ ಎಂದು ಜಲಗಾಂವ್ ಡಿವೈಎಸ್‍ಪಿ ತಿಳಿಸಿದ್ದಾರೆ.

Categories
Breaking News District National Political State

ಮೋದಿ ಜನರಿಗೆ ಮಂಕುಬೂದಿ ಬಳಿಯುತ್ತಾರೆ – ಮಾಜಿ ಸಂಸದ ಆರ್ ಧೃವನಾರಾಯಣ್

ನರೇಂದ್ರ ಮೋದಿ ಜನರಿಗೆ ಮಂಕುಬೂದಿ ಬಳಿಯುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಆರ್ ಧೃವನಾರಾಯಣ್ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಗುಜರಾತ್ ಹಿಂದೆ ಇದೆ. 15 ವರ್ಷ ನರೇಂದ್ರ ಮೋದಿ ಅಲ್ಲಿ ಸಿಎಂ ಆಗಿದ್ದರು. ಕಾಶ್ಮೀರದ ವಿಚಾರವಾಗಿ ಕೇಂದ್ರದಿಂದ ಸುಳ್ಳು ಪ್ರಚಾರ ನಡೆಯುತ್ತಿದೆ. ಜಮ್ಮು ಕಾಶ್ಮೀರ ಪಾಕಿಸ್ತಾನದಲ್ಲಿತ್ತು. ನಾವು ಬಿಡುಗಡೆಗೊಳಿಸಿದ್ದು ಅಂತಾ ಪ್ರಚಾರ ಮಾಡುತ್ತಿದ್ದಾರೆ.

ಜಿಎಸ್‌ಟಿ ಮಾಡಿದ್ದು ನಮಗೂ ಖುಷಿ ಇದೆ. ಆದರೆ ಅದನ್ನು ಸರಿಯಾಗಿ ಜಾರಿಗೊಳಿಸಿಲ್ಲ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದೀರಾ. ಬ್ಲ್ಯಾಕ್ ಮನಿ ಖೋಟಾ ನೋಟ್ ನಕ್ಸಲ್ ಚಟುವಟಿಕೆ ನಿಲ್ಲಿಸಲು ನೋಟು ಅಮಾನೀಕರಣ ಮಾಡಲಾಗಿದೆ.
ಆದರೆ ಇದರಲ್ಲಿ ಯಾವುದು ಯಶಸ್ವಿಯಾಗಿಲ್ಲ. ಏಕತಾ ಅಭಿಯಾನದಿಂದ ವಿವಿಧತೆಯಲ್ಲಿ ಏಕತೆಗೆ ಭಂಗ ಮಾಡಿದ್ದಾರೆ. ಧರ್ಮ ಧರ್ಮಗಳ ನಡುವೆ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ.  ಕಾಶ್ಮೀರದಲ್ಲಿ ಕಾರ್ಪೊರೇಟ್‌ನವರಿಗೆ ಅನುಕೂಲ ಮಾಡಲು 370 ರದ್ದು ಮಾಡಿದ್ದಾರೆ. ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿದ್ದು ಯಾವುದು ಯಶಸ್ವಿಯಾಗಿಲ್ಲ ಎಂದು ಆರ್ ಧೃವನಾರಾಯಣ್ ಮೋದಿ ವಿರುದ್ಧ ಗುಡುಗಿದ್ದಾರೆ.

ಇದೇ ವೇಳೆ ಸಂಸದ ಪ್ರತಾಪ್‌ಸಿಂಹ ಮಾತಿಗೆ ಧೃವನಾರಾಯಣ್ ವಿರೋಧ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯಾಗಿ ಆ ಪದ ಬಳಕೆ ಸರಿಯಲ್ಲ. ಅದು ಸಂವಿಧಾನ ವಿರೋಧಿ ಪದ‌. ಮಹಿಷ ದಸರಾ ಕಳೆದ 6 ವರ್ಷದಿಂದ ಮಾಡುತ್ತಿದ್ದಾರೆ. ಪ್ರತಾಪ್‌ಸಿಂಹ ತಮ್ಮ ಹೇಳಿಕೆ ವಾಪಸ್ಸು ಪಡೆಯಬೇಕು ಎಂದಿದ್ದಾರೆ.

ಎಸ್.ಟಿ ಸೋಮಶೇಖರ್ ಪದ ಬಳಕೆಗೆ ಮಾಜಿ ಸಂಸದ ಧೃವನಾರಾಯಣ್ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷರ ವಿರುದ್ದ ಏಕವಚನ‌ ಪ್ರಯೋಗ ಸರಿಯಲ್ಲ. ಎಸ್.ಟಿ ಸೋಮಶೇಖರ್ ಪಕ್ಷದಲ್ಲಿದ್ದಾಗ ಒಂದು ಮಾತು ಆಡಲಿಲ್ಲ. ಈ ರೀತಿಯಾದ ನಡವಳಿಕೆ ಸರಿಯಲ್ಲ. ಜನರಿಗೆ ಆಗಲೇ ರಾಜಕಾರಣಿಗಳ ಬಗ್ಗೆ ತಪ್ಪು ಅಭಿಪ್ರಾಯ ಇದೆ. ಆದ್ದರಿಂದ ಮಾತನಾಡುವ ಮುನ್ನ ಎಚ್ಚರದಿಂದ ಇರಬೇಕು ಎಂದು  ಮಾಜಿ ಸಂಸದ ಆರ್.ಧೃವನಾರಾಯಣ್ ಹೇಳಿದ್ದಾರೆ.

Image result for ಮುನಿಯಪ್ಪ

ಪಕ್ಷದಲ್ಲಿ ಮೂಲ ಕಾಂಗ್ರೆಸ್ ವಲಸೆ ಕಾಂಗ್ರೆಸ್ ಇಲ್ಲ. ಎಲ್ಲರೂ ಒಂದೇ. ನಾಲ್ಕು ಗೋಡೆ ಒಳಗಡೆ ಸಭೆಯಲ್ಲಿ ಸಣ್ಣ ಪುಟ್ಟ ಗೊಂದಲಗಳ ಬಗ್ಗೆ ಚರ್ಚೆ ಆಗಿದೆ. ಸಿದ್ದರಾಮಯ್ಯ ಮುನಿಯಪ್ಪ ವಾಕ್ಸಮರ ವಿಚಾರಕ್ಕೆ ಪ್ರತಿಕ್ರಿಸಿ,
ಇಬ್ಬರು ಸೀನಿಯರ್‌ಗಳ ನಡುವೆ ಮಾತು ಆಗಿರಬಹುದು. ಇಬ್ಬರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದೆಲ್ಲವನ್ನೂ ನಾವು ಸರಿಪಡಿಸಿಕೊಳ್ಳುತ್ತೇವೆ. ಮುನಿಯಪ್ಪ ಅವರ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸುವ ಕೆಲಸ ಪಕ್ಷ ಮಾಡಲಿದೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅನ್ನೋದನ್ನು ನಾವು ಒಪ್ಪಲ್ಲ  ಎಂದಿದ್ದಾರೆ.

Categories
Breaking News District Political State

ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ : ಬಿಎಸ್ ವೈ ಗೆ ತಾಕತ್ತೇ ಇಲ್ಲ – ಬಿಜೆಪಿ ವಿರುದ್ಧ ಸಿದ್ದು ಗರಂ

ಬೆಳಗಾವಿಯ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.

ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ‌ ವಿಫಲವಾಗಿದೆ. ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲು ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದೇವೆ‌. ಇದು ನಮ್ಮ ಹೋರಾಟದ ಪ್ರಾರಂಭ. 105 ವರ್ಷಗಳ ನಂತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ. ಉತ್ತರ ಕರ್ನಾಟಕದಲ್ಲಿ ಬಹಳದೊಡ್ಡ ಪ್ರಮಾಣದ ಹಾನಿಯಾಗಿದೆ. 103 ತಾಲ್ಲೂಕುಗಳ ಜನರು ಪ್ರವಾಹಕ್ಕೆ ತುತ್ತಾಗಿ ಬೆಳೆ, ಮನೆ, ಚರಾಸ್ತಿ ಕಳೆದುಕೊಂಡಿದ್ದಾರೆ‌. ಏಳರಿಂದ ಎಂಟು ಲಕ್ಷ ಜನರು ಬೀದಿ ಪಾಲಾಗಿದ್ದಾರೆ.

ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ಬಂದಿಲ್ಲ‌. ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಯಡಿಯೂರಪ್ಪರನ್ನು ಟೀಕಿಸಲು ನಾವು ಪ್ರತಿಭಟನಾ ಸಭೆ ನಡೆಸುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಒತ್ತಾಯ ಮಾಡುತ್ತಿದ್ದೇವೆ. ಯಡಿಯೂರಪ್ಪನವರು ಏನೂ ನಷ್ಟವೇ ಆಗಿಲ್ಲ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ನಿಮ್ಮದು ಮನುಷ್ಯ ಚರ್ಮವೋ ಎಮ್ಮೇ ಚರ್ಮವೋ ಗೊತ್ತಾಗುತ್ತಿಲ್ಲ. ಕೇಂದ್ರ ಸಚಿವರ ಪ್ರವಾಸದಿಂದ ನಯಾಪೈಸೆ ಪ್ರಯೋಜನವಾಗಿಲ್ಲ‌. ಜನರಿಗೆ ಸ್ಪಂಧಿಸಲು ಆಗದಿದ್ದರೆ ನಿವ್ಯಾಕೆ ಅಧಿಕಾರದಲ್ಲಿ ಇರಬೇಕು? ಅಧಿಕಾರ ನಡೆಸಲು ಆಗದಿದ್ದರೆ ಕೆಳಗೆ ಇಳಿಯಿರಿ. ನಾವು ಬಂದು ಜನರ ಕಷ್ಟ ಪರಿಹಾರ ಮಾಡುತ್ತೇವೆ. ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ ಬಂದಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಅನ್ನಭಾಗ್ಯ ಯೋಜನೆಯ ಪಡಿತರದಲ್ಲಿ ಕಡಿತ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಹೊರಟಿದ್ದರು. ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ‌. ಪ್ರಧಾನಿ ಮೋದಿಯವರಿಗೆ ರಾಜ್ಯಕ್ಕೆ ಬಂದು ಜನರ ಕಷ್ಟ ಕೇಳಲು ಆಗಿಲ್ಲ. ಅಮೆರಿಕಕ್ಕೆ ಹೋಗಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತಿದ್ದಾರೆ‌‌. ಮುಂದಿನ ವರ್ಷ ಅಮೆರಿಕದಲ್ಲಿ ಚುನಾವಣೆಯಿದ್ದು ಡೊನಾಲ್ಡ್ ಟ್ರಂಪ್ ಪರ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕಾಕ್ಕೆ ಹೋಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ‌‌. ರಾಜ್ಯದಲ್ಲಿ ಸರ್ವನಾಶ ಆಗುತ್ತಿದ್ದರೂ ಇಲ್ಲಿಗೆ ಬರುತ್ತಿಲ್ಲ‌. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಹೋರಾಟಗಾರ ಅಂತೀರಲ್ಲಾ, ರೈತರ ಕಷ್ಟ ಕಣ್ಣಿಗೆ ಕಾಣಲ್ವಾ. ಕೇಂದ್ರದಿಂದ ಒಂದೇ ಒಂದು ರೂಪಾಯಿ ಪರಿಹಾರ ತರಲು ಆಗಿಲ್ಲ.

ಸಂಸದ ತೇಜಸ್ವಿ ಸೂರ್ಯ ಒಬ್ಬ ಅಪ್ರಬುದ್ಧ ರಾಜಕಾರಣಿ. ನನ್ನ ಮಗನಿಗಿಂತ ಸಣ್ಣ ವಯಸ್ಸಿನವನು, ಅವನಿಗೆ ಜನರ ಸಮಸ್ಯೆ ಗೊತ್ತಿಲ್ಲ. ನೆರೆಯಿಂದ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಅಂತಾ ನೀವೇ ಒಪ್ಪಿಕೊಂಡಿದ್ದೀರಲ್ಲಪ್ಪ. ಬಿಜೆಪಿ ಕಾರ್ಯಕರ್ತರು ಹೇಳಿದವರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಮನೆ ಕಳೆದುಕೊಂಡವರಿಗೆ ಒಂದೇ ಒಂದು ಶೆಡ್ ನಿರ್ಮಿಸಿ ಕೊಟ್ಟಿಲ್ಲ. ಸುಳ್ಳು ಹೇಳಿ ಜನಗಳಿಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲ‌. ಯಡಿಯೂರಪ್ಪನವರೇ ನಿಮಗೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ಖುರ್ಚಿಬಿಟ್ಟು ಕೆಳಗೆ ಇಳಿಯಿರಿ‌. ಇಪ್ಪತ್ತೈದು ಕೋಟಿ ಕೊಟ್ಟು ಶಾಸಕರನ್ನು ಖರೀದಿಸಿದ್ರಿ‌. ಆಪರೇಷನ್ ಕಮಲ‌ ಮಾಡಿ ಅಧಿಕಾರಕ್ಕೆ ಬಂದ್ರಿ.
ಯಡಿಯೂರಪ್ಪನವರನ್ನು ನೋಡಿದ್ರೆ ನನಗೆ ಅಯ್ಯೋ ಅನಿಸುತ್ತೆ. ಯಡಿಯೂರಪ್ಪನವರಿಗೆ ತಾಕತ್ತೇ ಇಲ್ಲ. ಇಸ್ರೋಗೆ ಬಂದಿದ್ದ ಪ್ರಧಾನಿಗಳು ಯಡಿಯೂರಪ್ಪರನ್ನು ಕಣ್ಣೆತ್ತಿಯೂ ನೋಡಿಲ್ಲ.

ಯಡಿಯೂರಪ್ಪನವರೇ ರೈತರ ಸೊಸೈಟಿ ಸಾಲ, ಬ್ಯಾಂಕ್‌ಗಳ ಸಂಪೂರ್ಣ ಸಾಲ ಮನ್ನಾ ಮಾಡಿ. ಈಶ್ವರಪ್ಪ ಪರಿಹಾರ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇ ಹೆಚ್ಚು ಅಂತಾನೆ. ಅವಾ ಮಾತ್ರ ನೋಟ್ ಎಣಿಸುವ ಮಷೀನ್ ಇಟ್ಕೊಂಡವನೆ ಗಿರಾಕಿ. ಇಷ್ಟು ಮಾನಗೆಟ್ಟವರು, ಲಜ್ಜೆಗೆಟ್ಟವರು, ಜನ ವಿರೋಧಿಗಳನ್ನು ನಾನು ನೋಡಿರಲಿಲ್ಲ‌. ಬೆಳಗಾವಿಯಲ್ಲಿಯೇ ವಿಧಾನಸಭೆ ಅಧಿವೇಶನ ನಡೆಯಬೇಕು. ಮಿಸ್ಟರ್ ಯಡಿಯೂರಪ್ಪ ಬೆಳಗಾವಿಯಲ್ಲಿ ಅಧಿವೇಶನ ಮಾಡಿ. ನೆರೆ ಪರಿಹಾರದ ಬಗ್ಗೆ ಚರ್ಚಿಸುವಂತೆ ಅಧಿವೇಶನದಲ್ಲಿ ಪಟ್ಟು ಹಿಡಿಯುತ್ತೇವೆ. ರಾಜ್ಯಾದ್ಯಂತ ಕಾನೂನು ಉಲ್ಲಂಘನೆ ಚಳುವಳಿ ಮಾಡಬೇಕಾಗುತ್ತೆ‌. ಈ ಬಾರಿ ಅಸೆಂಬ್ಲಿ ನಡೆಯಲು ಬಿಡಲ್ಲ‌.

ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದರೆ ಉತ್ತರ ಕರ್ನಾಟಕದ ಜನರಿಗೆ ಮಾಡುವ ದ್ರೋಹ. ಮೋದಿ, ಮೋದಿ ಅಂತಾ 25 ಜನರನ್ನು ಗೆಲ್ಲಿಸಿಕೊಟ್ರು. ಮೋದಿ ಎಲ್ಲಿದ್ದಾರೆ ಈಗ ? ಎಲ್ಲ ಯುವಕರ ನೌಕರಿ ಕಳೆದ್ರು. ದೇಶದ ಹಣಕಾಸಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ, ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಪ್ರವಾಹ ಪರಿಹಾರಕ್ಕೆ ದುಡ್ಡು ಕೊಡದ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿದ್ದಾರೆ. ಅಭಿವೃದ್ಧಿ ಅನುದಾನವನ್ನು ನೆರೆ ಪರಿಹಾರಕ್ಕೆ ಬಳಸಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳುತ್ತೆ.

ಕಾಂಗ್ರೆಸ್ ಪಕ್ಷ ಬಡವರು, ದಲಿತರು, ಮಹಿಳೆಯರ ಪಕ್ಷ‌. ಪ್ರವಾಹ ಸಂತ್ರಸ್ತರು ಹೆದರುವ ಅವಶ್ಯಕತೆಯಿಲ್ಲ, ನಾವು ನಿಮ್ಮ ಜೊತೆ ಇದ್ದೇವೆ. ನಿಮಗಾಗಿ ಜೈಲಿಗೆ ಹೋಗಲೂ ಸಿದ್ಧ, ಜೈಲ್ ಭರೋ ಚಳುವಳಿ ಮಾಡುತ್ತೇವೆ. ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.