Categories
Breaking News District Political State

ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ…

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆಯಲಾಗಿದೆ.

ಮೈಸೂರಿನ ಹಿರಿಯ ನ್ಯಾಯವಾದಿ ಪಿ ಜಿ ರಾಘವೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಇವರು ಬರೆದು ಪತ್ರದಲ್ಲಿ ಹೀಗಿದೆ..

ಸಿದ್ದರಾಮಯ್ಯ ಕಾನೂನು ಪದವೀಧರರು. ವಕೀಲರಾಗಿದ್ದವರು ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲರು. ಅವರ ಹೇಳಿಕೆಯನ್ನು ಮಾಧ್ಯಮದ ಮುಂದೆ ಹೇಳುವ ಬದಲು. ಅವರೇ ಕರಿಕೋಟು ಧರಿಸಿ ಆಪಾದಿತೆ ನಳಿನ ಪರ ವಕಾಲತ್ತು ವಹಿಸಲಿ.

ಆಕೆಯ ವಿರುದ್ದ ಪ್ರಕರಣ ರದ್ದುಗೊಳಿಸುವಂತೆ ವಾದ ಮಂಡಿಸಿ. ಪ್ರಕರಣ ದಾಖಲಿಸಿದ ಪೊಲೀಸರು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ. ಆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ಆಪಾದತೆ ನಳಿನಿಗೆ ಕೊಡಿಸಲಿ. ಸಂವಿಧಾನಬದ್ದವಾಗಿ ಹೋರಾಟ ನಡೆಸಿ ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಪಿ.ಜೆ.ರಾಘವೇಂದ್ರ ಬಹಿರಂಗ ಆಹ್ವಾನ ಮಾಡಿದ್ದಾರೆ.

Categories
Breaking News District Political State

ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…

ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ  ಮಾಡಿದ್ದಾರೆ.

ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ‌ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕ‌ಗುಬ್ಬಕ್ಕ‌ಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

 

Categories
Breaking News District Political State

ಬಾಗಲಕೋಟೆಯಲ್ಲಿ ಆತಂಕ ತಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ದೂರಿನ ಪತ್ರ…

ಬಾಗಲಕೋಟೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ದೂರಿನ ಪತ್ರ ಸದ್ಯ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಜಮಖಂಡಿ ಪಟ್ಟಣದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಶಂಕೆ ವ್ಯಕ್ತಪಡಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಈ ಸಂಭಂದ ಜಿಲ್ಲಾಧಿಕಾರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದೆ. ಜಮಖಂಡಿ ಪಟ್ಟಣದ ಸಾಂತ್ವನ ಕೇಂದ್ರದ ವಿರುದ್ದ ನಾಲ್ವರು ಸದಸ್ಯರ ಸಮಿತಿ ಆರೋಪ ಮಾಡಿ ಸೆ.೬ರಂದು ಡಿಸಿಗೆ ಪತ್ರ ಬರೆದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಜಮಖಂಡಿ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರೇಖಾ ವಿರುದ್ದ  17 ವಷ೯ದ ಬಾಲಕಿಯನ್ನ 7ಲಕ್ಷ ರೂಪಾಯಿಗೆ ಬೇರೆ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಮಾಡಿದೆ ಸಮಿತಿ.

ಅಲ್ಲದೆ ಈ ಮೊದಲು ಮಕ್ಕಳ ಸಾಗಾಣಿಕೆ ಆಗಿರೋ ಬಗ್ಗೆ ಮತ್ತು  ಸಾಂತ್ವನ ಕೇಂದ್ರದಲ್ಲಿದ್ದ ಸಂತ್ರಸ್ಥರನ್ನ ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಆರೋಪಿ ರೇಖಾ ಕಾಂತಿ  ಮಾಜಿ ಸಚಿವೆ ಉಮಾಶ್ರೀ, ರಾಮಲಿಂಗಾರೆಡ್ಡಿ ಜೊತೆ ಫೋಟೋ ತಗೆಸಿಕೊಂಡಿರೋದು ವೈರಲ್ ಆಗಿವೆ.

 

Categories
Breaking News District State

ದೇವರಿಗೆ ಲೇಟರ್ ಬರೆದ ಭಕ್ತ : ಹುಂಡಿಯಲ್ಲಿ ಹಣದೊಂದಿಗೆ ಸಿಕ್ಕ ಪತ್ರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ದ ಆಂಜನಾದ್ರಿ ಬೆಟ್ಟದ ಹುಂಡಿಯಲ್ಲಿ ಪತ್ರವೊಂದು ಪತ್ತೆಯಾಗಿದೆ. ಪತ್ರವನ್ನು ಓದಿದ ಅಧಿಕಾರಿಗಳು ಗಾಬರಿಯಾಗಿದ್ದಾರೆ.

ಹೌದು… ಅಷ್ಟಕ್ಕೂ ಆ ಪತ್ರದಲ್ಲಿ ಏನಿತ್ತು ಗೊತ್ತಾ..? ಹುಂಡಿ ಹಣ ಕೌಟಿಂಗ್ ವೇಳೆ ಭಕ್ತನ ವಿಚಿತ್ರ ಪತ್ರವನ್ನು ಮಲ್ಲಿಕಾರ್ಜುನ ತೋರಣಗಲ್ ಎಂಬ ಭಕ್ತ ಬರೆದು ಹುಂಡಿಗೆ ಹಾಕಿದ್ದಾನೆ.ಮಲ್ಲಿಕಾರ್ಜುನ ಕೊಪ್ಪಳ ತೋರಣಗಲ್ ಭಕ್ತ. ಈತ ಪತ್ರದಲ್ಲಿ ಬರೆದಿದ್ದು ಇಂಥಹ ವಿಚಾರಗಳು ” ನನ್ನ ಮನೆಯ ಕಟ್ಟಡ ಪೂರ್ಣಗೊಳ್ಳಬೇಕು. ನಾನು ಕೋರ್ಟ್ ಕೇಸ್ನಲ್ಲಿ ಮುಕ್ತನಾಗಬೇಕು. ನನಗೆ ಮಾಟ ಮಾಡಲಾಗಿದೆ, ಅದ್ರಿಂದ ದೂರವಾಗಬೇಕು.

ಶಂಕ್ರಪ್ಪ ಎನ್ನುವವನು ಸದ್ಯ 20 ಲಕ್ಷ ರೂ ಸಾಲ ಕೊಡುವಂತೆ ಮಾಡು” ಎಂದು ಉಲ್ಲೇಖಿಸಿದ್ದಾರೆ. ಹೀಗೆ ಬೇಡಿಕೆಗಳ ಸರ ಮಾಲೆ ಉಲ್ಲೇಖಿಸಿ ದೇವರಿಗೆ ಲೇಟರ್ ಬರೆದಿದ್ದಾರೆ. ಇದನ್ನು ಓದಿದ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

 

 

 

 

Categories
Breaking News District National Political State

ಟಿಬಿ ಡ್ಯಾಂನಲ್ಲಿ ಹೂಳು : ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗಂಗಾವತಿ ರೈತ…

ತುಂಗಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳಿನ ಸಮಸ್ಯೆಯಿಂದಾಗಿ ಪ್ರಧಾನಿಗೆ ಗಂಗಾವತಿಯ ರೈತನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಪರ್ಯಾಯ ಡ್ಯಾಂ ನಿರ್ಮಿಸಲು ಅಗತ್ಯ ಹಣಕಾಸು ನೆರವು ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾನೆ. ನರೇಂದ್ರ ಮೋದಿಗೆ ಪತ್ರ ಬರೆದ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನಗೌಡ, ಸೆ.17ರಂದು ರಕ್ತದಲ್ಲಿ ಐದು ಪುಟದ ಪತ್ರ ಬರೆದು ಮನವಿ ಮಾಡಿದ್ದಾರೆ. ಕೃಷ್ಣ ಮತ್ತು ತುಂಗಭದ್ರಾ ಮಧ್ಯದ ಪ್ರದೇಶ ದೋಅಬ್ ಪ್ರದೇಶವಾಗಿದ್ದು ಫಲವತ್ತಾದ ಭೂಮಿ ಇದ್ದರೂ ಸಮರ್ಪಕ ನೀರು ಬಳಕೆ ಮಾಡಲು ಡ್ಯಾಂ ಹಾಗೂ ಕಾಲುವೆಗಳ ನಿರ್ಮಾಣ ಆಗದಿರುವ ಬಗ್ಗೆ  ಪ್ರಸ್ತಾಪ ಮಾಡಿದ್ದಾರೆ.

ಸಿದ್ದಾಪೂರ ಗ್ರಾಮದಲ್ಲಿ ಮೋದಿಯವರ 69ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿರುವ ಮಲ್ಲಿಕಾರ್ಜುನಗೌಡ, ಪ್ರವಾಹ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ರೈತರ ಗದ್ದೆಗೆ ಹರಿಸಲು ನವಲಿ ಗ್ರಾಮದ ಹತ್ತಿರ ನಿಯೋಜಿತ ಪರ್ಯಾಯ ಡ್ಯಾಂ ನಿರ್ಮಿಸಲು ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನದಿಗಳ ನೀರನ್ನು ಸಮರ್ಪಕವಾಗಿ ಬಳಸಲು ತುಂಗಭದ್ರಾ ಹಾಗೂ ಕೃಷ್ಣಾನದಿಗೆ ಕಟ್ಟಲಾದ ಡ್ಯಾಂಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಅಗತ್ಯ ಹಣಕಾಸು ನೆರವು ನೀಡಬೇಕೆಂದು 100 ಮಿ . ಲೀ . ರಕ್ತ ಬಳಸಿ ಪತ್ರ ಬರೆದಿದ್ದಾರೆ.

 

 

Categories
Breaking News District National Political State

ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ರೈತ….

ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಮಡಿವಾಳಯ್ಯ ಗಂಗೂರ, ಪ್ರಧಾನಿಗೆ ಪತ್ರ ಬರೆದ ರೈತ. ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ನೆರೆ ಮತ್ತು ಬರದಿಂದಾದ ಹಾನಿಗೆ ಪರಿಹಾರ ನೀಡುವಂತೆ, ನೆರೆಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಸಾವಿರಾರು ಹಳ್ಳಿಗಳು ಸಹಿತ ದನಕರುಗಳು ಮುಳುಗಿ ಹೋಗಿವೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿಯಾಗಿ ಸಮಸ್ಯೆ ಕಣ್ಣಿನಲ್ಲಿ ನೋಡಲಾಗುತ್ತಿಲ್ಲ. ಇನ್ನೊಂದಡೆ ಮಳೆಯಾಗದೇ ಬೆಳೆ ಒಣಗಿ ಹೋಗಿ, ಬರದಿಂದ ರೈತನ ಬಾಳು ಸಂಕಷ್ಟಕ್ಕೀಡಾಗಿದೆ. ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ರಾಜ್ಯದ ಜನರ ನೆರವಿಗೆ ಕೇಂದ್ರ ತಕ್ಷಣ ಸ್ಪಂದಿಸಿ ಪರಿಹಾರ ಘೋಷಿಸಿಬೇಕು ಎಂದು ಪ್ರಧಾನಿ ಮೋದಿಗೆ ಕಳಕಳಿಯ ಪತ್ರ ಬರೆದಿದ್ದಾರೆ ಮಡಿವಾಳಯ್ಯ.