Categories
Breaking News District Political State

ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ…

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆಯಲಾಗಿದೆ.

ಮೈಸೂರಿನ ಹಿರಿಯ ನ್ಯಾಯವಾದಿ ಪಿ ಜಿ ರಾಘವೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಇವರು ಬರೆದು ಪತ್ರದಲ್ಲಿ ಹೀಗಿದೆ..

ಸಿದ್ದರಾಮಯ್ಯ ಕಾನೂನು ಪದವೀಧರರು. ವಕೀಲರಾಗಿದ್ದವರು ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲರು. ಅವರ ಹೇಳಿಕೆಯನ್ನು ಮಾಧ್ಯಮದ ಮುಂದೆ ಹೇಳುವ ಬದಲು. ಅವರೇ ಕರಿಕೋಟು ಧರಿಸಿ ಆಪಾದಿತೆ ನಳಿನ ಪರ ವಕಾಲತ್ತು ವಹಿಸಲಿ.

ಆಕೆಯ ವಿರುದ್ದ ಪ್ರಕರಣ ರದ್ದುಗೊಳಿಸುವಂತೆ ವಾದ ಮಂಡಿಸಿ. ಪ್ರಕರಣ ದಾಖಲಿಸಿದ ಪೊಲೀಸರು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ. ಆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ಆಪಾದತೆ ನಳಿನಿಗೆ ಕೊಡಿಸಲಿ. ಸಂವಿಧಾನಬದ್ದವಾಗಿ ಹೋರಾಟ ನಡೆಸಿ ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಪಿ.ಜೆ.ರಾಘವೇಂದ್ರ ಬಹಿರಂಗ ಆಹ್ವಾನ ಮಾಡಿದ್ದಾರೆ.

Categories
Breaking News District State

ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ಅನ್ಯಾಯ- ಕೇಂದ್ರ ಸಚಿವರಿಗೆ ಬಹಿರಂಗ ಪತ್ರ ಬರೆದ ಹೋರಾಟಗಾರ…!

ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಜನರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸಿದೆ. ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲವೂ ಮುಗಿತು ನ್ಯಾಯಾಧೀಕರಣ ತೀರ್ಪು ಸಹ ಬಂತು. ಇನ್ನೇನು ಕಾಮಗಾರಿ ಆರಂಭವಾಗಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆ ಜನರಿಗೆ ಅನಕೂಲ ಆಗಲಿದೆ ಎಂದೇ ರೈತರು ನೀರಿಕ್ಷಿಸಿದ್ದರು.

ಆದರೇ ಸದ್ಯ ಯೋಜನೆ ಪೂರ್ಣಗೊಳಿಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಬೇಕಿದೆ. ಈ ಮೊದಲು ಅನುಮತು ನೀಡಿದ್ದ ಕೇಂದ್ರ ಅರಣ್ಯ ಇಲಾಖೆ ಸದ್ಯ ಅನುಮತಿಯನ್ನು ಅಮಾನತ್ತಿನಲ್ಲಿ ಇಟ್ಟು ಆದೇಶ ಹೊರಡಿಸಿದೆ. ಈ ಆದೇಶ ಉತ್ತರ ಕರ್ನಾಟಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ ಸೇರಿ ಅನೇಕ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಆದರೇ ಯೋಜನೆ ಪೂರ್ಣಕ್ಕೆ ಅನೇಕ ವಿಘ್ನಗಳು ಎದುರಾಗುತ್ತಲೇ ಇವೆ. ಈ ಭಾಗದ ಜನರ ಹೋರಾಟಕ್ಕೆ ಸರ್ಕಾರ ಯಾವುದೇ ಮಣೆ ಹಾಕದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಹುಬ್ಬಳ್ಳಿ ಸಂಸದ ಪ್ರಲ್ಹಾದ್ ಜೋಶಿ, ಬೆಳಗಾವಿ ಸಂಸದ ಸುರೇಶ ಅಂಗಡಿ ಸಹ ಸಚಿವರಾಗಿದ್ದಾರೆ. ಇಬ್ಬರಿಗೂ ಪರಿಸರ ಇಲಾಖೆ ನೀಡಿರೋ ತಡೆಯ ಬಗ್ಗೆ ಮಾಹಿತಿಯೆ ಇಲ್ಲವೆ. ಈ ಬಗ್ಗೆ ಪ್ರಧಾನಿ ಬಳಿ ಇಬ್ಬರು ಸಚಿವರು ಮಾತನಾಡಲಿದ್ದಾರೆ ಎಂಬ ನಿರೀಕ್ಷೆಗಳು ಜನರಲ್ಲಿ ಇವೆ. ಆದರೇ ಇಬ್ಬರು ಸಚಿವರು ಮೌನ ವಹಿಸಿದ್ದು, ಇದೀಗ ಬೆಳಗಾವಿಯ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಬಹಿರಂಗ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಇಬ್ಬರು ಕೇಂದ್ರ ಸಚಿವರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪತ್ರ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ. ಇನ್ನಾದರೂ ಪ್ರಧಾನಿ ಬಳಿ ಇಬ್ಬರು ಸಚಿವರು ಯೋಜನೆ ಬಗ್ಗೆ ಮಾತನಾಡಲಿದ್ದಾರೆ ಎಂಬ ಬಗ್ಗೆ ಕಾದು ನೋಡಬೇಕು.

Categories
Breaking News District Political State

2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಫೋಟೋ ವೈರಲ್ – ಗೌಪ್ಯ ಮತದಾನ ಬಹಿರಂಗ

2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಮತದಾರರು ಫೋಟೋ ವೈರಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಹೌದು.. ಅಥಣಿ ಹಾಗೂ ರಾಣೇಬೆನ್ನೂರಿನಲ್ಲಿ ಬಿಜೆಪಿಗೆ ಮತ ಹಾಕಿದ ಮತದಾರರು ಫೋಟೋ ತೆಗೆದು ಹರಿಬಿಟ್ಟಿದ್ದಾರೆ. ಇದರಿಂದ ಅಥಣಿ ಪಟ್ಟಣದ ಮತದಾರನಿಂದ ನೀತಿ‌ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಯಾವ‌ ಪಕ್ಷಕ್ಕೆ ಮತ ನೀಡಿದ್ದೇನೆಂದು ಮತದಾರ‌ ಇವಿಎಂ ಯಂತ್ರ, ವಿವಿಪ್ಯಾಟ್ ನ ಕಾಪಿ ಪೋಟೊ ವೈರಲ್ ಮಾಡಿದ್ದಾನೆ. ಬಿಜೆಪಿ ಅಭ್ಯರ್ಥಿಗೆ ಮತಹಾಕಿರುವ ಕುರಿತು ವೈರಲ್ ಹಿನ್ನಲೆ ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀತಿಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ.

ಇನ್ನೂ ರಾಣೆಬೆನ್ನೂರಿನಲ್ಲೂ  ಗೌಪ್ಯ ಮತದಾನವನ್ನು ಮತದಾರರು ಬಹಿರಂಗ ಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.  ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಗೆ ಮತ ಹಾಕಿರುವ ಫೋಟೋ ವೈರಲ್ ವೈರಲ್ ಆಗಿದೆ. ಕಮಲ ಗುರುತಿಗೆ ಮತ ಹಾಕಿರುವುದನ್ನ ಫೋಟೋ ತೆಗೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಕಾರ್ಯಕರ್ತರು ಹಾಕಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

Categories
Breaking News District Political State

ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…

ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ  ಮಾಡಿದ್ದಾರೆ.

ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ‌ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕ‌ಗುಬ್ಬಕ್ಕ‌ಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

 

Categories
Breaking News District Political State

ಯತ್ನಾಳ-ಜಿಗಜಿಣಗಿ ಮಧ್ಯೆ ಕೇಂದ್ರ ಸಚಿವರೆದುರೇ ಬಹಿರಂಗ ಸಭೆಯಲ್ಲಿ ಮಾತಿನ ಚಕಮಕಿ – ಯಾಕೆ ಗೊತ್ತಾ?

ಶಾಸಕ ಯತ್ನಾಳ ಮತ್ತು ಸಂಸದ ರಮೇಶ ಜಿಗಜಿಣಗಿ ಮಧ್ಯೆ ಕೇಂದ್ರ ಸಚಿವರು ಮತ್ತು ಶಾಸಕರ ಎದುರ ಅದೂ ಕೂಡ ಬಹಿರಂಗ ವೇದಿಕೆಯಲ್ಲಿಯೇ ಮಾತಿನ ಚಕಮಕಿ ನಡೆದಿದೆ.

ವಿಜಯಪುರ ನಗರದಲ್ಲಿ ವಿಜಯಪುರ- ಯಶವಂತಪುರ ನೂತನ ರೈಲು ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಕೇಂದ್ರ ರೈಲು ನಿಲ್ದಾಣದ ಎದುರು ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಕುಳಿತಿದ್ದರು. ಅವರ ಬಲಗಡೆ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ಲೋಕಸಭೆ ಬಿಜೆಪಿ ಸದಸ್ಯ ರಮೇಶ ಜಿಗಜಿಣಗಿ ಹಾಗೂ ಅವರ ಪಕ್ಕದಲ್ಲಿ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬನಸಗೌಡ ರಾ. ಪಾಟೀಲ ಯತ್ನಾಳ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ಯತ್ನಾಳ ಕೇಂದ್ರ ಸಚಿವ ಸುರೇಶ ಚ. ಅಂಗಡಿ ಅವರಿಗೆ ಏನೋ ಹೇಳುತ್ತಿದ್ದರು. ಆಗ ರಮೇಶ ಜಿಗಜಿಣಗಿ ಕೂಡ ಕೇಂದ್ರ ಸಚಿವರಿಗೆ ಏನೋ ಹೇಳಿದ್ದಾರೆ. ಆಗ ಯತ್ನಾಳ ಮತ್ತು ರಮೇಶ ಜಿಗಜಿಣಗಿ ಪರಸ್ಪರ ದುರುಗುಟ್ಟಿಕೊಂಡು ನೋಡಿದ್ದಾರೆ.

 

ಮೂಲಗಳ ಪ್ರಕಾರ ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ತಮಗೆ ಅವಕಾಶ ನೀಡುವಂತೆ ಯತ್ನಾಳ ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನು ಕೇಳಿದ್ದಾರೆ. ಆಗ, ರಮೇಶ ಜಿಗಜಿಣಗಿ ಇದಕ್ಕೆ ಆಕ್ಷೇಪಿಸಿದರು ಎನ್ನಲಾಗಿದೆ. ಆಗ ಯತ್ನಾಳ ನಾನು ಕೇಂದ್ರ ಸಚಿವರನ್ನು ಕೇಳುತ್ತಿದ್ದೇವೆ. ಬೇಡ ಎನ್ನಲು ನೀವ್ಯಾರು ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಈ ವಿಚಾರ ದೀರ್ಘಕ್ಕೆ ಹೋಗುವುದನ್ನು ವೀರಣ್ಣ ಚರಂತಿಮಠ ಮತ್ತು ಸುರೇಶ ಅಂಗಡಿ ತಪ್ಪಿಸಿದ್ದಾರೆ.

ಆದರೆ, ಇದಕ್ಕೆ ಬೇರೆ ಇನ್ನೇನಾದರೂ ಕಾರಣವೂ ಇರಬಹುದು ಎನ್ನಲಾಗಿದೆ. ಯತ್ನಾಳ ಪಕ್ಕದಲ್ಲಿದ್ದ ಬಾಗಲಕೋಟೆ ಬಿಜೆಪಿ ವೀರಣ್ಣ ಚರಂತಿಮಠ ಯತ್ನಾಳ ಅವರ ಕೈ ಹಿಡಿದು ಸಮಾಧಾನ ಪಡಿಸಿದ್ದಾರೆ. ಇತ್ತ ರಜೇಶ ಜಿಗಜಿಣಗಿ ಅವರನ್ನು ಕೇಂದ್ರ ಸಚಿವ ಸುರೇಶ ಚ. ಅಂಗಡಿ ಸಮಾಧಾನ ಪಡಿಸಿದರು.

ಒಟ್ಟಾರೆ ಈ ಹಿಂದೆ ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ ದ್ವಿಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಉಂಟಾಗಿರುವ ಉಭಯ ಮುಖಂಡರ ಶೀತಲ ಸಮರ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೇ ಕಾರ್ಯಕ್ರಮದಲ್ಲಿ ಯತ್ನಾಳ ಕೇಂದ್ರ ಸಚಿವ ಸುರೇಶ ಚಂ. ಅಂಗಡಿ ಅವರಿಗೆ ನಾನಾ ರೈಲು ಸೇವೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೆ, ತಮ್ಮ ಸರದಿ ಬಂದಾಗ ಸಂಸದ ರಮೇಶ ಜಿಗಜಿಣಗಿ ನಾನೂ ಸಂಸದನಾದ ಮೇಲೆ ರೇಲ್ವೆ ಇಲಾಖೆಯ ನಾನಾ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು. ಅಲ್ಲದೇ, ತಮ್ಮ ಭಾಷಣದ ಮಧ್ಯೆಯೇ, ವೇದಿಕೆಯ ಕಡೆಗೆ ಬಂದ ಮಾಜಿ ಸಚಿವ ಮತ್ತು ಯತ್ನಾಳ ಕಡು ವಿರೋಧಿ ಅಪ್ಪು ಪಟ್ಟಣಶೆಟ್ಟಿ ಅವರನ್ನು ಅಪ್ಪು ಅಣ್ಣಾ ವೇದಿಕೆಯ ಮೇಲೆ ಬನ್ನಿ ಎಂದು ಹೇಳುವ ಮೂಲಕ ಯತ್ನಾಳ ಅವರಿಗೆ ಟಾಂಗ್ ನೀಡದ ಘಟನೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

Categories
Breaking News District Political State

ಆಪರೇಷನ್ ಕಮಲದ ಆಡಿಯೋ ಬಹಿರಂಗ ಪಡಿಸಿದ್ದಕ್ಕೆ ನನಗೆ ಜೀವ ಬೆದರಿಕೆ – ಶರಣಗೌಡ ಕಂದಕೂರ

ಆಪರೇಷನ್ ಕಮಲದ ಆಡಿಯೋ ಬಹಿರಂಗ ಪಡಿಸಿದ್ದಕ್ಕೆ ನನಗೆ ಜೀವ ಬೆದರಿಕೆಯಿದೆ ಎಂದು ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಪ್ರತಿಭಟನಾ ವೇಳೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಆಪರೇಷನ್ ಕಮಲ ಪ್ರಕರಣ ಮನಸ್ಸಿನಲ್ಲಿಟ್ಟುಕೊಂಡು ನನ್ನ ಮೇಲೆ ಹಗೆ ಸಾಧಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ನನ್ನ ಪ್ರತಿಯೊಂದು ಚಲನ, ವಲನಗಳನ್ನು ಅಪರಿಚಿತ ವ್ಯಕ್ತಿಗಳು ಗಮನಿಸುತ್ತಿದ್ದಾರೆ. ನಾನು ಎಲ್ಲಿಗೆ ಹೋದರೂ ಕೆಲ ಮುಸುಕುಧಾರಿ ವ್ಯಕ್ತಿಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ನನ್ನ ಫೋನ್ ಸಹ ಟ್ಯಾಪ್ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದರು.