Categories
Breaking News District Political State

ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಹರಿಹರ ಸ್ವಾಮೀಜಿ ವಿರುದ್ಧ ಯತ್ನಾಳ ವಾಗ್ದಾಳಿ…

ಹರಿಹರ ಸ್ವಾಮೀಜಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಸ್ವಾಮಿಜಿಯವರು  ವರ್ತನೆ ತಿದ್ದಿಕೊಳ್ಳಬೇಕೆಂದು ಹರಿಹರ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ‌ ಬಸನಗೌಡ ರಾ. ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಿನ್ನೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, “”ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ” ಎಂದು ಹೇಳಿದರು. ಇದಕ್ಕೆ ಸಿಎಂ ಯಡಿಯೂರಪ್ಪ ಕೆಂಡಮಂಡಲವಾಗಿ ಎಚ್ಚರಿಕೆ ಬೇಡ ಸಲಹೆ ಕೊಂಡಿ ಎಂದು ಕೋಪಗೊಂಡಿದ್ದರು.

ಇದೇ ವಿಚಾರಕ್ಕೆ ಇಂದು ಯತ್ನಾಳ್ ಗರಂ ಆಗಿದ್ದಾರೆ . ಇಂದು ಮಾದ್ಯಮದೊಂದಿಗೆ ಮಾತನಾಡಿದ ಯತ್ನಾಳ್, ಯಾರೂ ಗೊಡ್ಡ ಬೆದರಿಕೆ ಹಾಕಬಾರದು. ನಾವೆಲ್ಲ ಸಿಎಂ‌ ಪರ ಗಟ್ಟಿಯಾಗಿದ್ದೇವೆ. ಮಠಾಧೀಶರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡಬೇಕು. ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನ ಬೇಡಲ್ಲ. ಸಿಎಂ ರನ್ನು‌ ಕಾರ್ಯಕ್ರಮಕ್ಜೆ ಅವಮಾನಿಸಿದ್ದು ಸರಿಯಲ್ಲ.”

ಈ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರಂಥ ಲಿಂಗಾಯಿತ ನಾಯಕರಿಗೆ ನಮ್ಮವರೇ ಮುಳುವಾದರು. ಉತ್ತರ ಕರ್ನಾಟಕ ಪ್ರವಾಹ ಬಂದಾಗ ಸ್ವಾಮೀಜಿ ಯಾಕೆ ಧ್ವನಿ ಎತ್ತಲಿಲ್ಲ. ಇಂಥವರ ಮಾರ್ಗದರ್ಶನದಲ್ಲಿ ಸಚಿವರಾದರೆ ಪ್ರತಿದಿನ ಇವರ ಮಠದ ಎದುರು ನಿಲ್ಲಬೇಕಾಗುತ್ತೆ. ನಿನ್ನೆ ನಿರಾಣಿ ಮಾಡಿದ್ದು ತಪ್ಪು. ನಿರಾಣಿ ಸಿಎಂಗೆ ತಂದೆ ಸಮಾನ ಅಂತಾರೆ. ಹಾಗಿದ್ದರೆ ಹೀಗೇಕೆ‌ ಮಾಡಿದ್ರು? ನಿರಾಣಿ ಕೂಡಲ ಸಂಗಮ, ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ಹೊರಟಿದ್ದಾರೆ.

ನಿರಾಣಿ ಮತ್ತು ಸ್ವಾಮೀಜಿಗಳ ಈ ನಡೆಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಇಬ್ಬರು ನಿರಾಣಿ ಸಹೋದರರು‌ ಕೂಡಲ ಸಂಗಮ ಮ್ಯಾನೇಜ್ ಮಾಡ್ತಿದ್ದಾರೆ. ಮುರುಗೇಶ ನಿರಾಣಿ ಹರಿಹರ ಪರ ಮ್ಯಾನೇಜ್ ಮಾಡ್ತಿದ್ದಾರೆ. ನಿರಾಣಿ ಅವರ ಮನೆಯ ಬೆಕ್ಕು,ನಾಯಿಗೂ ಸ್ಥಾನಮಾನ ಕೇಳುತ್ತಾರೆ. ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗ್ಬೇಕಾ? ನಿರಾಣಿ ಏನು ಉಪಕಾರ ಮಾಡಿದ್ದಾರೆ? ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

 

Categories
Breaking News District Political State

ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ….!

ಅನಾರೋಗ್ಯದ ನಡುವೆಯೂ ವಿಜಯಪುರದಲ್ಲಿ ಜನಸೇವೆ ಮಾಡಿದ್ದಾರೆ ಬಸನಗೌಡ ರಾ.‌ ಪಾಟೀಲ ಯತ್ನಾಳ.

ಹೌದು..  ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ.‌ ಪಾಟೀಲ ಯತ್ನಾಳ  ಅವರು ಮಂಗಳವಾರದಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ವೈದ್ಯರು ಡ್ರಿಪ್ ಹಾಕಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಅದನ್ನು ಲೆಕ್ಕಿಸದೇ ನಾನಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗಿಯಾಗಿದ್ದಾರೆ.

ಇಂದು ವಿಜಯಪುರ ನಗರದ ವಾರ್ಡ್ ಸಂಖೆ 4ರ ಪುರಾತನ ಭಾವಿ ಜೀರ್ಣಾದ್ಧಾರ ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಬಲಗೈಗೆ ಸಲಾಯಿನ್ ಸೆಟ್ ಅಳಚಡಿಸಿರುವ ಬಗ್ಗೆ ಕಂಡು ಬಂದಿದೆ. ಆದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯತ್ನಾಳ್ ಜನಮನ ಗೆದ್ದಿದ್ದಾರೆ.

 

Categories
Breaking News District Political State

ಮಹಾರಾಷ್ಟ್ರ ಕನ್ನಡಿಗರ ಪರ ಯತ್ನಾಳ ಬ್ಯಾಟಿಂಗ್- ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರು ಬಿಟ್ಟರೆ ತಪ್ಪೇನಿಲ್ಲ- ಯತ್ನಾಳ

ಪಾಕಿಸ್ತಾನಕ್ಕೆ ಮಾನವೀಯ ದೃಷ್ಠಿಯಿಂದ ನೀರು ಬಿಟ್ಟವರು ನಾವು. ಕರ್ನಾಟಕ ಮಹಾರಾಷ್ಟ್ರಕ್ಕೆ ನೀರು ಬಿಡುವುದರಲ್ಲಿ ತಪ್ಪೇನಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮಹಾರಾಷ್ಟ್ರ ಮತ್ತು ಸಿಎಂ ಬಿ. ಎಸ್. ಯಡಿಯೂುರಪ್ಪ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ವಿಜಯಪುದಲ್ಲಿ ಮಾತನಾಡಿದ ಅವರು, ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಮಹಾರಾಷ್ಟ್ರ ಕೃಷ್ಣಾ ಮತ್ತು ಭೀಮಾ ನದಿಗೆ ಹಣ ಪಡೆಯದೇ ಮಾನವೀಯತೆ ಆಧಾರದ ಮೇಲೆ ಸಾಕಷ್ಟು ಬಾರಿ ನೀರು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಜತ್ ತಾಲೂಕಿನಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕರ್ನಾಟಕದಿಂದ ನೀರು ಬಿಡುವುದರಲ್ಲಿ ತಪ್ಪೇನಿಲ್ಲ. ಈಗ ಕೊಡು ಕೊಳ್ಳುವ ನೀತಿಯಲ್ಲಿ ನೀರು ಬಿಡುವುದರಲ್ಲಿ ತಪ್ಪೇನಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಹಿಂದೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ತಾವು ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ಸೇರಿ ಈ ವಿಚಾರವಾಗಿ ಚರ್ಚಿಸಿದ್ದೇವೆ. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲಿ. ಆ ನೀರನ್ನು ಕರ್ನಾಟಕದ ಮೂಲಕ ಮಹಾರಾಷ್ಟ್ರದ ಗಡಿ ಭಾಗಕ್ಕೆ ಬಿಡುವ ನಿಟ್ಟಿನಲ್ಲಿ ಸಿಎಂ ಈಗ ಪ್ರಸ್ತಾಪಿಸಿರುವ ವಿಚಾರ ಚುನಾವಣೆ ಬಳಿಕ ಕಾರ್ಯರೂಪಕ್ಕೆ ಬರುವಂತಾಗಲಿ ಎಂದು ಯತ್ನಾಳ ಆಗ್ರಹಿಸಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನೀರಾವರಿ ಯೋಜನೆಗಳು ದೊಡ್ಡದಿವೆ. ಈ ಹಿನ್ನೆಲೆ ಕೊಡು-ಕೊಳ್ಳುವ ಸೂತ್ರದಿಂದ ಈ ಯೋಜನೆಗಳು ಸಮರ್ಪಕವಾಗಿ ಜಾರಿ ಸಾಧ್ಯ. ಈ ಹಿಂದೆ ಬಿ. ಡಿ. ಜತ್ತಿ ಸಿಎಂ ಆಗಿದ್ದಾಗ ಮಹಾರಾಷ್ಟ್ರ ಕರ್ನಾಟಕದ ಉತ್ತರ ಭಾಗಕ್ಕೆ ನೀರು ಕೊಡುವುದಾಗಿ ಹೇಳಿತ್ತು. ಆದರೆ, ಅಂದು ಬಿ. ಡಿ. ಜತ್ತಿ ಹಣ ನೀಡದ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಶಾಶ್ವತವಾಗಿ ಸಿಗಬೇಕಿದ್ದ ನೀರಾವರಿಗೆ ತೊಂದರೆಯಾಯಿತು. ಈ ಮೂಲಕ ಅಂದು ಬಿ. ಡಿ. ಜತ್ತಿ ಒಪ್ಪದೆ ಪ್ರಮಾದ ಮಾಡಿದ್ದಾರೆ. ಅವರ ತಪ್ಪಿನಿಂದ ಉತ್ತರ ಕರ್ನಾಟಕದ ಜನ ತೊಂದರೆ ಎದುರಿಸುತ್ತಿದ್ದಾರೆ ಎಂದು ಯತ್ನಾಳ ಹೇಳಿದರು.

ಸಿಎಂ ನದಿ ವಿವಾದ ಸೇರಿದಂತೆ ಎಲ್ಲ ವಿವಾದಗಳ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಕರ್ನಾಟಕ, ಮಹಾರಾಷ್ಟ್ರ ಬೇರೆಯಲ್ಲ, ಒಂದೇ ತಾಯಿಯ ಮಕ್ಕಳು, ಭಾರತದ ಭಾಗಗಳು. ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರಗಳ ನಡುವಿನ ಸಮಸ್ಯೆಗಳೇನು ಬಗೆಹರಿಯುವುದಿಲ್ಲವೇ? ಎಂದು ಪ್ರಶ್ನಿಸಿದ ಯತ್ನಾಳ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂ ಗಳು ಈ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಬೇಕು ಎಂಬುದು ನಮ್ಮ ಭಾವನೆ ಎೞದು ತಿಳಿಸಿದರು.

ಮಹಾದಾಯಿ ವಿಚಾರದಲ್ಲಿ ಗೋವಾ ಮಾತ್ರ ಮೊಂಡುತನ ಪ್ರದರ್ಶಿಸುತ್ತಿದೆ. ಈ ಹಿಂದೆ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಜಲಸಂಪನ್ಮೂಲ ಸಚಿವರೊಂದಿಗೆ ಮಹಾದಾಯಿ ವಿಚಾರವಾಗಿ ಚರ್ಚಿಸಿದ್ದೇವೆ. ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರು ಕೊಡುವ ಕುರಿತು ನಾನು, ಎಂ. ಬಿ. ಪಾಟೀಲ, ವಿನಯ ಕೋರೆ ಈ ಹಿಂದೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ ಮಹಾಜನರೊಂದಿಗೆ ಒಂದೇ ವೇದಿಕೆಯಲ್ಲಿ ತಂದು ಚರ್ಚೆ ನಡೆಸಿದ್ದೇವೆ. ಗೋವಾದ ಮೊಂಡುತನದಿಂದ ಮಹಾದಾಯಿ ಸಮಸ್ಯೆ ಬಗೆ ಹರಿದಿಲ್ಲ. ಮಹಾದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಕರ್ನಾಟಕಕ್ಕೆ ಸಹಕರಿಸಿದರೆ ನಮಗೆ ನೀರು ಸಿಗುತ್ತದೆ. ಆದರೆ, ಗೋವಾ ಈ ವಿಷಯದಲ್ಲಿ ಮೊಂಡುತನ ಪ್ರದರ್ಶಿಸುತ್ತಿದೆ. ಗೋವಾದ ವಾದ ಅರ್ಥಹೀನವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗೋವಾವನ್ನೂ ಕರೆಯಿಸಿ ಸೌಹಾರ್ಧಯುತವಾಗಿ ಮಹಾದಾಯಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.

ಮಹಾದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಒಂದಾದರೆ ಗೋವಾದ ಪ್ರಶ್ನೆಯೇ ಬರುವುಪದಿಲ್ಲ. ಗೋವಾಕ್ಕೆ ಮಹಾರಾಷ್ಟ್ರದಿಂದಲೇ ನೀರು ಹೋಗುತ್ತದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಗ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಈ ವಿಚಾರ ಚುನಾವಣೆಯ ಬಳಿಕವೂ ಮುಂದುವರೆಯಬೇಕು ಎಂದು ಯತ್ನಾಳ ಹೇಳಿದರು.

Categories
Breaking News District Political State

ನೋಟೀಸ್‌ಗೆ ಕ್ಯಾರೆ ಎನ್ನದ ಯತ್ನಾಳ, ಬಿಜೆಪಿ ಪಕ್ಷದಿಂದ ದೂರವಾಗುವ ಸಲುವಾಗಿಯೇ ಈ ನಿಲುವು ತಳೆದಿದ್ದಾರಾ?

ನೆರೆ ಪರಿಹಾರ ಘೋಷಣೆ ವಿಳಂಬದ ವಿಚಾರವಾಗಿ ಪಕ್ಷದ ನಾಯಕರ ವಿರುದ್ಧ ನಾಲಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಬಿಜೆಪಿ ನೀಡಿದ್ದ ನೋಟೀಸಿಗೆ ಶಾಸಕ ಬಸನಗೌಡ ಯತ್ನಾಳ್ ಕ್ಯಾರೆ ಎನ್ನದಿರುವುದು ಹಲವಾರು ಗುಮಾನಿಗಳಿಗೆ ಕಾರಣವಾಗಿದೆ.

ನೋಟೀಸ್ ಪಡೆದಾಗಲೇ ಅದಕ್ಕೆ ಉತ್ತರಿಸುವುದಿಲ್ಲ, ಉಚ್ಚಾಟನೆಗೂ ಸಿದ್ಧ ಎಂಬರ್ಥದಲ್ಲಿ ಯತ್ನಾಳರು ಮಾತನಾಡಿದ್ದರು. ಆದರು ನೊಟೀಸಿಗೆ ಉತ್ತರಿಸುತ್ತಾರೆ ಎಂದು ಪಕ್ಷದ ನಾಯಕರು ಕಾದುಕುಳಿತಿದ್ದರು.

ನೋಟೀಸ್ ಪಡೆದು ವಾರಗಳೇ ಉರುಳಿದರೂ ಯತ್ನಾಳರು ಅದಕ್ಕೆ ಯಾವುದೇ ಉತ್ತರ ನಿಡದಿರುವುದು ಬಿಜೆಪಿ ಪಾಳೆಯದಲ್ಲಿ ಸಣ್ಣ ಮಟ್ಟದ ಕಂಪನಕ್ಕೆ ಕಾರಣವಾಗಿದೆ. ಯತ್ನಾಳರು ಪಕ್ಷದಿಂದ ದೂರವಾಗುವ ಸಲುವಾಗಿಯೇ ಈ ನಿಲುವು ತಳೆದಿದ್ದಾರಾ ಎಂಬ ಗುಸುಗುಸು ಕೇಳಿಬರುತ್ತಿದೆ.

ಈ ಮಧ್ಯೆ ಯತ್ನಾಳರ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಅಹಂಕಾರದ ವರ್ತನೆ ಎಂದೂ ಕಟೀಲ್ ಜರೆದಿದ್ದಾರೆ.

ನಾನು ರಾಜ್ಯಾಧ್ಯಕ್ಷ ಆದರೂ ನನ್ನಿಂದ ತಪ್ಪಾದರೆ ನನ್ನನ್ನೂ ವಿವರಣೆ ಕೇಳುತ್ತಾರೆ. ವಿವರಣೆ ಕೊಡುವುದು ನನ್ನ ಜವಾಬ್ದಾರಿ. ಉತ್ತರ ಕೊಡದೇ ಹೋದರೆ ಅದು ಅಹಂಕಾರ ಎನಿಸಿಕೊಳ್ಳುತ್ತದೆ. ಮುಂದೆ ಕ್ರಮ ಕೈಗಳ್ಳಲಾಗುತ್ತದೆ ಎಂದು ಕಟೀಲ್ ಎಚ್ಚರಿಕೆಯ ಧಾಟಿಯಲ್ಲಿ ಹೇಳಿದ್ದಾರೆ.

ಕಟೀಲ್ ಅವರ ಎಚ್ರಿಕೆಯ ನಡುವೆಯೂ ಯತ್ನಾಳರ ವಿರುದ್ಧ ಬಿಜೆಪಿ ಯಾವುದೇ ಕ್ರಮಕ್ಕೆ ಮುಮದಾಗುವುದು ಅನುಮಾನ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

Categories
Breaking News District National Political State

ರಾಜ್ಯ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ ಮತ್ತೆ ವಾಗ್ದಾಳಿ

ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೆ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ ಎಂದು ರಾಜ್ಯ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ಮಾಡಿದ್ದಾರೆ.

ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ ಪ್ರಧಾನಿಯವರ ಭೇಟಿಗೆ ಅವಕಾಶ ನೀಡಲಿ. ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿ ತಪ್ಪೇನಿಲ್ಲ. ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಇಲ್ಲಿ ಯಾರೂ ಯಾರಿಗೂ ಭಯ ಪಡಬಾರದು. ಪ್ರಧಾನಿ ನರೇಂದ್ರ ಮೋದಿ ಯಾರನ್ನೂ ಹೆದರಿಸುವವರಲ್ಲ. ಅವರೂ ಗುಜರಾತ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ. ಮಂತ್ರಿಯಾಗಲು, ಮುಂದಿನ ಬಾರಿ ಟಿಕೆಟ್ ಗಾಗಿ ಸಂಸದರು ಮೌನ ವಹಿಸುವುದು ಸರಿಯಲ್ಲ.

ಒಬ್ಬರು ಹುಬ್ಬಳ್ಳಿಯಲ್ಲಿ ಮತ್ತೋಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ. ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ವಿರುದ್ಧ ಯತ್ನಾಳ ವಾಗ್ದಾಳಿ ಮಾಡಿದ್ದಾರೆ. ಯತ್ನಾಳ ಬೇರೆ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನನಗೇನೂ ಸಚಿವನಾಗಬೇಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನೇನು ಯಾರ ಕಾಲನ್ನು ಹಿಡಿದಿಲ್ಲ. ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತಿರುಗಿ ಕಟ್ಟುದವರು ನಾವು. ಇವರಂಥೆ ಸುಸಜ್ಜಿತ ಮನೆಯಲ್ಲಿ ಬಂದು ಕೂತಿಲ್ಲ.

ಕೇರಳ, ಆಂಧ್ರ ಪ್ರದೇಶದಲ್ಲಿ ಉಸ್ತುವಾರಿ ವಹಿಸಿಕೊಂಡು ಇವರು ಎಷ್ಟು ಬಿಜೆಪಿ ಸ್ಥಾನಗಳಿಸಿದ್ದಾರೆ? ಬಿಜೆಪಿ ರಾಜ್ಯಾಧ್ಯಜ್ಷ ನಳೀನಕುಮಾರ ಕಟೀಲ ಹೆಸರು ಹೇಳದೆ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಅನಂತಕುಮಾರ, ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅನಂತಕುಮಾರ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ. ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ? ಯತ್ನಾಳ ಆಕ್ರೋಶ ಹೊರಹಾಕಿದ್ದಾರೆ.

ಶಿವರಾಜ ತಂಗಡಗಿ ಹೇಳಿಕೆ ಸರಿಯಲ್ಲ. ಕೇಂದ್ರದ ವಿರುದ್ಧ ರಾಜ್ಯದ ಜನರ ಆಕ್ರೋಶದ ಬಗ್ಗೆ ಕೇಂದ್ರ ಇಂಟಲಿಜೆನ್ಸ್ ಪ್ರಧಾನಿಗೆ ಮಾಹಿತಿ ನೀಡಬೇಕು. ಹುಬ್ಬಳ್ಳಿ ನಾಯಕರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿ. ಅವರು ರೈಲು ಎಂಜಿನಗಳಾಗಿ ಮುಂದೆ ಹೋಗಲಿ ನಾವು ಡಬ್ಬಿಗಳಾಗಿ ರೈಲನ್ನು ಹಿಂಬಾಲಿಸುತ್ತೇವೆ. ಪ್ರಧಾನಿ ಭೇಟಿಗೆ ಅನುಮತಿ ಕೋರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಸಮಯ ನೀಡಿದರೆ ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನನ್ನ ಜೊತೆ ಬರುವುದಾದರೆ ಬರಬಹುದು ಎಂದು ಯತ್ನಾಳ್ ಹೇಳಿದ್ದಾರೆ.

 

Categories
Breaking News District National Political State

ನೆರೆ ಸಂತ್ರಸ್ತರ ಪರಿಹಾರ ವಿಚಾರ : ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಯತ್ನಾಳ ವಾಗ್ದಾಳಿ

ನೆರೆ ಸಂತ್ರಸ್ತರ ಪರಿಹಾರ ವಿಚಾರಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ  ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದ್ದಾರೆ.

ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ ಗರಂ ಆಗಿದ್ದಾರೆ.ಕರ್ನಾಟಕದಲ್ಲಿ ಹಣವಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರೆ ನಾನು ಸುಮ್ಮನೆ ಕೂಡುವುದಿಲ್ಲ. ಬೇಜವಾಬ್ದಾರಿಯುತ ಹೇಳಿಕೆಗೆ ಉತ್ತರ ಕರ್ನಾಟಕ ಕಣ್ಣು ಮುಚ್ಚಿ ಕೂಡುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು.

ನಾವೇನು ಕೇಂದ್ರದಿಂದ ಭೀಕ್ಷೆ ಕೇಳ್ತಿಲ್ಲ. ಸಂತ್ರಸ್ತರು ಕಣ್ಣೀರು ಹಾಕ್ತಾ ಇದ್ದಾರೆ. ಬೇಜವಾಬ್ದಾರಿಯುತ ಹೇಳಿಕೆ ನೀಡುವವರು ಸ್ಥಳಕ್ಕೆ ಬಂದು ನೋಡಲಿ. ಉತ್ತರ ಕರ್ನಾಟಕದ ಬಗ್ಗೆ ಕೀಳು ಮಟ್ಟದ ಮಾತು ಕೇಳಿಕ್ಕೆ ಜನಪ್ರತಿನಿಧಿಗಳು ಸತ್ತಿಲ್ಲ.ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಂದಿಲ್ಲ. ಉತ್ತರ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಕ್ಷಣ ರೂ. 5 ಸಾವಿರ ಕೋಟಿ ಪರಿಗಾರ ಹಣ ಬಿಡುಗಡೆ ಮಾಡಬೇಕು.

ಸಿಎಂ ಎಲ್ಲ ಸಂಸದರು, ಸಚಿವರ ನಿಯೋಗವನ್ನು ಪ್ರಧಾನಿ ಮೋದಿ ಹತ್ತಿರ ನಿಯೋಗ ತೆಗೆದುಕೊಂಡು ತೆಗೆದುಕೊಂಡು ಹೋಗಲಿ.ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇಂದ್ರ ಸರಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು.ಅದಕ್ಕಾಗಿನೇ ಪ್ರಧಾನಿ ಮೋದಿಯವರನ್ನು ನೋಡಿ ಕರ್ನಾಟಕದಿಂದ 25 ಜನ ಸಂಸದರನ್ನು ಜನ ಆರಿಸಿ ಕಳಿಸಿದ್ದಾರೆ ಎಂದು ಯತ್ನಾಳ ಗುಡುಗಿದ್ದಾರೆ.