Categories
Breaking News District National State

ಮಕರ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಯಾಕೆ ಕೊಡುತ್ತಾರೆ..? ಇಲ್ಲಿದೆ ಮಾಹಿತಿ

ಸಂಕ್ರಾಂತಿ… ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಸೂರ್ಯನು ತನ್ನ ಪಥ ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಮಣ. ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ನಮ್ಮ ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ.

ಉತ್ತರಾಯಣ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮಿಯನ್ನ ಆರಾಧಿಸಬೇಕು. ಲಕ್ಷ್ಮೀ ಅಂದ್ರೆ ” ಲಕ್ಷ್ಯತಿ ಸರ್ವಂ ಸದಾ ” ಅಂತ. ಯಾರು ಸರ್ವ ಕಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮಿ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮಿ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮಿ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು.

ದೇಶದ ಬೇರೆ ಬೇರೆ ರಾಜ್ಯದಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳು ನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು, ಆಂಧ್ರ ಪ್ರದೇಶದಲ್ಲಿ ಭೋಗಿ ಹಬ್ಬ, ಗುಜರಾತಿನಲ್ಲಿ ಉತ್ತರಾಯಣ, ಪಂಜಾಬ್ ನಲ್ಲಿ ಲೊಹ್ರಿ, ಅಸ್ಸಾಂನಲ್ಲಿ ಮಾಘು ಬಿಹು ಮತ್ತು ಸಿಖ್ ಸಮುದಾಯದವರು ವೈಸಾಖಿ ಎನ್ನುತ್ತಾರೆ.

ವರ್ಷದ ಪ್ರಥಮ ಹಬ್ಬಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಮಕರ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.

ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ಬಳಿ ಉತ್ತರಾಯಣ ಗಾಳಿ ಪಟ ಹಾರಿಸುವ ಆಚರಣೆಯ ಚಿತ್ರಗಳನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.

Categories
Breaking News District Political State

ಜಾತಿ ಲೆಕ್ಕಾಚಾರ ಹಾಕುವ ಸಿದ್ದರಾಮಯ್ಯ ಎನ್‌ಆರ್‌ಸಿ ಯಾಕೆ ವಿರೋಧಿಸುತ್ತಾರೆ – ಸೊಗಡು ಶಿವಣ್ಣ

ಯಾವ್ಯಾವ ಜಾತಿಯವರು ಎಷ್ಟಿದ್ದಾರೆ ಎಂದು ಜಾತಿ ಲೆಕ್ಕಾಚಾರ ಹಾಕುವ ಸಿದ್ದರಾಮಯ್ಯರನವರು ಪ್ರಜೆಗಳ ನೋಂದಣಿ ಮಾಡುವ ಎನ್ ಆರ್.ಸಿಯನ್ನು ಯಾಕೆ ವಿರೋಧಿಸುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದರಾಮಯ್ಯರ ವಿರುದ್ದ ಹರಿಹಾಯ್ಧಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎನ್ ಆರ್. ಸಿ‌ ನೋಂದಣಿ ಮಾಡಿದರೆ ದೇಶದ ಪ್ರಜೆಗಳಿಗೆ ಉಪಯಕ್ತವಾಗುತ್ತದೆ. ಆದರೆ ಜಾತಿ ಗಣತಿ ಮಾಡಿದರೆ ಏನು ಲಾಭ ಎಂದು ಕಟುಕಿದ್ದಾರೆ. ಭಾರತದ ಮುಸ್ಲಿಮರು ಮೂಲತಃ ಹಿಂದುಗಳೇ ಆಗಿದ್ದಾರೆ. ಮತಾಂತರಗೊಂಡು ಮುಸಲ್ಮಾನರಾಗಿದ್ದಾರೆ. ನಾವೆಲ್ಲಾ ಅಣ್ಣತಮ್ಮರಂತೆ ಇದ್ದೆವೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಗಳು ಸೇರಿ ಬೆಂಕಿ ಇಡುವ ಕೆಲಸ ಮಾಡುತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾವ ಮುಸಲ್ಮಾನರಿಗೂ ತೊಂದರೆಯಾಗಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಸೋನಿಯಾ ಗಾಂಧಿ, ತಸ್ಲಿಮಾ ನಸ್ರಿನ್ , ಮಲಾಲಾ ಭಾರತ ಪೌರತ್ವ ನೀಡಿಲ್ವೆ ಎಂದು ಪ್ರಶ್ನಿಸಿದದ್ದಾರೆ. ಶ್ರೀಲಂಕಾ, ನೇಪಾಳದ ಹಿಂದುಗಳು ಯಾಕೆ ಪೌರತ್ವ ಕಾಯಿದೆ ಅಡಿ ಬರಲ್ಲಾ ಅವರು ಹಿಂದುಗಳು ಅಲ್ವಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸೊಗಡು ಬಳಿ ಉತ್ತರಿಸಲು ತಡವರಿಸಿದರು. ಯಾವುದೇ ತಯಾರಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿ ಮುಜುಗರಕ್ಕೆ ಒಳಗಾದ್ರು ಎಂದರು.

Categories
Breaking News District State

ಇಲ್ಲಿ ಗುರುವಾರಕ್ಕೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ!! : ಯಾಕೆ ಬರ್ತಾರೆ ಗೊತ್ತಾ!?

ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಪ್ರತಿ ಗುರುವಾರಕ್ಕೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಯಾಕೆ ಬರ್ತಿದ್ದಾರೆ ಅನ್ನುವ ಕುತೂಹಲ ನಿಮಗೂ ಇರಬಹುದಲ್ಲಾ.

ಹೌದು… ಪೊಲೀಸ್ ಇಲಾಖೆ ಜನಸ್ನೇಹಿ, ಸಮಾಜಮುಖಿಯಾಗಲಿ ಎಂದು ತೆರೆದ ಮನೆ ಅನ್ನೋ ಕಾರ್ಯಕ್ರಮ ಜಾರಿಗೆ ತಂದಿದೆ.

ಏನಿದು ತೆರೆದ ಮನೆ!?:
ಶಾಲಾ ಮಕ್ಕಳು ಮುಕ್ತವಾಗಿ ಈ ತೆರೆದ ಮನೆಗೆ ಬರುತ್ತಾರೆ.ತೆರೆದ ಮನೆ ಅಂದರೆ ಪೊಲೀಸ್ ಠಾಣೆ.. ಪೊಲೀಸರು ಎಂದರೆ ಭಯ, ಕಾನೂನು, ಇವೆಲ್ಲ ಸಾಮಾನ್ಯವಾಗಿರುತ್ತೆ.ಆದ್ರೆ ಶಾಲಾ ಮಕ್ಕಳಿಗೂ ಪೊಲೀಸ್ ಠಾಣೆಯಲ್ಲಿ ದೈನಂದಿನ ಕಾರ್ಯ ಏನೇನು ನಡೆಯುತ್ತೆ. ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ. ಬಾಂಧವ್ಯ ವೃದ್ಧಿಗೆ.

ಕಾನೂನು ತಿಳುವಳಿಕೆ,ಮಕ್ಕಳ ಸುರಕ್ಷಿತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ.ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದ್ರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆ.ತೆರೆದ ಮನೆ ಕಾರ್ಯಕ್ರಮ ರಾಜ್ಯದಾದ್ಯಂತ ಜಾರಿಯಲ್ಲಿದ್ದು,ತೆರೆದ ಮನೆಯಲ್ಲಿ ಶಾಲಾಮಕ್ಕಳು ಸಹಿತ ಕಾನೂನು ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

ಕಾನೂನು ಪಾಲನೆಯಲ್ಲಿ ನಮ್ಮ ಪಾತ್ರಯೇನು,ಶಾಲಾ ಮಗುವಿನ ಆ ಮೂಲಕ ಕುಟುಂಬಸ್ಥರಿಗೂ ಕಾನೂನಿನ ತಿಳುವಳಿಕೆ ವರ್ಗಾಯಿಸೋದು ಇದರ ಉದ್ದೇಶವಿದೆ.ಇನ್ನು ಪೊಲೀಸರು ಸಮಾಜದ ಒಂದು ಭಾಗ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರದೂ ಕರ್ತವ್ಯ.. ಪೊಲೀಸರು ಸಮಾಜದೊಂದಿಗೆ ಹೇಗಿರಬೇಕು, ನಾಗರಿಕರು ಪೊಲೀಸರೊಂದಿಗೆ ಹೇಗಿರಬೇಕು,ಪರಸ್ಪರ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮಾಜಮುಖಿ,ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ತೆರೆದ ಮನೆ ಸಹಕಾರಿಯಾಗುತ್ತಿದೆ..

ಬಾಗಲಕೋಟೆಯಲ್ಲಿ ತೆರೆದ ಮನೆ ಪರಿಣಾಮಕಾರಿ ಜಾರಿ; ಬಾಗಲಕೋಟೆ ಜಿಲ್ಲೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ.ಕಡ್ಡಾಯವಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಸುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಕಟ್ಟಪ್ಪಣೆ ಹೊರಡಿಸಿದ್ದಾರೆ.ಅದರ ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯಲ್ಲಿನ ೨೩ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿ ನಡೆಯುತ್ತಿದೆ.

ಇನ್ನು ಈ ಹಿಂದೆ ತೆರೆದ ಬಾಗಿಲು ಎಂದು ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.ದೇವದಾಸಿಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ತೆರೆದ ಬಾಗಿಲು ಮೂಲಕ ನಡೆಯುತ್ತಿತ್ತು.ಇದೀಗ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮ ನಡೆಯುತ್ತಿದೆ.. ಜಿಲ್ಲೆಯಲ್ಲಿನ ೨೩ಪೊಲೀಸ್ ಠಾಣಾ ವ್ಯಾಪ್ತಿಯ ಒಂದೊಂದು ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬಂದು ಕಾನೂನು ತಿಳುವಳಿಕೆ ಪಡೆಯುತ್ತಿದ್ದಾರೆ.. ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯುತ್ತಿರೋದ್ರಿಂದ ಪ್ರಶಂಸೆಗೆ ಕಾರಣವಾಗಿದೆ.

ಪೊಲೀಸ್ ಇಲಾಖೆ ಜನಸ್ನೇಹಿ,ಮಕ್ಕಳ ಸ್ನೇಹಿಯಾಗಲು ತೆರೆದ ಮನೆ ಕಾರ್ಯಕ್ರಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ.ಶಾಲಾ ಮಕ್ಕಳು,ಹಾಗೂ ಪೊಲೀಸರ ಮಧ್ಯೆ ಬಾಂಧವ್ಯ ವೃದ್ಧಿಯಾಗುವದರೊಂದಿಗೆ ಮಕ್ಕಳು ಕಾನೂನು ತಿಳಿವಳಿಕೆ, ಪೊಲೀಸರ ಕಾರ್ಯನಿರ್ವಹಣೆ ತಿಳಿದುಕೊಳ್ಳಲು ತೆರೆದ ಮನೆ ವೇದಿಕೆಯಾಗಿದೆ-