Categories
Breaking News National Political

ಸಿಎಎ ಪ್ರತಿಭಟನೆ ವೇಳೆ ಆಜಾದಿ ಘೋಷಣೆ ಕೂಗುವವರ ವಿರುದ್ಧ ದೇಶದ್ರೋಹದ ಪ್ರಕರಣ..!

ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಆಜಾದಿ ಘೋಷಣೆ ಕೂಗುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಯಾರಾದರೂ ಪ್ರತಿಭಟನೆಯ ಹೆಸರಿನಲ್ಲಿ ಅಜಾದಿ ಘೋಷಣೆಗಳನ್ನು ಕೂಗಿದರೆ ದೇಶದ್ರೋಹ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಭಾರತದಲ್ಲಿಯೇ ಇದ್ದು, ದೇಶದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮನೆಯಲ್ಲಿ ಕುಳಿತ ಪುರುಷರು, ಪ್ರತಿಭಟನೆ ನಡೆಸಲು ಮಕ್ಕಳು ಮತ್ತು ಮಹಿಳೆಯರನ್ನು ಬೀದಿಗೆ ಕಳುಹಿಸುತ್ತಿರುವುದು ನಾಚಿಕೆಗೇಡುತನ ಎಂದು ಹೇಳಿದ್ದಾರೆ.

Categories
Breaking News District National Political State

ಸಿಎಎ ವಿರುದ್ಧ ಇಂದು ಬೃಹತ್ ಸಮಾವೇಶ : ಕಲಬುರ್ಗಿಯತ್ತ ಮುಖ ಮಾಡಿದ ರಾಷ್ಟ್ರೀಯ ನಾಯಕರು

ಕಲಬುರ್ಗಿಯಲ್ಲಿ ಸಿಎಎ, ಎನ್.ಆರ್.ಸಿ. ವಿರೋಧಿ ಹೋರಾಟಗಳು ತೀವ್ರಗೊಂಡಿವೆ. ನಿತ್ಯ ಒಂದಲ್ಲ ಒಂದು ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಪೌರತ್ವ ಮಸೂದೆ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ತರಲು ಇಂದು ಪೀರ್ ಬಂಗಾಲಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ರಾಷ್ಟ್ರಮಟ್ಟದ ಘಟಾನುಘಟಿ ನಾಯಕರು ಕಲಬುರ್ಗಿಯತ್ತ ಮುಖಮಾಡಿದ್ದಾರೆ.

ಕಲಬುರ್ಗಿ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಸಿಎಎ, ಎನ್.ಆರ್.ಸಿ. ವಿರೋಧಿಸಿ ಕಲಬುರ್ಗಿಯಲ್ಲಿ ಇಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಪೀರ್ ಬಂಗಾಲಿ ಮೈದಾನದಲ್ಲಿ ಮದ್ಯಾಹ್ನ 3 ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಎಸ್.ಯು.ಸಿ.ಐ. ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸೋ ನಿರೀಕ್ಷೆಯಿದೆ. ಅದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಎಸ್.ಯು.ಸಿ.ಐ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್.ಸುನಿತ ಕುಮಾರ್ ಮತ್ತಿತರ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಮಾವೇಶದ ಹಿನ್ನೆಲೆಯಲ್ಲಿ ಪೀರ್ ಬಂಗಾಲಿ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಮೈದಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನೂ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಕಲಬುರ್ಗಿ ನಗರದ ಆಯಕಟ್ಟಿನ ಸ್ಥಳ ಮತ್ತು ಸಮಾವೇಶ ನಡೆಯೋ ಮೈದಾನ ಮತ್ತಿತರ ಕಡೆ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಸಿಎಎ ಪರ ಸಮಾವೇಶ ಮಾಡಿದ ನಂತರ ಸಿಎಎ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಅಲ್ಲದೆ ಕಲಬುರ್ಗಿಯಲ್ಲಿ ನಾಗರೀಕ ಸಮಿತಿ ಸಿಎಎ ಪರ ಹಮ್ಮಿಕೊಂಡಿದ್ದ ಬೃಹತ್ ರಾಲಿಯ ನಂತರ ನಡೆಯುತ್ತಿರುವ ಸಿಎಎ ವಿರೋಧಿ ಬೃಹತ್ ಸಮಾವೇಶ ಇದಾಗಿದ್ದು, ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಷ್ಟ್ರಮಟ್ಟದ ಘಟಾನುಘಟಿ ನಾಯಕರು ಕಲಬುರ್ಗಿಗೆ ಆಗಮಿಸಿ, ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಪೌರತ್ವ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸುವವರಿದ್ದಾರೆ.

ಮತ್ತೊಂದೆಡೆ ಪೌರತ್ವ ಮಸೂದೆ ಸಮಾವೇಶಕ್ಕೆ ಭಾಗಿಯಾಗಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕವೂ ಜನ ಆಗಮಿಸುತ್ತಿದ್ದಾರೆ. ಸುರಪುರ, ಯಾದಗಿರಿ, ರಾಯಚೂರು ಜಿಲ್ಲೆ ಮತ್ತಿತರ ಕಡೆಗಳಿಂದ ಜನ ಪಾದಯಾತ್ರೆ ಮೂಲಕ ಕಲಬುರ್ಗಿಗೆ ಆಗಮಿಸುತ್ತಿದ್ದಾರೆ.

Categories
Breaking News District Political State

ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಹರಿಹರ ಸ್ವಾಮೀಜಿ ವಿರುದ್ಧ ಯತ್ನಾಳ ವಾಗ್ದಾಳಿ…

ಹರಿಹರ ಸ್ವಾಮೀಜಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಕೊಡಿ ಎಂದ ಸ್ವಾಮಿಜಿಯವರು  ವರ್ತನೆ ತಿದ್ದಿಕೊಳ್ಳಬೇಕೆಂದು ಹರಿಹರ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ‌ ಬಸನಗೌಡ ರಾ. ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಿನ್ನೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, “”ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ” ಎಂದು ಹೇಳಿದರು. ಇದಕ್ಕೆ ಸಿಎಂ ಯಡಿಯೂರಪ್ಪ ಕೆಂಡಮಂಡಲವಾಗಿ ಎಚ್ಚರಿಕೆ ಬೇಡ ಸಲಹೆ ಕೊಂಡಿ ಎಂದು ಕೋಪಗೊಂಡಿದ್ದರು.

ಇದೇ ವಿಚಾರಕ್ಕೆ ಇಂದು ಯತ್ನಾಳ್ ಗರಂ ಆಗಿದ್ದಾರೆ . ಇಂದು ಮಾದ್ಯಮದೊಂದಿಗೆ ಮಾತನಾಡಿದ ಯತ್ನಾಳ್, ಯಾರೂ ಗೊಡ್ಡ ಬೆದರಿಕೆ ಹಾಕಬಾರದು. ನಾವೆಲ್ಲ ಸಿಎಂ‌ ಪರ ಗಟ್ಟಿಯಾಗಿದ್ದೇವೆ. ಮಠಾಧೀಶರಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು. ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡಬೇಕು. ನನಗೂ ಸಚಿವನಾಗಲು ಅರ್ಹತೆ ಇದೆ. ಆದರೆ, ನಾನು ಸಚಿವ ಸ್ಥಾನ ಬೇಡಲ್ಲ. ಸಿಎಂ ರನ್ನು‌ ಕಾರ್ಯಕ್ರಮಕ್ಜೆ ಅವಮಾನಿಸಿದ್ದು ಸರಿಯಲ್ಲ.”

ಈ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರಂಥ ಲಿಂಗಾಯಿತ ನಾಯಕರಿಗೆ ನಮ್ಮವರೇ ಮುಳುವಾದರು. ಉತ್ತರ ಕರ್ನಾಟಕ ಪ್ರವಾಹ ಬಂದಾಗ ಸ್ವಾಮೀಜಿ ಯಾಕೆ ಧ್ವನಿ ಎತ್ತಲಿಲ್ಲ. ಇಂಥವರ ಮಾರ್ಗದರ್ಶನದಲ್ಲಿ ಸಚಿವರಾದರೆ ಪ್ರತಿದಿನ ಇವರ ಮಠದ ಎದುರು ನಿಲ್ಲಬೇಕಾಗುತ್ತೆ. ನಿನ್ನೆ ನಿರಾಣಿ ಮಾಡಿದ್ದು ತಪ್ಪು. ನಿರಾಣಿ ಸಿಎಂಗೆ ತಂದೆ ಸಮಾನ ಅಂತಾರೆ. ಹಾಗಿದ್ದರೆ ಹೀಗೇಕೆ‌ ಮಾಡಿದ್ರು? ನಿರಾಣಿ ಕೂಡಲ ಸಂಗಮ, ಹರಿಹರ ಎರಡೂ ಮಠಗಳನ್ನು ನಿಭಾಯಿಸಲು ಹೊರಟಿದ್ದಾರೆ.

ನಿರಾಣಿ ಮತ್ತು ಸ್ವಾಮೀಜಿಗಳ ಈ ನಡೆಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಇಬ್ಬರು ನಿರಾಣಿ ಸಹೋದರರು‌ ಕೂಡಲ ಸಂಗಮ ಮ್ಯಾನೇಜ್ ಮಾಡ್ತಿದ್ದಾರೆ. ಮುರುಗೇಶ ನಿರಾಣಿ ಹರಿಹರ ಪರ ಮ್ಯಾನೇಜ್ ಮಾಡ್ತಿದ್ದಾರೆ. ನಿರಾಣಿ ಅವರ ಮನೆಯ ಬೆಕ್ಕು,ನಾಯಿಗೂ ಸ್ಥಾನಮಾನ ಕೇಳುತ್ತಾರೆ. ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗ್ಬೇಕಾ? ನಿರಾಣಿ ಏನು ಉಪಕಾರ ಮಾಡಿದ್ದಾರೆ? ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

 

Categories
Breaking News District State

ನಿರ್ಭಯಾನಂದ ಸ್ವಾಮೀಜಿ ವಿರುದ್ಧ ಕೇಳಿಬಂದ ಕಿರುಕುಳದ ಆರೋಪ : ಇದು ನಿಜಾನಾ?

ಅದು ರಾಜ್ಯದ ಪ್ರತಿಷ್ಠಿತ ಸ್ವಾಮೀಜಿ ವಿರುದ್ಧ ಕೇಳಿ ಬಂದ ಆರೋಪ, ಸ್ವಾಮೀಜಿ ಕಿರುಕುಳದ ಭಯಕ್ಕೆ ಕಣ್ಣೀರಿಟ್ಟ ಸನ್ಯಾಸಿ ಮಾತಾಶ್ರೀ. ಅಷ್ಟಕ್ಕೂ ಆ ಸ್ವಾಮೀಜಿ ಮಾಡಿದ್ದಾದರು ಏನೂ ಅ ಸನ್ಯಾಸಿನಿ ಕಣ್ಣಿರಿಟ್ಟಿದ್ದಾದರು ಏಕೆ ಅಂತಿರಾ ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ.

ಅದು ರಾಜ್ಯದಲ್ಲಿ ದೊಡ್ಡದಾದ ಸೇವಾ ಆಶ್ರಮ. ಅಂತಹ ಆಶ್ರಮದ ಸ್ವಾಮೀಜಿ ವಿರುದ್ದವೆ ಹೆಣ್ಣುಮಕ್ಕಳಿಗೆ ಕಿರುಕುಳದ ಆರೋಪ ಕೇಳಿಬಂದಿದೆ ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಭಾಗ್ಯಲಕ್ಷ್ಮಿ ನಗರದಲ್ಲಿರುವ ಶ್ರೀ ಶಾರದಾದೇವಿ ಸೇವಾಶ್ರಮದ ಸನ್ಯಾಸಿನಿ ಭಕ್ತಿಮಯಿ ಮಾತಾಶ್ರೀ ಇಂತಹದೊಂದು ಗಂಭೀರ ಆರೋಪವನ್ನ ಮಾಡಿದ್ದಾರೆ, ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅವರು ಮನಗೂಳಿ ಶಾಲೆ ಹಾಸ್ಟೆಲ್ ದಲ್ಲಿ ಹೆಣ್ಣು ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳುತ್ತ್ತಿಲ್ಲ .ಈ ಬಗ್ಗೆ ಅವರ ಗುಟ್ಟು ರಟ್ಟು ಆಗುತ್ತದೆ ಎಂದು ಸ್ವಾಮೀಜಿ ನನಗೆ ಬೆದರಿಕೆ ಹಾಕುತ್ತಿದ್ದಾರೆ, ಗದಗ, ವಿಜಯಪುರ ಸೇರಿದಂತೆ ಹಲವು ಕಡೆಗೆ ರಾಮಕೃಷ್ಣಾಶ್ರಮದ ಶಾಖೆಗಳಿವೆ. ನಿರ್ಭಯಾನಂದ ಸ್ವಾಮೀಜಿ ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂದು ನಿರ್ಭಯಾನಂದ ಸ್ವಾಮೀಜಿ ವಿರುದ್ಧ ಮಾತಾಜಿ ಆರೋಪ ಮಾಡಿದ್ದಾರೆ .

ಇನ್ನು ಕೆಲವು ವರ್ಷಗಳ ಹಿಂದೆ ಅವರ ಶಿಷ್ಯೆಯಾಗಿ ರಾಮಕೃಷ್ಣಾಶ್ರಮದಲ್ಲಿ ಕಾರ್ಯನಿರ್ವಹಿಸಿದ್ದ ಮಾತಾಜಿ ಭಕ್ತಿಮಯಿ , ತಾನು 2010-12 ರ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದಲ್ಲಿ ಆಶ್ರಮಕ್ಕೆ ಸೇರಿರೋ ಲೇಡಿಸ್ ಹಾಸ್ಟೆಲ್ ನಲ್ಲಿ ಯುವತಿಯರಿಗೆ ಅನ್ಯಾಯ ಆಗುತ್ತಿತ್ತು , ಹಾಸ್ಟೆಲ್ ನಲ್ಲಿ ಸರಿಯಾದ ಬಾಗಿಲುಗಳ ವ್ಯವಸ್ಥೆ ಮಾಡಿರಲಿಲ್ಲ ರಾತ್ರಿ ಹೆಣ್ಣುಮಕ್ಕಳಿರುವ ಜಾಗಕ್ಕೆ ಗಂಡ ಮಕ್ಕಳು ಬಂದು ಮಲಗಿ ಹೋಗ್ತಾ ಇದ್ರು ಅನ್ನುವಂತಹ ಗಂಭೀರ ಆರೋಪ ಮಾಡಿದ್ರು ಮಾತಾಜಿ ಅನಾಚಾರಗಳನ್ನೆಲ್ಲ ಹೊರಗೆ ಹಾಕುತ್ತಾರೆ ಎಂಬ ಭಯದಿಂದ ನನಗೆ ಈಗ ತೊಂದರೆ ಕೊಡುತ್ತಿದ್ದಾರೆ ಚಿಕ್ಕೋಡಿಯಲ್ಲಿನ ಆಶ್ರಮ ಬಂದ್ ಮಾಡಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ನಿರ್ಭಯಾನಂದ ಸ್ವಾಮೀಜಿ ವಿರುದ್ದ ಆರೋಪಿಸಿ ಕಣ್ಣಿರಿಟ್ಟಿದ್ದಾರೆ ಮಾತಾಜಿ ಭಕ್ತಿಮಯಿ .

ಒಟ್ಟಿನಲ್ಲಿ ನಿರ್ಭಯಾನಂದ ಸ್ವಾಮೀಜಿ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದ್ರು ಸಹ ನಿರ್ಭಯಾನಂದ ಸ್ವಾಮೀಜಿ ಮಾತ್ರ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಾತಾಜಿ ಆರೋಪಗಳು ನಿಜಕ್ಕೂ ಸತ್ಯವಾ ಅನ್ನೋದನ್ನ ಸ್ವತಃ ಸ್ವಾಮೀಜಿಯೆ ಸ್ಪಷ್ಟಪಡಿಸಬೇಕು.

Categories
Breaking News District Political State

‘ನನ್ನ ಜೊತೆ ಮಿಸ್ ಬಿಹೇವ್ ಮಾಡ್ತಿದ್ದಾರೆ’ ಶಾಸಕ ಕೆಎಂ.ಶಿವಲಿಂಗೇಗೌಡ ವಿರುದ್ಧ ಮಹಿಳೆ ಆರೋಪ

ಇವರು ನನ್ನ ತಳ್ಳುತ್ತಿದ್ದಾರೆ.. ನನ್ನ ಜೊತೆ ಮಿಸ್ ಬಿಹೇವ್ ಮಾಡ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಕೆಎಂ.ಶಿವಲಿಂಗೇಗೌಡ ವಿರುದ್ಧ ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಅರಸೀಕೆರೆ ನಗರದ ಅಂಚೆಕೊಪ್ಪಲಿಂದ ಅರಸೀಕೆರೆ ನಗರಕ್ಕೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಮೇಲ್ಸೇತುವೆಗೆ ಮನವಿ ಪತ್ರ ಸಲ್ಲಿಸಲು ಶಾಸಕ ಶಿವಲಿಂಗೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ರು. ಇದರಲ್ಲಿ ನೈರುತ್ಯ ರೈಲ್ವೆ ವಿಭಾಗದ ಜಿಎಂ ಅಜಯ್ ಕುಮಾರ್ ಸಿಂಗ್ ಮತ್ತು ಮೈಸೂರು ವಿಭಾಗದ ಡಿ ಆರ್ ಎಂ, ಅನ್ನಪೂರ್ಣ ಖರ್ಗ್ ಇದ್ದರು.  ಈ ವೇಳೆ ಮಹಿಳಾ ಅಧಿಕಾರಿ ಅನ್ನಪೂರ್ಣ ಖರ್ಗ್ ಅವರು ಹಿಂದೆ ನಿಂತಿದ್ದ ಶಾಸಕ ಶಿವಲಿಂಗೇಗೌಡರ ವಿರುದ್ಧ ಅಧಿಕಾರಿಗಳು ಚರ್ಚೆ ನಡೆಸುತ್ತಿರುವಾಗಲೇ ಏಕಾಏಕಿ ಆಕ್ರೋಶ ಹೊರ ಹಾಕಿದ್ದಾರೆ.

ಈ ವೇಳೆ ಶಾಸಕ ಶಿವಲಿಂಗೇಗೌಡ ಹಿಂದೆಯಿಂದ ಜನ ತಳ್ಳಿದಾಗ ನಾನು ಮುಂದೆ ಬಂದೆ. ಏನು ಇದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಎಂದು ಮಹಿಳಾ ಅಧಿಕಾರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ತಕ್ಷಣ ಅಧಿಕಾರಿಗಳು ಮತ್ತು ಸ್ಥಳೀಯರು ಮಹಿಳಾ ಅಧಿಕಾರಿಗೆ ಅವರ ಬಗ್ಗೆ ತಪ್ಪು ತಿಳಯಬೇಡಿ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮಹಿಳಾ ಅಧಿಕಾರಿ ಮುನಿಸಿಕೊಂಡು ರೈಲು ಹತ್ತಿ ಕುಳಿತರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

 

 

 

 

Categories
Breaking News District Political State

ಹೆಚ್.ಡಿ.‌ ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರ ವಿರುದ್ಧ 200 ಎಕರೆ ಭೂ ಕಬಳಿಕೆ ಆರೋಪ!

ಮಾಜಿ‌ ಸಿಎಂ ಎಚ್.ಡಿ.‌ ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ.

ಇಂಥಹದೊಂದು ಆರೋಪವನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ, ಎಸ್.ಆರ್. ಹಿರೇಮಠ ಅವರು ಮಾಡಿದ್ದಾರೆ. ಧಾರವಾಡದಲ್ಲಿ‌ ಸುದ್ದಿಗೋಷ್ಠಿ ನಡೆದ ಭೂ ಕಬಳಿಕೆ ದಾಖಲೆಗಳನ್ನು ಹಿರೇಮಠ್ ಅವರು ಬಿಡುಗಡೆ ಮಾಡಿದ್ದಾರೆ.

ರಾಮನಗರ ಜಿಲ್ಲೆಯ ಕೇತಿ್ಅನ ಹಳ್ಳಿಯಲ್ಲಿ 200 ಎಕರೆ ಭೂ ಕಬಳಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ.‌ ಕುಮಾರಸ್ವಾಮಿ, ದೇವೆಗೌಡರ ಪತ್ನಿಯ ಸಹೋದರಿ ಸಾವಿತ್ರಮ್ಮ, ಸಂಬಂಧಿ ಡಿ.ಸಿ. ತಮ್ಮಣ್ಣ ಹಾಗೂ ತಮ್ಮಣ್ಣ ಸೋದರ ನಂಜುಡಯ್ಯರಿಂದ ಭೂ ಕಬಳಿಕೆಯಾಗಿದೆ. ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನು ಕಬಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ 131 ಪುಟಗಳ ರಿಟ್ ಪಿಟಿಷನ್ ಹಾಕಿದ್ದೇವೆ. ಹೈಕೋರ್ಟ್‌ನಲ್ಲಿ ವಿಚಾರಣೆಗೂ ಬಂದಿದೆ. ಮುಂದಿನ ಮಂಗಳವಾರ ಈ ಪ್ರಕರಣ ನ್ಯಾಯಾಲಯದ ಎದುರು ಬರಲಿದೆ.

ಈ ಬಗ್ಗೆ 2014 ರ ಆಗಸ್ಟ್ 5 ರಂದು ಲೋಕಾಯುಕ್ತರು ಐದು ಪುಟಗಳ ಆದೇಶ ಹೊರಡಿಸಿ, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ನಾಲ್ಕು ತಿಂಗಳೊಳಗೆ ಕ್ರಮ ಕೈಗೊಳ್ಳಲು ತಿಳಿಸಿತ್ತು.

ಕಬಳಿಕೆಯಾದ ಭೂಮಿ ಸರ್ಕಾರದ ವಶಕ್ಕೆ ಪಡೆದು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಸರ್ಕಾರದ ಭೂಮಿ‌ ಸರ್ಕಾರಕ್ಕೆ ಮರಳಿ‌ ಬರಬೇಕು. ಕಬಳಿಸಿದವರು ಹಾಗೂ ಕಬಳಿಸಲು ಅನುಕೂಲ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಆ್ಯಕ್ಷನ್ ಆಗಬೇಕು ಅಂತಾ ನಾವು ದೂರಿನಲ್ಲಿ ಕೇಳಿದ್ದೇವೆ ಎಂದಿದ್ದಾರೆ.

Categories
Breaking News District Political State

ಈರುಳ್ಳಿ ಹಾರ ಹಾಕಲು ಯತ್ನಿಸಿದ ಮಹಿಳೆ ವಿರುದ್ಧ ಹಲ್ಲೆ ಆರೋಪ ಮಾಡಿದ ಶೋಭಕ್ಕ..!

ಬೆಲೆ‌‌ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನ ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ಮಾಡಲಾಗುತ್ತಿದ್ದ ವೇಳೆ ಸಂಸದೆ ಶೋಭಾ ಕರಂದ್ಲಾಜೆಗೆ ಈರುಳ್ಳಿ ಹಾರ ಹಾಕಲು ಯತ್ನಿಸಿದ ಮಹಿಳಾ ಕಾಂಗ್ರೆಸ್ ನಾಯಕಿಗೆ ಸಂಸದೆ ಶೋಭಾ ಕರಂದ್ಲಾಜೆ ಯಿಂದ ಹಲ್ಲೆ ಆರೋಪ ಮಾಡಲಾಗಿದೆ.

ರಸ್ತೆಯಲ್ಲೇ ಪಕೋಡ ತಯಾರಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ  ಮಹಿಳೆಯರು ಈರುಳ್ಳಿ ಹಾರ ಹಾಕಿಕೊಂಡು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ಬೆಲೆ ಏರಿಕೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಶೋಭಾಗೆ ಈರುಳ್ಳಿ ಹಾರ ಹಾಕಲು ಯತ್ನಿಸಿದ ಮಹಿಳೆ ಮೇಲೆ ಶೋಭಾ ಹಲ್ಲೆ ಆರೋಪ ಮಾಡಲಾಗಿದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಗೀನಾ ಎಂಬುವವರ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ.

ಶೋಭಾ ಕರಂದ್ಲಾಜೆ ಮನವಿ ಸ್ವೀಕರಿಸದೇ ಕಾರ್ ನಲ್ಲಿ ತೆರಳುತ್ತಿದ್ದ ವೇಳೆ ಈರುಳ್ಳಿ ಹಾರ ಹಾಕಲು ಯತ್ನಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮೇಲೆ ಹಲ್ಲೆ ಆರೋಪ ಮಾಡುವುದರೊಂದಿಗೆ ಹಲ್ಲೆ ಮಾಡಲಾಗಿದೆ ಎಂದೇಲಲಾಗುತ್ತಿದೆ.

 

Categories
Breaking News District Political State

ಕನ್ನಡಪರ ಹೋರಾಟಗಾರರ ವಿರುದ್ಧ ಸಚಿವ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ..!

ಇಂದು ಸಿಎಎ ಪರ ಪ್ರಚಾರಾಂದೋಲನದಲ್ಲಿ ನಿರತರಾಗಿದ್ದ ಸಚಿವ ಸಿ.ಟಿ ರವಿ ಕನ್ನಡಪರ ಹೋರಾಟಗಾರರು ತುಕಡೆ ತುಕಡೆ ಗ್ಯಾಂಗ್‌‌ನೊಡನೆ ಸಂಬಂಧ ಹೊಂದಿದ್ದಾರೆ, ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಪ್ರತಿ ಸಂದರ್ಭದಲ್ಲಿಯೂ ಗಲಭೆ ಹುಟ್ಟುಹಾಕಲು ಸಂಚು ಹೂಡುವ ಜನ ಇದ್ದಾರೆ. ಅವರಿಗೆ ತುಕಡೆ ಗ್ಯಾಂಗ್‌ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಹಾಯ ಮಾಡುತ್ತಿದೆ. ತುಕಡೆ ಗ್ಯಾಂಗ್‌ನ ಸಹಾಯದಿಂದ ಅವರ ಉದ್ದೇಶ ಸಮಾಜವನ್ನು ಎಷ್ಟು ಸಾಧ್ಯ ಅಷ್ಟು ಛಿದ್ರ ಛಿದ್ರವಾಗಿ ಒಡೆಯುವುದು. ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಲಭ ಎಂಬ ಮಾನಸಿಕ ಸ್ಥಿತಿಯ ಜನ ಗಲಾಟೆಗೆ ಪ್ರಚೋದನೆ ಕೊಡುತ್ತಿದ್ದಾರೆ.

ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. 99% ಕನ್ನಡಿಗರು ತಮಿಳರು ಸೌಹಾರ್ದತೆಯಿಂದ ಇದ್ದಾರೆ. 99% ಕನ್ನಡಿಗರು ಮಲೆಯಾಳಿಗರು ಸೌಹಾರ್ದತೆಯಿಂದ ಇದ್ದಾರೆ. 99% ಕನ್ನಡಿಗರು ಮರಾಠಿಗರು ಸೌಹಾರ್ದತೆಯಿಂದ ಇದ್ದಾರೆ. ಸೌಹಾರ್ದತೆ ಕೆಡಿಸುವ ಜನರನ್ನು ಹೊರಗಿಡಬೇಕು, ಸೌಹಾರ್ದತೆ ಉಳಿಸಿಕೊಳ್ಳಬೇಕು.

ಇನ್ನು ಸಿ.ಟಿಯವರು ಈ ಹೇಳಿಕೆಯನ್ನು ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ. ದೇಶವನ್ನು ಜಾತಿಧರ್ಮದ ಆಧಾರದಲ್ಲಿ ಒಡೆಯುತ್ತಿರುವುದು ಸಿ.ಟಿ ರವಿಯವರ ಬಿಜೆಪಿ ಪಕ್ಷವೇ ಹೊರತು ಕನ್ನಡ ಹೋರಾಟಗಾರರಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಹಿಂದೆಯೂ ಸಹ ಸಿ.ಟಿ ರವಿಯವರು ’ಮನೆಹಾಳರು’ ಎಂಬ ಪದ ಪ್ರಯೋಗಿಸಿ ಟೀಕೆಗೆ ಒಳಗಾಗಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿಯವರು ಸಿ.ಟಿ ರವಿಯವರೊಡನೆ ಬಹಿರಂಗ ವೇದಿಕೆಯಲ್ಲಿ ಶಿಸ್ತಾಗಿ ಮಾತಾಡಲು ಕಲಿಯಪ್ಪ ಎಂದು ಪಾಠ ಮಾಡಿದ್ದರು.

Categories
Breaking News District Political State

ಜೆಡಿಎಸ್-ಬಿಜೆಪಿ ನಡುವೆ ಹುಲಿ ಇಲಿ ಗಲಾಟೆ : ಹೆಚ್ಡಿಕೆ ವಿರುದ್ಧ ಸಿ.ಟಿ.ಆರ್ ಸಿಡಿಮಿಡಿ

ಜೆಡಿಎಸ್ -ಬಿಜೆಪಿ ನಡುವೆ ಹುಲಿ ಇಲಿ ಗಲಾಟೆ ಶುರುವಾಗಿದೆ.

ಹೌದು… ನಿನ್ನೆ ಹಳೇಬೀಡಿನಲ್ಲಿ ಯಡಿಯೂರಪ್ಪ ರಾಜಾ ಇಲಿ ಎಂದಿದ್ದ ಹೆಚ್ಡಿಕೆ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ ರವಿ ಸಿಡಿಮಿಡಿಗೊಂಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಹತಾಶೆ. ರಾಜಕೀಯ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಮಗನನ್ನು ಗೆಲ್ಲಿಸಲು ಆಗಲಿಲ್ಲ. ಅಪ್ಪನನ್ನು ಗೆಲ್ಲಿಸಲು ಆಗಲಿಲ್ಲ. ಈ ಎಲ್ಲಾ ಹತಾಶೆ ಹೆಚ್ಡಿಕೆ ಅವರನ್ನ ಕಾಡುತ್ತಿದೆ.

ಯಾರು “ರಾಜಾಹುಲಿ” ಯಾರು “ರಾಜಾಇಲಿ” ಅನ್ನೋದು ಗೊತ್ತಿದೆ. ಯಾರು ಹುಲಿ ಯಾರು ಅನ್ನೋದನ್ನ ಜನ ತೀರ್ಮಾನಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ 117 ಸ್ಥಾನ ಸಿಕ್ಕಿದೆ. ಇದರಿಂದ ಯಾರನ್ನ ಇಲಿ ಯಾರನ್ನ ಹುಲಿ ಮಾಡಿದ್ದಾರೆ ಗೊತ್ತಾಗುತ್ತದೆ.

 

Categories
Breaking News District National Political State

ಮೋದಿ ವಿರುದ್ಧ ಪ್ರತಿಭಟನೆಗೆಂದು ತುಮಕೂರಿಗೆ ತೆರಳಿದ ರೈತರನ್ನ ವಶಕ್ಕೆ ಪಡೆದ ಪೊಲೀಸರು..!

ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ತುಮಕೂರಿಗೆ ತೆರಳುತ್ತಿದ್ದ  15  ರೈತರನ್ನು ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಳ್ಳಂಬೆಳಗ್ಗೆ ತಮ್ಮನ್ನು ವಶಕ್ಕೆ ಪಡೆದ ಪೊಲೀಸರ ನಡೆ ಹಾಗೂ ಪ್ರಧಾನಿ ಮೋದಿ ವಿರುದ್ಧ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ. ಮಂಜಪ್ಪ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಶಿವಮೊಗ್ಗ ತಾಲೂಕಾಧ್ಯಕ್ಷ ಸಿ. ಚಂದ್ರಪ್ಪ, ಭದ್ರಾವತಿ ತಾಲೂಕಾಧ್ಯಕ್ಷ ಜಿ.ಎನ್. ಪಂಚಾಕ್ಷರಿ ಹಾಗೂ ಇತರೆ 15 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.