Categories
Breaking News National

ದೆಹಲಿ : ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಕುಲ್​ದೀಪ್​ ನಯ್ಯರ್ ಇನ್ನಿಲ್ಲ

ದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್ ವಿಧಿವಶರಾಗಿದ್ದಾರೆ. ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದು,  ಕುಲ್​ದೀಪ್​  ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ತಮ್ಮ 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

​ಕಳೆದ ಮೂರು ದಿನಗಳಿಂದ ದೆಹಲಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದ ಕುಲ್​ದೀಪ್​ರವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಸುಮಾರು 12.30ರ ಸಮಯಕ್ಕೆ ಕುಲ್​ದೀಪ್​ರವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತಿಮ ಕ್ರಿಯೆ 1 ಗಂಟೆಗೆ ಲೋಧಿ ರಸ್ತೆಯಲ್ಲಿರುವ ಘಾಟ್​ನಲ್ಲಿ ಅವರ ಅಂತಿಮ ಕ್ರಿಯೆ ನಡೆಯಲಿದೆ ಎನ್ನಲಾಗಿದೆ.

kuldeep nayar ಗೆ ಚಿತ್ರದ ಫಲಿತಾಂಶ

ರಾಜಕೀಯ ವಿಮರ್ಶಕ ಕುಲ್​ದೀಪ್​ ನಯ್ಯರ್​​ ​ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವಿಟರ್​ನಲ್ಲಿ “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಕಠಿಣ ನಿಲುವು, ಜನಸೇವೆ ಹಾಗೂ ಉತ್ತಮನ ಭಾರತಕ್ಕಾಗಿ ನೀವು ತೋರಿದ ಬದ್ಧತೆಯನ್ನು ಯಾವತ್ತೂ ನೆಪಿಸಿಕೊಳ್ಳಲಾಗುತ್ತದೆ” ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದ ಸಿಲ್ಕೋಟ್​ನಲ್ಲಿ 1923ರಲ್ಲಿ ಜನಿಸಿದ್ದ ನಯ್ಯರ್​, ಲಾಹೋರ್​ನಲ್ಲಿ ಕಾನೂನು ಪದವಿ ಪಡೆದಿದ್ದರು. 1990ರಲ್ಲಿ ಬ್ರಿಟನ್​ನಲ್ಲಿ ಭಾರತದ ಹೈ ಕಮಿಷನರ್​ನಂತಹ ಉನ್ನತ ಹುದ್ದೆ ಅಲಂಕರಿಸಿದ್ದ ಇವರು, ರಾಜ್ಯಸಭೆಗೆ ಸಹ ನಾಮನಿರ್ದೇಶಿತ ಸದಸ್ಯರಾಗಿದ್ದರು. ಕುಲ್​ದೀಪ್​ ನಯ್ಯರ್​ ಹಲವಾರು ಪುಸ್ತಕಗಳನ್ನು ಬರೆದಿದ್ದು, ಭಾರತ ಸರ್ಕಾರದ ಮಧ್ಯಮ ಸಲಹಾ ಅಧಿಕಾರಿಗಳಾಗಿ  ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಯುಎನ್​ಐ, ಪಿಐಬಿ, ದ ಸ್ಟೇಟ್ಸ್​ಮನ್​, ಇಂಡಿಯಾನ್​ ಎಕ್ಸ್​ಪ್ರೆಸ್​ ದೀರ್ಘಕಾಲ ಕಾರ್ಯ ನಿರ್ವಹಿಸಿದ್ದರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕುಲ್​ದೀಪ್​ ನಯ್ಯರ್​​ ​ರವರಿಗೆ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

 

Categories
Breaking News National

ದೆಹಲಿ : ಅಮಿತ್​ ಶಾ ಧ್ವಜಾರೋಹಣದ ವೇಳೆ ಎಡವಟ್ಟು : ಕಾಂಗ್ರೆಸ್​ ಪಕ್ಷದಿಂದ ವ್ಯಂಗ್ಯ….!

ದೆಹಲಿ : ಎಲ್ಲೆಡೆ 72ನೇ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದು,  ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಧ್ವಜಾರೋಹಣ ನಡೆಸುವ ವೇಳೆ ಎಡವಟ್ಟು ಮಾಡಿದ್ದನ್ನು ಕಾಂಗ್ರೆಸನವರು ವ್ಯಂಗ್ಯ ಮಾಡಿದ್ದಾರೆ.

 

ಅಮಿತ್ ಶಾ ಅವರ ನೂತನ ಕಚೇರಿಯಲ್ಲಿ ಧ್ವಜಾರೋಹಣ ಮಾಡುತ್ತಿರುವಾಗ ಬಾವುಟ  ದಿಢೀರ್​ ಎಂದು ಕೆಳಗೆ ಬಿದ್ದಿದೆ. ಕೂಡಲೇ  ಅಮಿತ್​ ಶಾ ಧ್ವಜದ ದಾರ ಎಳೆದು ಧ್ವಜಾರೋಹಣವನ್ನು ಪೂರ್ಣಗೊಳಿಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ದೇಶದ ಧ್ವಜ ಹಾರಿಸಲು ಆಗದವರು ಹೇಗೆ ದೇಶವನ್ನ ನಿಭಾಯಿಸುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್​ ಪಕ್ಷದ ಟ್ವೀಟ್​,  ದೇಶದ ಧ್ವಜವನ್ನು ನಿಭಾಯಿಸಲು ಬಾರದವರು ದೇಶವನ್ನ ಹೇಗೆ ನಿಭಾಯಿಸುತ್ತಾರೆ.  50 ವರ್ಷಗಳಿಂದ ದೇಶದ ಬಾವುಟವನ್ನು ತಿರಸ್ಕಾರ ಮಾಡಿದ್ದವರು ಇಂದು ಧ್ವಜ ಹಾರಿಸದೇ ಇದ್ದರೆ,  ಇಂದು ನಮ್ಮ ರಾಷ್ಟ್ರ ಧ್ವಜಕ್ಕೆ ಈ ರೀತಿಯ ಅಪಮಾನ ಆಗುತ್ತಿರಲಿಲ್ಲ. ಬೇರೆಯವರಿಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡೋರಿಗೆ ರಾಷ್ಟ್ರಗೀತೆಯ ನಿಯಮಗಳ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಕಾಂಗ್ರೆಸ್ ಟ್ವೀಟ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ  ವ್ಯಂಗ್ಯ ಮಾಡಿದ್ದಾರೆ.

 

 

 

 

 

 

 

 

Categories
Breaking News National Political

ಕಾಂಗ್ರೆಸ್‌ನಲ್ಲಿನ ಭಿನ್ನಮತ ಶಮನ ಮಾಡಿ, ಇಲ್ಲದಿದ್ದರೆ ಸರ್ಕಾರಕ್ಕೆ ಹೊಡೆತ ಬೀಳುತ್ತೆ : ರಾಹುಲ್‌ಗೆ HDK ಸಲಹೆ

ದೆಹಲಿ :  ದೆಹಲಿಯಲ್ಲಿ ಭಾನುವಾರ ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗ ಸಭೆಯಲ್ಲಿ ಭಾಗಿಯಾಗಿ ರಾಜ್ಯದ ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿದ್ದಾರೆ.

ದೆಹಲಿಯ ತುಘಲಕ್ ರಸ್ತೆಯ ರಾಹುಲ್ ಗಾಂಧಿಯವರ ನಿವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ, ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರ ಜೊತೆಗಿನ  ಚರ್ಚೆ ಸೌಹಾರ್ದಯುತವಾಗಿತ್ತು. ಅನೇಕ ಯೋಜನೆಗಳನ್ನು ಜಾರಿಗೆ ತರುವ ಕುರಿತು ಮಾತುಕತೆ ನಡೆಸಿದ್ದೇವೆ. ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧಿಯೇ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿರುವ ಭಿನ್ನಮತವನ್ನು ಶಮನ ಮಾಡಿ. ಇಲ್ಲದಿದ್ದರೆ ಇದು ಸರ್ಕಾರಕ್ಕೆ ನೇರ ಹೊಡೆತ ಬೀಳಲಿದೆ ಎಂದು ರಾಹುಲ್‌ಗೆ ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ ಡಿಕೆ ರಾಹುಲ್ ರನ್ನ ಭೇಟಿ ಮಾಡಲು ಮುನ್ನವೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ರಾಹುಲ್‌ ಗಾಂಧಿಯ ವರನ್ನು ಭೇಟಿ ಮಾಡಿದ್ದು, ರಾಜ್ಯ ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ, ಸಣ್ಣ ಪುಟ್ಟ ಸಮಸ್ಯೆಗಳಿವೆ ಅವೆಲ್ಲವನ್ನೂ ರಾಜ್ಯ ನಾಯಕರು ಸರಿ ಪಡಿಸುತ್ತಾರೆ ಎಂದು ರಾಹುಲ್ ಗೆ ಕೆ.ಸಿ ವೇಣುಗೋಪಾಲ್ ಮನವರಿಕೆ ಮಾಡಿದ್ದಾರೆ.

 

 

Categories
Breaking News National

ನೂರಾರು ಬಾಲಕಿಯರ ಮೇಲೆ ಅತ್ಯಾಚಾರ..!

ಅಪ್ರಾಪ್ತ ಬಾಲಕಿಯರನ್ನೇ ಗುರಿಯಾಗಿಸಿಕೊಂಡು ನೂರಾರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ ಅತ್ಯಾಚಾರಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯರ ಮೇಲೆ ಕಣ್ಣು ಹಾಕಿ ಮಕ್ಕಳಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಕರೆದುಕೊಂಡು ಹೋಗುತ್ತಿದ್ದ. ಇನ್ನೂ ಇವನು ದೆಹಲಿ, ಘಾಜಿಯಾಬಾದ್, ಅಶೋಕ್ ನಗರ ಅಪರಾಧ ಕೃತ್ಯಗಳನ್ನು ಎಸಗಿದ್ದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಮದುವೆಯಾಗಿ ಐದು ಮಕ್ಕಳ ತಂದೆಯಾಗಿರುವ ಸುನಿಲ್ ರಸ್ತೋಗಿ (38) ಬಂಧಿತ ಕಾಮುಕ. ಈತ 7 ರಿಂದ 11 ವರ್ಷದ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ನಿರ್ಜನ ಪ್ರದೇಶಗಳಿಗೆ ಕೊಂಡೊಯ್ದು ಅತ್ಯಾಚಾರ ಎಸಗಿ ಪರಾರಿಯಾಗುತ್ತಿದ್ದ. ಕಳೆದ 13 ವರ್ಷಗಳಿಂದ ಅನೇಕ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಈ ಕಾಮುಕನ ವಿರುದ್ಧ  ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ್‌ಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಅತ್ಯಾಚಾರ ನಡೆಸಿದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಆರೋಪಿ ಬಂಧನಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಿಕೊಂಡು ಈ ಶಿಶುಕಾಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Categories
Breaking News National

ಜಾತಿ ಧರ್ಮ ಆಧಾರದಲ್ಲಿ ಮತ ಕೇಳುವಂತಿಲ್ಲ: ಸುಪ್ರೀಂ

ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಜಾತಿ, ಮತ ಹಾಗೂ ಧರ್ಮದ ಆಧಾರದ ಮೇಲೆ ಮತಯಾಚನೆಯನ್ನು ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಯಾವುದೇ ರಾಜಕೀಯ ಪಕ್ಷಗಳಾಗಲಿ ಅಥವಾ ಅಭ್ಯರ್ಥಿಗಳಾಗಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಬಾರದು ಎಂದು ನ್ಯಾಯಾಧೀಶರಾದ ಟಿಎಸ್ ಠಾಕೂರ್ ನೇತೃತ್ವದ ಸಾಂವಿಧಾನಿಕ ಪೀಠ ಸೂಚನೆ ನೀಡಿದೆ  ಎನ್ನಲಾಗಿದೆ.

ಚುನಾವಣೆ ಎಂಬುದು ಜಾತ್ಯಾತೀತ ಪ್ರಕ್ರಿಯೆಯಾಗಿದ್ದು, ಆ ನಿಟ್ಟಿನಲ್ಲೇ ಅದರ ಪ್ರಕ್ರಿಯೆಗಳು ನಡೆಯಬೇಕು ಆದರೆ ಯಾವುದೇ ರಾಜಕೀಯ ಪಕ್ಷಗಳು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇನ್ನೂ ಈ ವಿಷಯಕ್ಕೆ ಸಂಬಂದಿಸಿದಂತೆ ಚುನಾವಣೆಯಲ್ಲಿ ಧರ್ಮ ಮತ್ತ ಜಾತಿಯಾಧಾರದ ಮೇಲೆ ಮತ ಯಾಚಿಸುವ ವಿರುದ್ಧ ದಾಖಲಾಗಿದ್ದ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾಂವಿಧಾನಕತಿ ಪೀಠವು ಈ ಮಹತ್ವದ ತೀರ್ಪನ್ನು ಹೊರಹಾಕಿದೆ.

ಒಟ್ಟಾರೆ ಮುಂದಿನ ಚುನಾವಣೆ ವೇಳೆಯಲ್ಲಿ ಹಲವು ರಾಜಕೀಯ ಪಕ್ಷಗಳು ಜಾತಿ ಹಾಗೂ ಧರ್ಮವನ್ನು ಆಧಾರವಾಗಿಟ್ಟುಕೊಂಡು ಮತಯಾಚನೆ ಮಾಡುವುದಕ್ಕೆ ಸುಪ್ರೀಂ ಬ್ರೇಕ್ ಹಾಕಿದೆ ಎಂದು ತಿಳಿಯಬಹುದಾಗಿದೆ.

Categories
Breaking News National

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಆಗಿ ಅನಿಲ್ ಬೈಜಲ್ ನೇಮಕ

ದೆಹಲಿಯ ಲೆಪ್ಟಿನೆಂಟ್ ಗೌರ್ನರ್ ಆಗಿ  ಡಿಸೆಂಬರ್ 31 ರಂದು ಮಾಜಿ ಕೇಂದ್ರ ಗೃಹ ಇಲಾಖೆಯ ಅನಿಲ್ ಬೈಜಲ್ ಎಂಬುವವರು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಅನಿಲ್ ಬೈಜಲ್ ಅವರು 1969 ರ ಬ್ಯಾಚ್ ನಲ್ಲಿ ಐಎಎಸ್ ಅಧಿಕಾರಿಯಾಗಿದ್ದು, 2006 ರಲ್ಲಿ ನಿವೃತ್ತಿ ಹೊಂದಿದ್ದರು ಎಂದು ಮಾಹಿತಿ ದೊರೆತಿದೆ. ಜೊತೆಗೆ ಬೈಜಲ್ ಅವರಿಗೆ ದೆಹಲಿಯ  ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ನ್ಯಾ.ಜಿ ರೋಹಿಣಿ ಲೆಫ್ಟಿನೆಂಟ್ ಗೌರ್ನರ್ ಗೆ ಗೌಪ್ಯತಾ ವಿಧಿಯನ್ನು ಬೋಧಿಸಿದರು.
ದೆಹಲಿಯ ಲೆಪ್ಟಿನೆಂಟ್ ಗೌರ್ನರ್ ಹುದ್ದೆಗೆ ಡೆಸೆಂಬರ್ 22 ನೇ ತಾರೀಕಿನಂದು  ನಜೀಬ್ ಜಂಗ್ ಅವರು ರಾಜೀನಾಮೆಯನ್ನು ನೀಡಿದ್ದರು. ಅವರಿಂದ ತೆರವಾಗಿದ್ದ ಆ ಸ್ಥಾನದ ಹುದ್ದೆಗೆ ರಾಷ್ಟ್ರಪತಿಗಳು ಅನಿಲ್ ಬೈಜಲ್ ಅವರ ನೇಮಕಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Categories
Breaking News National

ಪಬ್ಲಿಕ್‌ ಟಾಯ್ಲೆಟ್‌ ಗೂ ಇನ್ಮುಂದೆ ಹೊಸ ಆ್ಯಪ್..!

ದೆಹಲಿ ಹಾಗೂ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಬರುವಂತಹ ಜನರಿಗೆ ಸಾರ್ವಜನಿಕ ಶೌಚಾಲಯ ಹುಡುಕುವುದು ಕಷ್ಟದ ಕೆಲಸವಾಗಿದ್ದು, ಜನರಿಗೆ ಅನುಕೂಲಕರವಾಗುವಂತೆ  ಕೇಂದ್ರ ಸರ್ಕಾರ ಹೊಸದಾದ ಆ್ಯಪ್ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದಂತಹ  ಸ್ಚಚ್ಚ ಭಾರತ್ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಶೌಚಗೃಹ ಪತ್ತೆ ಮಾಡಲು ಗೂಗಲ್ ಮ್ಯಾಪ್‌ನಲ್ಲಿ ಟಾಯ್ಲೆಟ್ ಲೊಕೇಟರ್ ಎಂಬ ನೂತನ ಆ್ಯಪ್ ಗೆ ಸರ್ಕಾರ ಚಾಲನೆ  ನೀಡಲಾಗಿದ್ದು,  ಈ ಆ್ಯಪ್ ಮೂಲಕವಾಗಿ ಸಾರ್ವಜನಿಕರು ಸುಲಭವಾಗಿ ಶೌಚಗೃಹಗಳನ್ನು ಹುಡುಕಲು ಅನುಕೂಲಕರವಾಗಿದೆ.
ಈಗಾಗಲೆ ಈ ಒಂದು ಆ್ಯಪ್ ಅನ್ನು ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ಉಪಯೋಗಮಾಡುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ರಾಷ್ರದ ಪ್ರಮುಖ  ಭಾಷಗಳಲ್ಲಿ ಈ ಆ್ಯಪ್ ಅನ್ನು ತರಲು ಕೇಂದ್ರ ಸರ್ಕಾರ ಯೋಜನೆ  ರೂಪಿಸಿಕೊಂಡಿದೆ ಎಂದು ಕೇಂದ್ರ ನಗರಾಭಿವೃದ್ದಿ ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಈ ಕೇಂದ್ರ ಸರ್ಕಾರದ ಯೋಜನೆ ಅವಿದ್ಯಾವಂತರು ಅದರಲ್ಲಿಯೂ ಮೊಬೈಲ್ ಇಲ್ಲದವರರಿಗೆ ಇದರ ಅನುಕೂಲ ವ್ಯರ್ಥವಾಗಿದ್ದು, ಯಾವ ರೀತಿ ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲಕರವಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.
Categories
Breaking News National

ದೆಹಲಿಯಲ್ಲಿ ದಟ್ಟ ಮಂಜು ರೈಲು ಸಂಚಾರ ಸ್ಥಗಿತ

ದೆಹಲಿಯಲ್ಲಿ ದಟ್ಟ ಮಂಜು ಕವಿದಿರುವುದರಿಂದ ವಿಮಾನ ಹಾರಾಟ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಅಂತಾರಾಷ್ಟ್ರೀಯ ಮತ್ತು 8 ದೇಶೀಯ ವಿಮಾನಗಳ ಹಾರಾಟ ವಿಳಂಬವಾಗಿದೆ. 24 ರೈಲುಗಳು ನಿಗದಿತ ವೇಳೆಗಿಂತ ತಡವಾಗಿ ಹೊರಡಲಿವೆ. ಒಂದು ರೈಲಿನ ಸಂಚಾರ ರದ್ದಾಗಿದೆ.

dehali

ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ತಾಪಮಾನ ಸಾಮಾನ್ಯಕ್ಕಿಂತ ಕನಿಷ್ಟ ಮಟ್ಟದಲ್ಲಿದೆ. ಈ ವರ್ಷದ ಚಳಿಗಾಲದಲ್ಲಿ ಇಲ್ಲಿಯವರೆಗಿನ ತಾಪಮಾನದಲ್ಲಿ ಅತ್ಯಂತ ಕನಿಷ್ಟ ಉಷ್ಣಾಂಶ ಕಂಡುಬಂದಿದ್ದು 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಮುಂದಿನ ಎರಡು ಮೂರು  ದಿನಗಳವರೆಗೆ ಉಷ್ಣಾಂಶ ದೆಹಲಿಯಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.