Categories
Breaking News District Political State

ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ : ಬಿಎಸ್ ವೈ ಗೆ ತಾಕತ್ತೇ ಇಲ್ಲ – ಬಿಜೆಪಿ ವಿರುದ್ಧ ಸಿದ್ದು ಗರಂ

ಬೆಳಗಾವಿಯ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.

ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ‌ ವಿಫಲವಾಗಿದೆ. ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲು ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದೇವೆ‌. ಇದು ನಮ್ಮ ಹೋರಾಟದ ಪ್ರಾರಂಭ. 105 ವರ್ಷಗಳ ನಂತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ. ಉತ್ತರ ಕರ್ನಾಟಕದಲ್ಲಿ ಬಹಳದೊಡ್ಡ ಪ್ರಮಾಣದ ಹಾನಿಯಾಗಿದೆ. 103 ತಾಲ್ಲೂಕುಗಳ ಜನರು ಪ್ರವಾಹಕ್ಕೆ ತುತ್ತಾಗಿ ಬೆಳೆ, ಮನೆ, ಚರಾಸ್ತಿ ಕಳೆದುಕೊಂಡಿದ್ದಾರೆ‌. ಏಳರಿಂದ ಎಂಟು ಲಕ್ಷ ಜನರು ಬೀದಿ ಪಾಲಾಗಿದ್ದಾರೆ.

ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ಬಂದಿಲ್ಲ‌. ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಯಡಿಯೂರಪ್ಪರನ್ನು ಟೀಕಿಸಲು ನಾವು ಪ್ರತಿಭಟನಾ ಸಭೆ ನಡೆಸುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಒತ್ತಾಯ ಮಾಡುತ್ತಿದ್ದೇವೆ. ಯಡಿಯೂರಪ್ಪನವರು ಏನೂ ನಷ್ಟವೇ ಆಗಿಲ್ಲ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ನಿಮ್ಮದು ಮನುಷ್ಯ ಚರ್ಮವೋ ಎಮ್ಮೇ ಚರ್ಮವೋ ಗೊತ್ತಾಗುತ್ತಿಲ್ಲ. ಕೇಂದ್ರ ಸಚಿವರ ಪ್ರವಾಸದಿಂದ ನಯಾಪೈಸೆ ಪ್ರಯೋಜನವಾಗಿಲ್ಲ‌. ಜನರಿಗೆ ಸ್ಪಂಧಿಸಲು ಆಗದಿದ್ದರೆ ನಿವ್ಯಾಕೆ ಅಧಿಕಾರದಲ್ಲಿ ಇರಬೇಕು? ಅಧಿಕಾರ ನಡೆಸಲು ಆಗದಿದ್ದರೆ ಕೆಳಗೆ ಇಳಿಯಿರಿ. ನಾವು ಬಂದು ಜನರ ಕಷ್ಟ ಪರಿಹಾರ ಮಾಡುತ್ತೇವೆ. ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ ಬಂದಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಅನ್ನಭಾಗ್ಯ ಯೋಜನೆಯ ಪಡಿತರದಲ್ಲಿ ಕಡಿತ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಹೊರಟಿದ್ದರು. ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ‌. ಪ್ರಧಾನಿ ಮೋದಿಯವರಿಗೆ ರಾಜ್ಯಕ್ಕೆ ಬಂದು ಜನರ ಕಷ್ಟ ಕೇಳಲು ಆಗಿಲ್ಲ. ಅಮೆರಿಕಕ್ಕೆ ಹೋಗಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತಿದ್ದಾರೆ‌‌. ಮುಂದಿನ ವರ್ಷ ಅಮೆರಿಕದಲ್ಲಿ ಚುನಾವಣೆಯಿದ್ದು ಡೊನಾಲ್ಡ್ ಟ್ರಂಪ್ ಪರ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕಾಕ್ಕೆ ಹೋಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ‌‌. ರಾಜ್ಯದಲ್ಲಿ ಸರ್ವನಾಶ ಆಗುತ್ತಿದ್ದರೂ ಇಲ್ಲಿಗೆ ಬರುತ್ತಿಲ್ಲ‌. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಹೋರಾಟಗಾರ ಅಂತೀರಲ್ಲಾ, ರೈತರ ಕಷ್ಟ ಕಣ್ಣಿಗೆ ಕಾಣಲ್ವಾ. ಕೇಂದ್ರದಿಂದ ಒಂದೇ ಒಂದು ರೂಪಾಯಿ ಪರಿಹಾರ ತರಲು ಆಗಿಲ್ಲ.

ಸಂಸದ ತೇಜಸ್ವಿ ಸೂರ್ಯ ಒಬ್ಬ ಅಪ್ರಬುದ್ಧ ರಾಜಕಾರಣಿ. ನನ್ನ ಮಗನಿಗಿಂತ ಸಣ್ಣ ವಯಸ್ಸಿನವನು, ಅವನಿಗೆ ಜನರ ಸಮಸ್ಯೆ ಗೊತ್ತಿಲ್ಲ. ನೆರೆಯಿಂದ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಅಂತಾ ನೀವೇ ಒಪ್ಪಿಕೊಂಡಿದ್ದೀರಲ್ಲಪ್ಪ. ಬಿಜೆಪಿ ಕಾರ್ಯಕರ್ತರು ಹೇಳಿದವರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಮನೆ ಕಳೆದುಕೊಂಡವರಿಗೆ ಒಂದೇ ಒಂದು ಶೆಡ್ ನಿರ್ಮಿಸಿ ಕೊಟ್ಟಿಲ್ಲ. ಸುಳ್ಳು ಹೇಳಿ ಜನಗಳಿಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲ‌. ಯಡಿಯೂರಪ್ಪನವರೇ ನಿಮಗೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ಖುರ್ಚಿಬಿಟ್ಟು ಕೆಳಗೆ ಇಳಿಯಿರಿ‌. ಇಪ್ಪತ್ತೈದು ಕೋಟಿ ಕೊಟ್ಟು ಶಾಸಕರನ್ನು ಖರೀದಿಸಿದ್ರಿ‌. ಆಪರೇಷನ್ ಕಮಲ‌ ಮಾಡಿ ಅಧಿಕಾರಕ್ಕೆ ಬಂದ್ರಿ.
ಯಡಿಯೂರಪ್ಪನವರನ್ನು ನೋಡಿದ್ರೆ ನನಗೆ ಅಯ್ಯೋ ಅನಿಸುತ್ತೆ. ಯಡಿಯೂರಪ್ಪನವರಿಗೆ ತಾಕತ್ತೇ ಇಲ್ಲ. ಇಸ್ರೋಗೆ ಬಂದಿದ್ದ ಪ್ರಧಾನಿಗಳು ಯಡಿಯೂರಪ್ಪರನ್ನು ಕಣ್ಣೆತ್ತಿಯೂ ನೋಡಿಲ್ಲ.

ಯಡಿಯೂರಪ್ಪನವರೇ ರೈತರ ಸೊಸೈಟಿ ಸಾಲ, ಬ್ಯಾಂಕ್‌ಗಳ ಸಂಪೂರ್ಣ ಸಾಲ ಮನ್ನಾ ಮಾಡಿ. ಈಶ್ವರಪ್ಪ ಪರಿಹಾರ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇ ಹೆಚ್ಚು ಅಂತಾನೆ. ಅವಾ ಮಾತ್ರ ನೋಟ್ ಎಣಿಸುವ ಮಷೀನ್ ಇಟ್ಕೊಂಡವನೆ ಗಿರಾಕಿ. ಇಷ್ಟು ಮಾನಗೆಟ್ಟವರು, ಲಜ್ಜೆಗೆಟ್ಟವರು, ಜನ ವಿರೋಧಿಗಳನ್ನು ನಾನು ನೋಡಿರಲಿಲ್ಲ‌. ಬೆಳಗಾವಿಯಲ್ಲಿಯೇ ವಿಧಾನಸಭೆ ಅಧಿವೇಶನ ನಡೆಯಬೇಕು. ಮಿಸ್ಟರ್ ಯಡಿಯೂರಪ್ಪ ಬೆಳಗಾವಿಯಲ್ಲಿ ಅಧಿವೇಶನ ಮಾಡಿ. ನೆರೆ ಪರಿಹಾರದ ಬಗ್ಗೆ ಚರ್ಚಿಸುವಂತೆ ಅಧಿವೇಶನದಲ್ಲಿ ಪಟ್ಟು ಹಿಡಿಯುತ್ತೇವೆ. ರಾಜ್ಯಾದ್ಯಂತ ಕಾನೂನು ಉಲ್ಲಂಘನೆ ಚಳುವಳಿ ಮಾಡಬೇಕಾಗುತ್ತೆ‌. ಈ ಬಾರಿ ಅಸೆಂಬ್ಲಿ ನಡೆಯಲು ಬಿಡಲ್ಲ‌.

ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದರೆ ಉತ್ತರ ಕರ್ನಾಟಕದ ಜನರಿಗೆ ಮಾಡುವ ದ್ರೋಹ. ಮೋದಿ, ಮೋದಿ ಅಂತಾ 25 ಜನರನ್ನು ಗೆಲ್ಲಿಸಿಕೊಟ್ರು. ಮೋದಿ ಎಲ್ಲಿದ್ದಾರೆ ಈಗ ? ಎಲ್ಲ ಯುವಕರ ನೌಕರಿ ಕಳೆದ್ರು. ದೇಶದ ಹಣಕಾಸಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ, ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಪ್ರವಾಹ ಪರಿಹಾರಕ್ಕೆ ದುಡ್ಡು ಕೊಡದ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿದ್ದಾರೆ. ಅಭಿವೃದ್ಧಿ ಅನುದಾನವನ್ನು ನೆರೆ ಪರಿಹಾರಕ್ಕೆ ಬಳಸಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳುತ್ತೆ.

ಕಾಂಗ್ರೆಸ್ ಪಕ್ಷ ಬಡವರು, ದಲಿತರು, ಮಹಿಳೆಯರ ಪಕ್ಷ‌. ಪ್ರವಾಹ ಸಂತ್ರಸ್ತರು ಹೆದರುವ ಅವಶ್ಯಕತೆಯಿಲ್ಲ, ನಾವು ನಿಮ್ಮ ಜೊತೆ ಇದ್ದೇವೆ. ನಿಮಗಾಗಿ ಜೈಲಿಗೆ ಹೋಗಲೂ ಸಿದ್ಧ, ಜೈಲ್ ಭರೋ ಚಳುವಳಿ ಮಾಡುತ್ತೇವೆ. ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.

Categories
Breaking News District National Political State

‘ಮೋದಿಯವರಿಗೆ ವಿದೇಶ ಸುತ್ತಲು ಸಮಯವಿದೆ, ರಾಜ್ಯದ ನೆರೆಪೀಡಿತ ಪ್ರದೇಶ ವೀಕ್ಷಿಸಲು ಸಮಯವಿಲ್ಲ’

ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಪ್ರಭಾವ ತೋರುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ಸರ್ಕಾರ ಭೇಟಿ‌ ನೀಡುತ್ತಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ 1 ಲಕ್ಷ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ರಾಜ್ಯದ 25 ಜನ ಸಂಸದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಪ್ರಧಾನಿ ಮೋದಿಯವರಿಗೆ ವಿದೇಶ ಸುತ್ತಲು ಸಮಯವಿದೆ. ಆದರೆ ರಾಜ್ಯದ ನೆರೆಪೀಡಿತ ಪ್ರದೇಶ ವೀಕ್ಷಿಸಲು ಸಮಯವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿರೋಧಿ ನೀತಿ ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿ ಕಾರಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಅವರನ್ನು ಕುಕ್ಕುತ್ತಿವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ವಿ.ಎಸ್ ಉಗ್ರಪ್ಪ,  ಅಧಿಕಾರದಲ್ಲಿ ಇದ್ದಾಗ ಏನೂ ಮಾತನಾಡದ ಎಚ್ ಡಿಕೆ ಅಧಿಕಾರದಿಂದ ಕೆಳಗಿಳಿದ ಕೂಡಲೇ ಹೀಗೆ ಮಾತನಾಡುತ್ತಿದ್ದಾರೆ. ಇದು ಅವರ ಮನಸ್ಥಿತಿ ಯಾವ ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಉಪ ಚುನಾವಣೆಯನ್ನು ನಾವು ಸ್ವಾಗತಿಸುತ್ತೇವೆ. ಜೆಡಿಎಸ್ ಜತೆ ಮೈತ್ರಿ ಪ್ರಶ್ನೆಯೇ ಇಲ್ಲ. ಈಗಾಗಲೇ ನಮ್ಮ ಅಭ್ಯರ್ಥಿಗಳ ಆಯ್ಕೆ ನಡೆದಿದೆ, ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದೇವೆ. ಎಲ್ಲ 15 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ಎಂದಿದ್ದಾರೆ.

 

Categories
Breaking News District Political State

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದರೆ ಒಳ್ಳೇದು ಎಂದ ಶ್ರೀನಿವಾಸಗೌಡ

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದರೆ ಒಳ್ಳೆದು ಎಂದು ಕೋಲಾರದಲ್ಲಿ  ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಹೇಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಬೈ ಎಲೆಕ್ಷನ್ ನಲ್ಲಿ ಹೆಚ್ಚು ಸ್ತಾನ ಗಳಿಸಿದ್ರೆ ಮತ್ತೆ ಮೈತ್ರಿ ಸರ್ಕಾರ ರಚನೆ ಆಗುತ್ತೆ. 2018 ರ ಅಸೆಂಬ್ಲಿ ಎಲೆಕ್ಷನ್ ನಂತರ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡೊ ಯೋಚನೆ ಮಾಡಿಲ್ಲ. ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡುವ ಚಿಂತನೆ ನಡೆಸಿತ್ತು. ಅಷ್ಟೊತ್ತಿಗೆ ಕಾಂಗ್ರೆಸ್ ನಮ್ಮ ಬಳಿ ಬಂದಿತ್ತು.

ಬೈ ಎಲೆಕ್ಷನ್ ನಲ್ಲಿ ಕೈ ತೆನೆ ಹೆಚ್ಚು ಸ್ತಾನ‌ ಗೆದ್ದಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ. ಕೈ ತೆನೆ ಮೈತ್ರಿ ಬಗ್ಗೆ ನಾನು ಇಂದೇ ಪಕ್ಷದ ವರಿಷ್ಠರ ಜೊತೆಗೆ ಮಾತನಾಡುವೆ ಎಂದು ಶ್ರೀನಿವಾಸಗೌಡ ಮೈತ್ರಿ ಆಸೆ ವ್ಯಕ್ತಪಡಿಸಿದ್ದಾರೆ.

Categories
Breaking News District National State

ಮೈಸೂರು ಪಾಕ್ ಅನ್ನು ಚೆನ್ನೈ ಪಾಕ್ ಅನ್ನೋಕಾಗುತ್ತಾ? : ತಮಿಳುನಾಡಿಗರ ವಿರುದ್ಧ ತಿರುಗಿ ಬಿದ್ದ ವ್ಯಾಪಾರಿ

ಮೈಸೂರು ಪಾಕ್ ಅನ್ನು ಚೆನ್ನೈ ಪಾಕ್ ಅನ್ನೋಕಾಗುತ್ತಾ? ಎಂದು ತಮಿಳುನಾಡಿಗರ ವಿರುದ್ಧ ತಿರುಗಿ ಬಿದ್ದಿದ್ದಾರೆ ಮೈಸೂರಿನ ವ್ಯಾಪಾರಿ ನಟರಾಜ್.

ಮೈಸೂರು ಪಾಕ್ ಅನ್ನು ನಮ್ಮ ಮುತ್ತಾತ ತಯಾರು ಮಾಡಿದ್ರು. ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ನಮ್ಮ ಮುತ್ತಾತ ತಯಾರಿಸಿದ ಸಿಹಿ ಇದಾಗಿದೆ. ಅಂದು ಪಾಕದಿಂದ ತಯಾರಿಸಿದ್ದಕ್ಕೆ ಇದಕ್ಕೆ ಮೈಸೂರು ಪಾಕ್ ಹೆಸರು ಬಂತು.ಮೈಸೂರು ಪಾಕ್ ನಮ್ಮ ಮೈಸೂರಿನಲ್ಲಿ ಹುಟ್ಟಿದ್ದು‌.  ಆ ತಮಿಳುನಾಡಿನವರಿಗೆ ಖ್ಯಾತೆ ತೆಗೆಯೋಕೆ ಒಂದು ವಿಚಾರ ಬೇಕು. ಅದಕ್ಕಾಗಿ ಕಾವೇರಿ ವಿಚಾರವಾಗಿ ಖ್ಯಾತೆ ತೆಗಿತಾರೆ. ಅದಕ್ಕಾಗಿ ಕಾವೇರಿ ವಿಚಾರವಾಗಿ ಖ್ಯಾತೆ ತೆಗಿತಾರೆ. ಇದೀಗ ಮೈಸೂರು ಪಾಕ್ ನಮ್ಮದು ಅಂತಿದ್ದಾರೆ. ಯಾವುದು ಪ್ರಸಿದ್ಧಿ ಇರುತ್ತೋ ಅದರ ಮೇಲೆ ಖ್ಯಾತೆ ತೆಗೆಯುತ್ತಾರೆ ಎಂದು ಗುಡುಗಿದ್ದಾರೆ.

ತಮ್ಮ ಮುತ್ತಾತ ಅರಮನೆಯಲ್ಲಿದ್ದರು ಅನ್ನೋದಕ್ಕೆ ದಾಖಲೆ ಇದೆ. ಅಂದಿನ ಕೆಲ ಪೋಟೋಗಳು ಸಹ ನಮ್ಮ ಮನೆಯಲ್ಲಿವೆ. ಹೀಗಾಗಿ ಮೈಸೂರು ಪಾಕ್ ಯಾವತ್ತಿದ್ದರೂ ನಮ್ಮದೆ. ಮೈಸೂರು ಪಾಕ್ ತಯಾರಿಸಿದ ಕಾಕಸುರ ವಂಶದ ನಟರಾಜ್ ಹೇಳಿದ್ದಾರೆ.

 

 

Categories
Breaking News District Political State

ಪರೋಕ್ಷವಾಗಿ ಮೈತ್ರಿ ಪಕ್ಷದವರ ವಿರುದ್ದ ಆಕ್ರೋಶ ಹೊರ ಹಾಕಿದ ರೇವಣ್ಣ…..

ಯಾರು ಕೆ.ಆರ್.‌ಪೇಟೆ ಕಡೆ ಬೊಟ್ಟು ಮಾಡಿ ತೋರಿಸಬೇಕಿಲ್ಲ. ಯಾಕೆಂದ್ರೆ ಇಲ್ಲಿನ ಹೆಚ್ಚಿನ ಜನ್ರು ದೇವೇಗೌಡ್ರ ಕುಟುಂಬಕ್ಕೆ ಯಾವುದೇ ಆಸೆ ಆಕಾಂಕ್ಷಿ ಇಲ್ಲದೆ ದುಡಿದಿದ್ದಾರೆ. ದೇವೇಗೌಡ್ರು ಕೂಡ ಕೆ.ಆರ್.ಪೇಟೆ ಬಗ್ಗೆ ವಿಶೇಷ ಒಲವಿದೆ. ೧೪ ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅಷ್ಟು ನೋವು ತಿಂದಿದ್ದಾರೆ. ಬೇರೆಯವರಾಗಿದ್ರೆ ಖಂಡಿತಾ ಆ ನೋವು ತಡೆದುಕೊಳ್ತಿರಲಿಲ್ಲ ಎಂದು ಕೆ.ಆರ್.ಪೇಟೆ ಜೆಡಿಎಸ್ ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.

ಪರೋಕ್ಷವಾಗಿ ಮೈತ್ರಿ ಪಕ್ಷದವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ ರೇವಣ್ಣ, ಇಂದು ರಾಜ್ಯದಲ್ಲಿ ಸಾವಿರಾರು ರೈತರ ಕೋಟ್ಯಾಂತರ ರೂ ಸಾಲ ಮನ್ನಾ ಆಗಿದೆ. ಆದ್ರೆ ಈಗನ ಸರ್ಕಾರ ರೈತ ನೆರವು ನೀಡೋದಿರಲ್ಲಿ ರೈತರತ್ತ ತಿರುಗಿ ನೋಡ್ತಿಲ್ಲ. ಮಾರ್ವಾಡಿಗಳ ಮೇಲೆ ರೇವಣ್ಣ ಕಣ್ಣು ಹಾಕಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರು ಒಡವೆಗಳ ಮೇಲೆ ಸಾಲ ತಗೊಂಡು ಒಡವೆ ಬಿಡಿಸಿ ಕೊಂಡಿಲ್ಲ. ಹೀಗಾಗೀಗೆನೇ ನಮ್ಮ ಕಡೆ ೪೪ ಬಿಲ್ಡಿಂಗ್ ಮನೆಗಳನ್ನು ಮಾರ್ವಾಡಿಗಳು ಕಟ್ಟಿಕೊಂಡಿದ್ದಾರೆ.

ಕುಮಾರಣ್ಣ ಎಂತವರನ್ನು ನಂಬ್ತಾರೆ,ಒಳ್ಳೆಯವರನ್ನು ಕಳ್ಳರನ್ನು ನಂಬ್ತಾನೆ. ಅವತ್ತು ದೊಡ್ಡವರ ಮಾತು ಕೇಳಿದ್ರೆ ಇಲ್ಲಿ ಈ ಪರಿಸ್ಥಿತಿ ಬರ್ತಿರಿಲ್ಲ. ಅವ್ರೆ ಎಲ್ಲಿ ಮೇವು ಸಿಗುತ್ತೆ ಅಲ್ಲಿ ಇರೋವರೋ ತಿಂತಾವೆ ಕಡಿಮೆ ಆಗ್ತಿದ್ದಂತೆ ಹಂಗೆ ಹೋಗ್ತಾವೆ. ಕುಮಾರಣ್ಣ ಈ ಹೋಟೇಲ್ ನಲ್ಲಿರೋನ್ನ ಕರ್ಕೊಂಡು ಬಂದು ನಿಲ್ಲಿಸ್ದಾ. ಈ ಹೋಟೇಲ್ ನನ ಬುದ್ದಿ ತೋರಿಸಿ ಹೋಗ್ವನ್ನೆ ಅವನು. ನಾರಾಯಣಗೌಡ ಎರಡು ಸಾರಿ ಶಾಸಕನಾಗಿದ್ರು ಇಲ್ಲಿ ಯಾವುದೇ ಕೆಲ್ಸ ಮಾಡಿಲ್ಲ‌.ನಮ್ಮ ಕ್ಷೇತ್ರಕ್ಕೆ ಬರೀ ೨ ಕೋಟಿ ಕೊಟ್ವನೆ ಅಂತಾನೆ ನನ್ ಖಾತೆಯಿಂದಲೇ ೧೦ ಕೋಟಿ ಕೊಟ್ಟಿದ್ದೇನೆ. ನಾರಾಯಣಗೌಡ ಕೊಟ್ಟ ಕಾಮಗಾರಿ ಗುತ್ತಿಗೆಯನ್ನು ಅದ್ವಾವುದೋ ಏಜೆನ್ಸಿಗೆ ಕೊಟ್ಟಿದ್ದಾನೆ.

ಸ್ಥಳೀಯ ಗುತ್ತಿಗೆದಾರನಿಗೆ ಯಾವುದೇ ಕಾಮಗಾರಿ ಕೊಟ್ಟಿಲ್ಲ. ಅವನು‌ ಕಮೀಷನ್ ಶಾಸಕನಾಗಿದ್ದ.ನಾನು pwd ಇಲಾಖೆಯಲ್ಲಿ ನೂರಾರು ಕೋಟೆ ಕಾಮಗಾರಿ ಮಾಡಿದ್ದೇನೆ. ಇದನ್ನು ಯಾವುದೇ ಯಡಿಯೂರಪ್ಪ ನಿಲ್ಲಿಸೋಕೆ‌ ಆಗಲ್ಲ. ಶಾಸಕನಾಗಿದ್ದ ನಾರಾಯಣಗೌಡ ಕಾಮಗಾರಿಗಳಲ್ಲಿ ನೂರಾರು ಕೋಟೆ ಕಮೀಷನ್ ನುಂಗಿದ್ದಾ‌ನೆ. ಕುಮಾರಸ್ವಾಮಿ ಗೆ ದೇವೇಗೌಡರು ನಾರಾಯಣಗೌಡನಿಗೆ ಎರಡನೇ ಬಾರಿ ಟಿಕೇಟ್ ಕೊಡಬೇಡಪ್ಪ ಅಂದಿದ್ರು. ಅವೆಲ್ಲ ಹೋಟೇಲ್ ನಲ್ಲಿ ಚೆಂಗಲ್ ಬಿದ್ದಿವೆ ಅವರು ಇರಲ್ಲ ಅಂದಿದ್ರು.

ಆದ್ರೆ ಕುಮಾರಸ್ವಾಮಿ ಮಾತು ಕೊಟ್ಟಿದ್ದೇನೆ ಎಂದು ಟಿಕೇಟ್ ಕೊಟ್ಟು ಈಗ ಗೋಳಾಡ್ತಿದ್ದಾನೆ. ಪಕ್ಷಕ್ಕೆ ದ್ರೋಹ ಬಗೆದ ಈತನಿಗೆ ಆ ದೇವರೇ ಶಿಕ್ಷೆ ಕೊಡ್ತಾನೆ. ಜೆಡಿಎಸ್ ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗೆ ಮಂಡಗಯದ ಡಿಸಿ ಮತ್ತು ತಹಶೀಲ್ದಾರ್ ಗೆ ವಾರ್ನಿಂಗ್. ಇವ್ರೆಲ್ಲ ಬೇರೆಯವತ ಮಾತು ಕೇಳಿ ನಮ್ಮ ಪಕ್ಷದ ನಾಯಕರ ಕ್ವಾರೆ ಮುಚ್ಚಿಸ್ತಿದ್ದಾರೆ. ಇದು ಸರಿ ಇರಲ್ಲ, ಇದು ಹೀಗೆ ಆದ್ರೆ ನಾವೇಲ್ಲ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.

Categories
Breaking News District Political State

ಮದ್ದೂರು ಶಾಸಕ ಡಿಸಿ ತಮ್ಮಣ್ಣ ವಿರುದ್ದ ತಿರುಗಿ ಬಿದ್ದ ಮದ್ದೂರಿನ ರೈತರು….

ಮಂಡ್ಯದ ಮದ್ದೂರು ಶಾಸಕ ಡಿಸಿ ತಮ್ಮಣ್ಣ ವಿರುದ್ದ ಮದ್ದೂರಿನ ರೈತರು ತಿರುಗಿ ಬಿದ್ದಿದ್ದಾರೆ.

ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಮದ್ದೂರಮ್ಮ‌ ಕೆರೆಯಿಂದ ಬಹುಗ್ರಾಮ ಕುಡಿಯುವ ಯೋಜನೆ ಸಂಬಂಧ ಕರೆಯಲಾಗಿದ್ದ ರೈತರ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ೧೪ ಗ್ರಾಮದ ರೈತರಿಗೆ ತೊಂದರೆಯಾಗ್ತಿರೋ ಬಗ್ಗೆ ಚರ್ಚೆಯ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೊಳಿಸಲು ಹೊರಟ ಶಾಸಕರಿಗೆ ರೈತರು ತರಾಟೆ ತೆಗೆದುಕೊಮಡಿದ್ದಾರೆ.

ರೈತರ ತರಾಟೆಯಿಂದ ಸಭೆಯಲ್ಲಿ ಶಾಸಕ ಡಿಸಿ ತಮ್ಮಣ್ಣ ಕಂಗಾಲಾದರು. ನಿಮಗೆ ಈ ಯೋಜನೆ ಬೇಕೋ ಬೇಡವೋ ತಿಳಿಸಿ ಎಂದು ಸಭೆಯಿಂದ ಶಾಸಕ‌ ಹೊರ ನಡೆದು ಪಲಾಯನ‌ ಮಾಡಿದರು.

Categories
Breaking News District Political State

‘ದೇವಗೌಡರ ನೆರಳಲ್ಲಿ ಬದುಕಿ ಕಾಂಗ್ರೆಸ್ ಲೀಡರ್ ಆಗ್ತಾರೆ’ ಸಿದ್ದುಗೆ ಟಾಂಗ್ ಕೊಟ್ಟ ಮಾಧುಸ್ವಾಮಿ

ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಹೇಳಿಕೆ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಸಂಪೂರ್ಣ ದೇವೆಗೌಡರ ಹಂಗಲ್ಲಿ ನೆರಳಲ್ಲಿ ಬದುಕಿದವರು ನಳೀನ ಕುಮಾರ ಬಗ್ಗೆ ಏನ್ ಮಾತ್ನಾಡ್ತಾರೆ. ದೇವಗೌಡರ ನೆರಳಲ್ಲಿ ಬದುಕಿ ಕಾಂಗ್ರೆಸ್ ಲೀಡರ್ ಆಗ್ತಾರೆ. ಎಲ್ಲಿದ್ದರೂ ಸಿದ್ದರಾಮಯ್ಯ ಯಾರ ಗರಡಿಯಲ್ಲಿ ಇದ್ದರು ನಮ್ಮನ್ನು ಟೀಕೆ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ ಸಚಿವ ಮಾಧುಸ್ವಾಮಿ.

ಅವರ ಯೋಗ್ಯತೆಗೆ ಅವರನ್ನು ಪಕ್ಷದ ನಾಯಕರನ್ನಾಗು ಮಾಡಿಲ್ಲ. ವಿರೋಧ ಪಕ್ಷದ ನಾಯಕರನ್ನು ಕೇಳುತ್ತಿದ್ದೇವೆ. ಒಂದು ತಿಂಗಳಿಂದ ಕೇಳುತ್ತಿದ್ದೇವೆ. ಒಬ್ಬರ ಹೆಸರನ್ನು ಕೊಡುವುದಕ್ಕೆ ಆಗುತ್ತಿಲ್ಲ. ಅವರು ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ. ಮೊದಲು ಸಿದ್ದರಾಮಯ್ಯ ನಮ್ಮ ನಾಯಕರೆಂದು ಡಿಕೆಶಿ, ಪರಮೇಶ್ವರ, ಪಾಟೀಲ್ ಅವರಿಂದ ಹೇಳಿಸಿ.

ನಾವು ಯಡಿಯೂರಪ್ಪ ಅವರು ನಮ್ಮ ನಾಯಕರೆಂದು ತೀರ್ಮಾನ ಮಾಡಿದ್ದೇವೆ. ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ. ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ. ಸಿದ್ದರಾಮಯ್ಯ ಟೀಕೆ ಮಾಡುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು.

Categories
Breaking News District National Political State

ಡಿಕೆಶಿ ತಾಯಿ ಕಣ್ಣೀರು – ಬಿಜೆಪಿ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದೆ: ಕುಮಾರಸ್ವಾಮಿ

ಕೇಂದ್ರ ಬಿಜೆಪಿ ಸರ್ಕಾರ ಪಿತೂರಿ ಮಾಡಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ಈ ಸಂದರ್ಭದಲ್ಲಿ ಅವರ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಕನಕಪುರದ ಸಾತನೂರಿನ ಕೋಡಿಹಳ್ಳಿಯಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ಮಾಡಿದ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಗೌರಮ್ಮ ಅವರಿಗೆ ಸಾಂತ್ವಾನ ಹೇಳಿದ ಕುಮಾರಸ್ವಾಮಿ, ‘ಯಾವುದಕ್ಕೂ ಹೆದರಬೇಡಿ, ಈ ಎಲ್ಲ ಸಂಕಷ್ಟಗಳನ್ನು ಎದುರಿಸಿ ಶಿವಕುಮಾರ್ ಅವರು ಹೊರ ಬರುತ್ತಾರೆ. ಬಿಜೆಪಿಯ ಈ ಕುತಂತ್ರ ಕೇವಲ ಎರಡು ದಿನ. ನಾವೆಲ್ಲರು ನಿಮ್ಮ ಜತೆ ಇದ್ದೇವೆ. ಹೆಚ್ಚು ಚಿಂತಿಸಬೇಡಿ. ಆರೋಗ್ಯದ ಕಡೆ ಗಮನಹರಿಸಿ ಎಂದು ಸಮಾಧಾನ ಮಾಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ‘ಡಿಕೆ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಂಡ ಪರಿಣಾಮ ಕೇಂದ್ರ ಸರ್ಕಾರ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ.

ಡಿಕೆ ಶಿವಕುಮಾರ್ ನಾಲ್ಕು ದಿನಗಳ ಕಾಲ ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗೆ ಉತ್ತರಿಸಿದರೂ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಅವಕಾಶ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಆದರೂ ಅವರನ್ನು ಬಂಧಿಸಿರುವುದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಾಕ್ಷಿ.

ಈ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದೆ. ಅವರನ್ನು ಸರ್ವನಾಶ ಮಾಡಲಿದೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಕಾಲಚಕ್ರ ಬದಲಾಗಲಿದೆ. ನಾಳೆ ಇದೇ ಪರಿಸ್ಥಿತಿ ಬಿಜೆಪಿ ನಾಯಕರಿಗೆ ಬಂದರೆ ಆಶ್ಚರ್ಯ ಇಲ್ಲ’ ಎಂದರು.

Categories
Breaking News District State

OMG : ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ‌ ವಿದ್ಯಾರ್ಥಿ…!

ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಇಂಟರ್ ನ್ಯಾಷನಲ್ ಶಾಲೆಯಲ್ಲಿ  ನಡೆದಿದೆ.

ಶಾಲಾ ಶಿಕ್ಷಕಿ ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಯ ಕಣ್ಣಿಗೆ ಹೊಡೆದಿದ್ದರಿಂದ ವಿದ್ಯಾರ್ಥಿಯ ಕಣ್ಣೇ ಮಾಯವಾಗಿದೆ.  ಎಲ್.ಕೆ.ಜಿ.ವಿದ್ಯಾರ್ಥಿ ‌ಮನಿಷ್ ಕಣ್ಣಿಗೆ ಏಟು ತಿಂದ ಹುಡುಗ.  ಕಣ್ಣಿಗಾದ ಗಾಯದಿಂದ ದೃಷ್ಟಿ ಕಳೆದುಕೊಂಡಿರೊ‌ ವಿದ್ಯಾರ್ಥಿ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಶಗೊಂಡಿದ್ದಾರೆ.

ಈ ಘಟನೆ ಅಗಸ್ಟ್ 13 ರಂದು ನಡೆದಿದೆ. ವೈದ್ಯರ ಬಳಿ‌ ಚಿಕಿತ್ಸೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಬ್ಬಿಣದ ಸ್ಕೇಲ್ ನಿಂದ ಹಲ್ಲೆ ಮಾಡಿರೋ ಬಗ್ಗೆ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ವಿರುದ್ದ ಪೋಷಕರು ದೂರು ನೀಡಿದ್ದಾರೆ.

ಹಾಸನ ನಗರ ಠಾಣೆಯಲ್ಲಿ ಶಾಲಾ ಶಿಕ್ಷಕಿ ದಿವ್ಯ, ಅಡಳಿತ ಮಂಡಳಿಯ ಗಿರಿಜಾ, ಡಾ: ಶಿವೇಗೌಡ, ವೆಂಕಟೇಗೌಡ  ಒಟ್ಟು ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

Categories
Breaking News National

‘ಹೂ ವಿಲ್ ಸೇವ್ ದಿಸ್ ಎಕಾನಮಿ’ ಕೇಂದ್ರ ಸರ್ವಕಾರವನ್ನು ಕೆಣಕಿದ ಶತ್ರುಘ್ನ ಸಿನ್ಹಾ

ಕೇಂದ್ರ ಸರ್ಕಾರವನ್ನು ಆಗಿಂದಾಗ್ಗೆ ಕಾಡುವ ಬಿಜೆಪಿ ಮಾಜಿ ನಾಯಕ ಶತ್ರುಘ್ನ ಸಿನ್ಹಾ ಈಗ ಆರ್ಥಿಕ ವ್ಯವಸ್ಥೆ ವಿಚಾರವಾಗಿ ಮತ್ತೆ ಹರಿಹಾಯ್ದಿದ್ದಾರೆ. ಹೂ ವಿಲ್ ಸೇವ್ ದಿಸ್ ಎಕಾನಮಿ ಎಂದು ಅವರು ಕೇಂದ್ರವನ್ನು ಕೆಣಕಿದ್ದಾರೆ.

ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಟ್ವಿಟ್ಟರ್ ಮೂಲಕ ಶ್ಲಾಘಿಸಿದ್ದ ಶತ್ರುಘ್ನ ಸಿನ್ಹಾ ಈಗ ತಿರುಗಿ ಬಿದ್ದಿದ್ದಾರೆ.

ಸರ್‌, ದೇಶದ ಆರ್ಥಿಕ ಕುಸಿತದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ನಾವು ಏನಾದರೂ ಮಾಡಬೇಕೆಂದು ನಿಮಗೆ ಅನಿಸಿಲ್ಲವೇ…..ಎಂದು ಮೋದಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಅವರು ಬಳಿಕ ಸರಣಿ ಟ್ವೀಟ್ ಮಾಡಿ ಕೆಣಕಿದ್ದಾರೆ.

ಕೃಷಿ, ಮೊಬೈಲ್, ವಿಮಾನಯಾನ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಆತಂಕವನ್ನು ಅವರು ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.