Categories
Breaking News District State

ಪೊಲೀಸರ ಭರ್ಜರಿ ಕಾರ್ಯಾಚರಣೆ : ವಿಜಯಪುರದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ಬಯಲು

ವಿಜಯಪುರದ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಹನಿಟ್ರ್ಯಾಪ್ ಪ್ರಕರಣ ಬಯಲಾಗಿದೆ.

ವಿಜಯಪುರ ಗ್ರಾಮೀಣ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ದಾನಮ್ಮ ಹಿರೇಮಠ, ಸುದೀರ್ ಘಟ್ಟನವರ, ರವಿ ಕಾರಜೋಳ, ಮಲ್ಲಿಕಾರ್ಜುನ ಮುರಗುಂಡಿ, ಶ್ರೀಕಾಂತ ಶಾವಂತ್ರವ್ವ ಸೋಮಜಾಳ ಸೇರಿ ಐದು ಜನರನ್ನು ಬಂಧಿಸಲಾಗಿದೆ.

ಬಂಗಾರದ ಆಭರಣ ಮಾಡಿಕೊಡುವಂತೆ ಬಂದಿದ್ದ ಯುವತಿ, ವಿಜಯಪುರ ನಗರದ ಸೈನಿಕ ಶಾಲೆ ಬಳಿ ಬರುವಂತೆ ಸೂಚನೆ ನೀಡಿದ್ದಳು. ಮಹಿಳೆಯ ಮನೆಗೆ ಹೋದಾಗ ಹಿಂದಿನಿಂದ ದಾಳಿ ಮಾಡಿದ ಯುವಕರು ಮಹಿಳೆಯೊಂದಿಗೆ, ರೂ. 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು ಬೆಳಕಿಗೆ ಬಂದಿದೆ.

ಬಂಗಾರದ ಅಂಗಡಿಯವರು ಹಣದ ಬೇಡಿಕೆ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ‌ ಹಿನ್ನೆಲೆಯಲ್ಲಿ ಕಾರ್ಯಾಚರಣೆ ‌ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಎಸ್ಪಿ ಪ್ರಕಾಶ ಅಮೃತ ನಿಕ್ಕಮ್ ಹೇಳಿದ್ದಾರೆ.

Categories
Breaking News District Political State

ಹನಿಟ್ರ್ಯಾಪ್ ಪ್ರಕರಣ : ವಿಡಿಯೋ ಡಿಲೀಟ್ ಗಾಗಿ ಯಾರ ಒತ್ತಡವಿಲ್ಲ – ಬಸವರಾಜ್ ಬೊಮ್ಮಾಯಿ ಸ್ಪಷ್ಟ

ಹನಿಟ್ರ್ಯಾಪ್ ನಲ್ಲಿ ಸಿಲುಕಿದ ಜನಪ್ರತಿನಿಧಿ, ಅಧಿಕಾರಿಗಳ ಸೆರೆಯಾದ ವಿಡಿಯೋ ಡಿಲೀಟ್ ಮಾಡುವಂತೆ ಯಾರೊಬ್ಬರೂ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಹನಿಟ್ರ್ಯಾಪ್ ಪ್ರಕರಣವನ್ನು ತನಿಖೆ ಮಾಡಲಾಗುತ್ತಿದ್ದು, ಯಾರೊಬ್ಬರಿಂದ ವಿಡಿಯೋ ಡಿಲೀಟ್ ಮಾಡುವಂತೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದರು.

ಉಪಚುನಾವಣೆ ಪ್ರಚಾರದಲ್ಲಿ ಕೇವಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ತೊಡಗುತ್ತಿದ್ದಾರೆ‌. ಉಳಿದ ಶಾಸಕರೆಲ್ಲ ಕೇವಲ ಸುದ್ದಿ ಗೋಷ್ಠಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅವರು ಟೀಕಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲುತ್ತದೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಜನ ತಮ್ಮ ಪಕ್ಷಕ್ಕೆ ಮತಹಾಕಲಿ ಎಂಬ ಉದ್ದೇಶ ದಿಂದ ಅವರು ನೂತನ ಸರ್ಕಾರ ರಚಿಸುತ್ತೇವೆ ಎಂದು ರಾಗ ಬದಲಾಯಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

Categories
Breaking News District Political State

ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಕಾಂಗ್ರೆಸ್‌ ಶಾಸಕನಿಗೆ ಮಾರಿದ್ದ ಹನಿಟ್ರ್ಯಾಪ್‌ ರಾಘವೇಂದ್ರ….!

ಗದಗ ಜಿಲ್ಲಾ ವ್ಯಾಪ್ತಿಯ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಬಿಡುಗಡೆ ಆಗಿ ಕೋಲಾಹಲ ಸೃಷ್ಟಿಸಿದೆ.

ಬಿಜೆಪಿ ಶಾಸಕನ್ನು ಹನಿಟ್ರ್ಯಾಪ್‌ ಗೆ ಕೆಡವಿ ಕೋಟಿ ರೂಪಾಯಿ ಹಣ ಪೀಕಿಸಿದ್ದ ಆರೋಪಿ ರಾಘವೇಂದ್ರ. ಅದೇ ವಿಡಿಯೋವನ್ನು ಕಾಂಗ್ರೆಸ್‌ ಶಾಸಕನಿಗೆ ಮಾರಾಟ ಮಾಡಿದ್ದ ಎನ್ನುವ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್‌ನ ಹಾಲಿ ಶಾಸಕ, ಮಾಜಿ ಸಚಿವರೊಬ್ಬರನ್ನು ಕೆಲವು ತಿಂಗಳುಗಳ ಹಿಂದೆ ಭೇಟಿ ಆಗಿದ್ದ ಆರೋಪಿ ರಾಘವೇಂದ್ರ ಬಿಜೆಪಿ ಶಾಸಕರ ರಾಸಲೀಲೆ ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ತೋರಿಸಿ ಹಣ ಕೊಟ್ಟರೆ ವಿಡಿಯೋ ನಿಮಗೆ ಕೊಡುತ್ತೇನೆ ಎಂದು ಕೇಳಿದ್ದ.

ಸ್ಕ್ರೀನ್‌ಶಾಟ್ ನೋಡಿ ಕಾಂಗ್ರೆಸ್ ಶಾಸಕ ರಾಜಕೀಯ ವಿರೋಧಿಯನ್ನು ಹಣಿಸಲು ಪ್ರಬಲ ಅಸ್ತ್ರ ಇದಾಗುತ್ತದೆಯೆಂದು ಲಕ್ಷಾಂತರ ಹಣ ಕೊಟ್ಟು ವಿಡಿಯೋವನ್ನು ಖರೀದಿಸಿದ್ದ. ವಿಡಿಯೋವನ್ನು ಉಪಚುನಾವಣೆ ಸಮಯಕ್ಕೆ ಬಿಡುಗಡೆ ಮಾಡಲೆಂದೇ ಆ ಶಾಸಕ ಖರೀದಿಸಿದ್ದ. ಯಾವುದೇ ಶಾಸಕರನ್ನು ಹನಿಟ್ರ್ಯಾಪ್ ಮಾಡಿದಾಗಲೂ ಶಾಸಕರನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಜೊತೆಗೆ ಅದೇ ವಿಡಿಯೋವನ್ನು ರಾಜಕೀಯ ವಿರೋಧಿಗಳಿಗೆ ಮಾರಿ ಹಣ ಸಂಪಾದನೆ ಮಾಡುತ್ತಿದ್ದನಂತೆ ರಾಘವೇಂದ್ರ.

ರಾಘವೇಂದ್ರ ತನಿಖೆಯಿಂದ ಹಲವು ಶಾಕಿಂಗ್ ಸಂಗತಿಗಳು ಬಯಲಾಗುತ್ತಿದ್ದು, ಹನಿಟ್ರ್ಯಾಪ್‌ ಗೆ ಸಿಲುಕಿರುವ ಕೆಲವು ಶಾಸಕರುಗಳು ತಮ್ಮ ವಿಡಿಯೋವನ್ನು ಡಿಲೀಟ್ ಮಾಡುವಂತೆ ಸಿಸಿಬಿ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರಂತೆ.

Categories
Breaking News District State

ಹನಿಟ್ರ್ಯಾಪ್ ಆರೋಪ: ವಿದ್ಯಾರ್ಥಿನಿ ಸೇರಿ ಆರು ಮಂದಿಯ ಬಂಧನ – ಪೊಲೀಸರ ಮೇಲೆಯೇ ಗುಂಡು ಹಾರಿಸಿದ ಆರೋಪಿ

ಯುವತಿಯೊಬ್ಬಳನ್ನು ಬಳಸಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಸಂಚಿನಲ್ಲಿ ಸಿಲುಕಿಸಿ, 3.80 ಲಕ್ಷ ರೂ. ನಗದನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ.

ಬಂಧಿತರನ್ನು ಮುಹಮದ್ ಅಝರುದ್ದೀನ್(24), ಅಬೂಬಕರ್ ಸಿದ್ದೀಕ್(33), ಹಸೈನಾರ್ ಅಲಿಯಾಸ್ ಅಚ್ಚು(27), ಇರ್ಷಾದ್ ಅಲಿ(27), ಎ.ಎ.ಸಮೀರ್(28) ಹಾಗೂ ಓರ್ವ ಕಾಲೇಜು ವಿದ್ಯಾರ್ಥಿನಿ ಕೂಡ ಬಂಧನಕ್ಕೆ ಒಳಗಾಗಿದ್ದಾಳೆ. ಬಂಧಿತ ಆರೋಪಿಗಳಿಂದ 1 ಲಕ್ಷ ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಶಾಮೀಲಾಗಿದ್ದು, ಪ್ರಮುಖ ಆರೋಪಿ ಸೇರಿದಂತೆ ನಾಲ್ವರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಡಿ. ಪನ್ನೇಕರ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ :-

ದುಬೈನಲ್ಲಿದ್ದ ನಾಪೋಕ್ಲು ಎಮ್ಮೆಮಾಡು ನಿವಾಸಿ ಗಫೂರ್ ಆಗಸ್ಟ್ ತಿಂಗಳಿನಲ್ಲಿ ತಮ್ಮ ಊರಿಗೆ ಬಂದಿದ್ದರು. ಹೊಸ ಮನೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದ ಅವರ ಬಳಿ ಹಣ ಇರುವ ಬಗ್ಗೆ ಮಾಹಿತಿ ತಿಳಿದ ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಸ್ಥಳೀಯ ಯುವಕರನ್ನು ಸಂಪರ್ಕಿಸಿ ಗಫೂರ್ ಬಳಿಯಿದ್ದ ಹಣವನ್ನು ಲಪಟಾಯಿಸಲು ಸಂಚು ಹೂಡಿದ್ದರು ಎನ್ನಲಾಗಿದೆ. ಅದರಂತೆ ಆಗಸ್ಟ್ 16ರಂದು ಗಫೂರ್ ಅವರನ್ನು ಕರೆದುಕೊಂಡು ಮನೆ ಬಳಕೆಯ ಎಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿಸಲು ಮೈಸೂರಿಗೆ ತೆರಳುವಂತೆ ಆರೋಪಿಗಳು ಮನವೊಲಿಸಿದ್ದರು. ಅದರಂತೆ ಕರೀಂ ಮತ್ತು ಅಝರುದ್ದೀನ್ ಅವರು ಗಫೂರ್ ಅವರನ್ನು ಕರೆದುಕೊಂಡು ಮೈಸೂರಿಗೆ ತೆರಳುವಾಗ ಮೊದಲೇ ಸಂಚು ರೂಪಿಸಿದಂತೆ ಆರೋಪಿಗಳು ಕುಶಾಲನಗರದಿಂದ ಕಾಲೇಜು ಯುವತಿಯೊಬ್ಬಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಮೈಸೂರಿಗೆ ತಲುಪಿದ ಬಳಿಕ ಕತ್ತಲಾದ ಕಾರಣ ಮೈಸೂರಿನ ರಿಂಗ್ ರೋಡ್‍ನ ಹೋಂ ಸ್ಟೇ ಯಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಿ, ಯುವತಿ ಮತ್ತು ಗಫೂರ್ ಅವರನ್ನು ಆರೋಪಿಗಳು ಅಲ್ಲಿಗೆ ಕರೆದೊಯ್ದಿದ್ದರು. ಈ ಸಂದರ್ಭ ಗಫೂರ್ ಅವರಿಗೆ ಅಮಲು ಬರುವ ಪದಾರ್ಥವನ್ನು ನೀಡಿದ್ದರು ಎನ್ನಲಾಗಿದೆ.

ಮೊದಲೇ ನಿರ್ಧರಿಸಿದಂತೆ ಕೆಲವು ಸಮಯದ ಬಳಿಕ ಉಳಿದ ಆರೋಪಿಗಳು ಗಫೂರ್ ಮತ್ತು ಯುವತಿ ಉಳಿದುಕೊಂಡಿದ್ದ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ನಾವು ಪತ್ರಿಕಾ ಮಾಧ್ಯಮದವರೆಂದು ಹೇಳಿಕೊಂಡು ಗಫೂರ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಗಫೂರ್ ಮತ್ತು ಯುವತಿಯನ್ನು ಜೊತೆಯಲ್ಲಿ ನಿಲ್ಲಿಸಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೆಗೆದಿದ್ದಾರೆ.

ನಂತರ ಗಫೂರ್ ಬಳಿಯಿದ್ದ 60 ಸಾವಿರ ರೂ. ನಗದು ಮತ್ತು 55 ಸಾವಿರ ಮುಖ ಬೆಲೆಯ ಫಾರಿನ್ ಕರೆನ್ಸಿ, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ಅಲ್ಲದೇ 50 ಲಕ್ಷ ರೂ. ಗಳನ್ನು ತಕ್ಷಣ ನೀಡದಿದ್ದಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಟಿವಿ ಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಗಫೂರ್ ತಮ್ಮ ಬಳಿಯಿದ್ದ 3 ಲಕ್ಷ ರೂ. ಮತ್ತು ಮನೆಯಿಂದ ಹಣವನ್ನು ತರಿಸಿಕೊಂಡು ಒಟ್ಟು 3.80 ಲಕ್ಷ ರೂ. ಗಳನ್ನು ಆರೋಪಿಗಳಿಗೆ ನೀಡಿದ್ದಾರೆ. ನಂತರ ಆರೋಪಿಗಳು ಗಫೂರ್ ಅವರನ್ನು ಬಿಟ್ಟು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.

ನಮಗೆ ನಾವೇ ಮಾಧ್ಯಮ :-

ಒಂದು ತಿಂಗಳ ಹಿಂದೆ ಹನಿಟ್ರ್ಯಾಪ್ ಪ್ರಕರಣ ನಡೆದಿರುವ ಬಗ್ಗೆ ಜಿಲ್ಲಾ ಅಪರಾಧ ಪ್ತತೆದಳಕ್ಕೆ ಖಚಿತ ಮಾಹಿತಿ ದೊರಕಿತ್ತು. ಇದನ್ನು ಆಧರಿಸಿ ತನಿಖೆ ನಡೆಸಿದ ಅಪರಾಧ ಪತ್ತೆ ದಳ ನಾಪೋಕ್ಲುವಿನ ಎಮ್ಮೆಮಾಡು ನಿವಾಸಿ ಗಫೂರ್ ಅವರು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಗಫೂರ್ ಅವರ ಮನವೊಲಿಸಿದ ಪೊಲೀಸರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ 10 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆ ದಳ 10 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಿದೆ.

ಬಂಧಿತ ಆರೋಪಿಗಳು ಎಮ್ಮೆಮಾಡು ನಿವಾಸಿಗಳಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕಲಂ 120(ಬಿ), 328, 384, 395, ಮತ್ತು 149 ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇತರ 4 ಮಂದಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಪೊಲೀಸರಿಗೆ ಗುಂಡು :-

ಪ್ರಕರಣದ ಬಯಲಾಗುತ್ತಿದ್ದಂತೆಯೇ ಪ್ರಮುಖ ಆರೋಪಿ ಕರೀಂನನ್ನು ಬಂಧಿಸಲು ಜಿಲ್ಲಾ ಅಪರಾಧ ಪತ್ತೆ ದಳದ ಸಹಾಯಕ ನಿರೀಕ್ಷಕ ಮತ್ತು ಇತರ 4 ಮಂದಿ ಸಿಬ್ಬಂದಿಗಳು ಕರೀಂನ ಮನೆಗೆ ತೆರಳಿದ್ದರು. ಬಂಧನದ ಮಾಹಿತಿ ಅರಿತ ಕರೀಂ ಮನೆಯೊಳಗಿದ್ದ ಬಂದೂಕಿನಿಂದ ಪೊಲೀಸರ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದು, ಪೊಲೀಸ್ ಸಹಾಯಕ ನಿರೀಕ್ಷಕ ಹಮೀದ್ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಗುಂಡು ಪಕ್ಕದಲ್ಲಿದ್ದ ತಡೆಗೋಡೆಗೆ ಬಡಿದಿದ್ದು, ಬಳಿಕ ಕರೀಂ ತನ್ನ ಇಬ್ಬರು ಹೆಂಡತಿಯರ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರಿಗೆ ಗುಂಡು ಹೊಡೆಯುವಂತೆ ಆತನ ಪತ್ನಿಯೇ ಕೋವಿಯನ್ನು ತಂದು ಕೊಟ್ಟಿದ್ದಳು ಎನ್ನಲಾಗಿದೆ.

ಈ ಕುರಿತು ಪ್ರತ್ಯೇಕ ಪ್ರಕರಣವು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 307, 325 ಮತ್ತು ಭಾರತೀಯ ಶಸ್ತ್ರಾಸ್ತ್ರ ದುರ್ಬಳಕೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕರೀಂ ಮತ್ತು ಆತನ ಇಬ್ಬರು ಪತ್ನಿಯರು ಕೂಡ ಆರೋಪಿಗಳಾಗಿದ್ದು, ಈಗ ತಲೆ ಮರೆಸಿಕೊಂಡಿದ್ದಾರೆ. ಕರೀಂ 2015ರಲ್ಲಿ ನಡೆದ ಟಿಪ್ಪು ಗಲಭೆಯಲ್ಲೂ ಪ್ರಮುಖ ಪಾತ್ರ ವಹಿಸಿರುವ ಆರೋಪದಲ್ಲಿ ಪ್ರಕರಣವೂ ದಾಖಲಾಗಿದೆ. ಆತನ ಹಿನ್ನಲೆಯನ್ನು ಕೂಡ ತನಿಖೆ ನಡೆಸಲಾಗುತ್ತಿದ್ದು, ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.

Categories
Breaking News District

ಹನಿಟ್ರ್ಯಾಪ್‌ ಮಾಡಿ 4.85ಲಕ್ಷ ಪಡೆದ್ಲು : ಸಿಂಗಲ್‌ ಸೆಟಲ್‌ಮೆಂಟ್‌ಗಾಗಿ ಈಗ ಮತ್ತೆ ಬ್ಲಾಕ್‌ಮೇಲ್‌

ಚಿಕ್ಕಮಗಳೂರು : ಬೆಂಗಳೂರಿನಲ್ಲಿ ನೆಲೆಸಿರೋ ಮೂಡಿಗೆರೆ ಮೂಲದ ಮಹಿಳೆಯಿಂದ ಚಿಕ್ಕಮಗಳೂರಿನ ಯುವಕನೊಬ್ಬ ಹನಿಟ್ರ್ಯಾಪ್‍ಗೆ ಒಳಗಾಗಿ 4.85 ಸಾವಿರ ಕಳೆದುಕೊಂಡು ಆಕೆಯಿಂದ ಮತ್ತೆ ಬ್ಲ್ಯಾಕ್ ಮೇಲ್‍ಗೆ ಒಳಗಾಗಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರದ ಕಲ್ಯಾಣ ನಗರದ ನಿವಾಸಿ ಗೌರಿ ಶಂಕರ್‌ಗೆ ಕಳೆದೊಂದು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ ಮೈತ್ರಿ ಎಂಬುವಳ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ನಡೆದಿತ್ತು. ಗೌರಿಶಂಕರ್‌ನಿಂದ ಆಗಾಗ್ಗೆ ಒಟ್ಟು 4 ಲಕ್ಷದ 85 ಸಾವಿರ ಹಣ ಕಿತ್ತಿರೋ ಮೈತ್ರಿ ಸಿಂಗಲ್ ಸೆಟೆಲ್‌ಮೆಂಟ್‌ಗಾಗಿ ಮತ್ತೆ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಕೆಗೆ ಹಣ ಕೊಟ್ಟು ಸುಸ್ತಾಗಿರೋ ಗೌರಿಶಂಕರ್ ಮಾನಸಿಕ ನೆಮ್ಮದಿಗಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.

ಮೈತ್ರಿಯದ್ದು ಇದೊಂದೆ ಕೇಸಲ್ಲ. ಬೆಂಗಳೂರಿನ ಪೀಣ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರೋ ಮೈತ್ರಿ ಪಕ್ಕದ ಮಳಿಗೆ ವೈದ್ಯ ಡಾ.ಬಿರಾದಾರ್ ಎಂಬುವರಿಗೂ ಇದೇ ರೀತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಅವರಿಂದಲೂ ಈಗಾಗ್ಲೆ 9 ಲಕ್ಷ ಹಣ ಕಿತ್ತಿರೋ ಮೈತ್ರಿ ಅವರಿಗೆ ಸಿಂಗಲ್ ಸೆಟಲ್‌ಮೆಂಟ್‌ಗೆ 15 ಲಕ್ಷ ಕೇಳ್ತಿದ್ದಾಳೆ. ಹಾವೇರಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರಿಗೆ ಇದೇ ರೀತಿ ಮೋಸ ಮಾಡಿರೋ ಎಲ್ಲಾ ದಾಖಲೆಗಳು ಗೌರಿಶಂಕರ್ ಬಳಿ ಇದೆ. ಈಕೆಯಿಂದ ಗೌರಿ ಶಂಕರ್ ಕೆಲಸ ಮಾಡ್ತಿದ್ದ ಎಸ್ಟೇಟ್ ಮಾಲೀಕರು ಕೆಲಸದಿಂದ ತೆಗೆದುಹಾಕಿದ್ದಾರೆ.

ಈಕೆ ಮೇಲೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಎರಡು ಪ್ರಕರಣ ಕೂಡ ದಾಖಲಾಗಿದೆ. ಈಕೆಯ ಗಂಡನೇ ಈಕೆ ಮೇಲೆ ದೂರು ದಾಖಲಿಸಿದ್ದಾನೆ. ಮಂಜುನಾಥ್ ಎಂಬುವನು ಹಣ ನೀಡದ ಕಾರಣ ಆತನ ಮೇಲೂ ರೇಪ್ ಕೇಸ್ ನೀಡಿದ್ದಾಳಂತೆ ಈ ಮೈತ್ರಿ. ಇದೀಗ ಈಕೆಯಿಂದ ಸಂಸಾರ, ಉದ್ಯೋಗ, ಮಾನಸಿಕ ನೆಮ್ಮದಿ ಕಳೆದುಕೊಂಡಿರೋ ಗೌರಿಶಂಕರ್ ಮಾಧ್ಯಮಗಳು ಹಾಗೂ ಪೊಲೀಸರ ಮೊರೆ ಹೋಗಿದ್ದಾನೆ.

Categories
Breaking News National

ಭಾರತೀಯ ಅಧಿಕಾರಿಗಳ Honeytrap ಗೆ ಯತ್ನ : ಪಾಕ್‌ ಕುತಂತ್ರ ಬಯಲು ಮಾಡಿದ ಭಾರತ

ದೆಹಲಿ : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಮಾಡಿ ಭಾರತಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಸಂಗ್ರಹ ಮಾಡಲು ಹೂಡಿದ್ದ ತಂತ್ರವನ್ನು ಭಾರತ ವಿಫಲಗೊಳಿಸಿದೆ.

ಇಸ್ಲಾಮಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ಐಎಸ್‌ಐ ಯತ್ನಿಸಿತ್ತು. ಆದರೆ ಭಾರತೀಯ ಅಧಿಕಾರಿಗಳಿಗೆ ಈ ಸಂಚು ತಿಳಿದ ಅಧಿಕಾರಿಗಳು ಭಾರತಕ್ಕೆ ಮಾಹಿತಿ ರವಾನಿಸಿದ್ದಾರೆ.

ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಸಂಚಿನ ಕುರಿತು ಮಾಹಿತಿ ತಿಳಿದುಬಂದ ಕೂಡಲೆ ಅಧಿಕಾರಿಗಳನ್ನು ಇಸ್ಲಾಮಾಬಾದ್‌ನಿಂದ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್‌ ಯಾವುದೇ ಮಾಹಿತಿಗಳು ಐಎಸ್‌ಐ ಕೈ ಸೇರಿಲ್ಲ ಎನ್ನಲಾಗಿದ್ದು, ಪಾಕಿಸ್ತಾನದ ಸಂಚನ್ನು ವಿಫಲಗೊಳಿಸಲಾಗಿದೆ. ಅಲ್ಲದೆ ಅಧಿಕಾರಿಗಳು ಯಾವುದೇ ವಿಷಯವನ್ನು ಬಹಿರಂಗಪಡಿಸದೆ, ವಿಚಾರಣೆಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿರುವುದಾಗಿ ಹೇಳಲಾಗಿದೆ.
 ಅಲ್ಲದೆ ಇನ್ನು ಆ ಅಧಿಕಾರಿಗಳನ್ನು ಮತ್ತೆ ಇಸ್ಲಾಮಾಬಾದ್‌ಗೆ ಕಳುಹಿಸುವ ಸಾಧ್ಯತೆ ಇಲ್ಲ ಎನನಲಾಗುತ್ತಿದೆ.
Categories
Breaking News National Political Sandalwood

ಮೇಟಿ ನಾಟಿಯಾಟಕ್ಕೆ ನಟ ಜಗ್ಗೇಶ್ ನೀತಿಪಾಠ

ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ವಿಡಿಯೋ ಜಗಜ್ಜಾಹೀರು ಆಗಿದ್ದು ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನವಾಗಿದೆ. ಮೇಟಿರವರ ರಾಸಲೀಲೆ ಪ್ರಕರಣವನ್ನು ಪ್ರತಿಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

jaggesh-tweerjagesh-tweet

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಾಕಷ್ಟು ಜನ ಪ್ರತಿಕ್ರಿಯಿಸಿದ್ದು,  ನವರಸ ನಾಯಕ ಜಗ್ಗೇಶ್ `ಇವರಿಗೆ ಬುದ್ದಿ ಎಲ್ಲಿ ಹೋಗಿತ್ತು ಅವರ ವಯೋಮಾನಕ್ಕೆ ಬೇಕಿತ್ತಾ..? ಇವರು ಮಾಡಿದ ತಪ್ಪಿಗೆ ಅವರ ಮನೆಯವರು ಶಿಕ್ಷೆ ಅನುಭವಿಸುವಂತಾಗಿದೆ. ಪ್ರತಿ ಪಶು, ಪಕ್ಷಿ ಪ್ರಾಣಿಗಳು ವಯೋಮಾನಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತವೆ ಅಂದ ಮೇಲೆ ಬುದ್ಧಿ ಇರುವ ಮನುಷ್ಯ ಯಾಕೆ ಮೃಗವಾಗುತ್ತಿದ್ದಾನೆ.

ಹನಿಟ್ರ್ಯಾಪ್ ಇತ್ತೀಚಿಗೆ ಹಣ ಮಾಡುವ ತಂತ್ರದ ಟೆರರಿಸಂ, ಹೆಸರು ಹಣವಿರುವ ತೆವಲಿನ ಮಿಕಗಳೆ ಇವರ ಟಾರ್ಗೇಟ್ ಇಂತಹ ಕೃತ್ಯದಲ್ಲಿ ಭಾಗವಹಿಸುವವರನ್ನು   ಶಿಕ್ಷಿಸಿದಾಗ ಮಾತ್ರ ಬುದ್ದಿ ಬರುವುದು. ಇಲ್ಲದಿದ್ದರೆ ಇದೇ ದಂಧೆಯಾಗುತ್ತದೆ. ಬದುಕು ಕನ್ನಡಿಯಂತೆ ಎಚ್ಚರಿಕೆಯಿಂದ ಬಳಸಿ ಎಂದು ನಟ ಜಗ್ಗೇಶ್ ತಮ್ಮದೇ   ಶೈಲಿಯಲ್ಲಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.