Categories
Breaking News District Political State

ಮದುವೆಗೂ ಮುನ್ನಾ ಮತದಾನ ಮಾಡಿದ ಮಧುಮಗ : ಶುಭಾಶಯ ಕೋರಿದ ಗ್ರಾಮಸ್ಥರು

ಮಧುಮಗನೊಬ್ಬ ಮದುವೆಗೂ ಮುನ್ನಾ ಮತದಾನ ಮಾಡಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಮ್ಮೇನಹಳ್ಳಿಯ ಮುತ್ತುರಾಜ್ ಮದುವೆಗೂ ಮುನ್ನಾ ಮತ ಚಲಾಯಿಸಿದ ಮಧುಮಗ. ಇಂದು ಮುತ್ತುರಾಜ್ ಮದುವೆಯ ನಿಶ್ಚಯವಾಗಿತ್ತು. ತಾಳಿ ಕಟ್ಟಲು ಇನ್ನು ಅರ್ಧಗಂಟೆ ಇರುವಂತೆ ಮದುವೆ ಡ್ರೆಸ್ ನಲ್ಲಿ ಬಂದ ಮುತ್ತುರಾಜ್ ಮತ ಚಲಾವಣೆ ಮಾಡಿದ್ದಾರೆ.

ಮದುವೆ ವೇಷದಲ್ಲಿ ಬಂದ ಮಧುಮಗನಿಗೆ ಮತಗಟ್ಟೆ ಬಳಿ ಗ್ರಾಮಸ್ಥರು ಶುಭಾಶಯ ಕೋರಿದರು.

Categories
Breaking News District Political State

ಇವಿಎಂನಲ್ಲಿ ಕುಮಟಳ್ಳಿ ಫೋಟೋ ಮೇಲೆ ಸವದಿ ಫೋಟೋ ಇಟ್ಟು ಮತ ಹಾಕಿದ ವ್ಯಕ್ತಿ….

ವ್ಯಕ್ತಿಯೋರ್ವ ಇವಿಎಂ ಮೇಲೆ ಮಹೇಶ ಕುಮಟಳ್ಳಿ ಫೋಟೋ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಫೋಟೋ ಇಟ್ಟು ಮತ ಹಾಕಿದ್ದಾನೆ

ಹೌದು… ಅಥಣಿ ಉಪಚುನಾವಣೆ ಮತದಾನದ ವೇಳೆ ವ್ಯಕ್ತಿಯೊಬ್ಬ ಕುಮಟಳ್ಳಿ ಫೋಟೋ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಫೋಟೋ ಇಟ್ಟು ವೋಟ್ ಹಾಕಿರುವ ವಿಡಿಯೋ ಸೊಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಥಣಿ ತಾಲೂಕಿನ ಮತಗಟ್ಟೆಯೊಂದರಲ್ಲಿ ನಡೆದಿರುವ ಈ ಘಟನೆ ನಡೆದಿದೆ. ಆದರೆ ಫೋಟೋ ಇಟ್ಟು ವೋಟ್ ಹಾಕಿದ್ದು ಎಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ. ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿಗನಿಂದ ನೀತಿ ಸಂಹಿತೆ ಉಲ್ಲಂಘನೆ ನಡೆದಿರುವುದರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

Categories
Breaking News District Political State

ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ ಮಾಡಿದ ಹೆಚ್.ವಿಶ್ವನಾಥ್…

ಬಿಜೆಪಿಯವರು ಹಣ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ ಎನ್ನುವ ಆರೋಪದಿಂದ ಮನನೊಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜನರಿಗೆ ಬಹಿರಂಗ ಪತ್ರ ಬರೆದು ಮತಯಾಚನೆ  ಮಾಡಿದ್ದಾರೆ.

ಹುಣಸೂರಿನ ಬನ್ನಿಕುಪ್ಪೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ಪ್ರಚಾರದಲ್ಲಿ ಆದ ಅಪಪ್ರಚಾರದಿಂದ ನೊಂದು ಮೊನ್ನೆ ರಾತ್ರಿ ಪತ್ರ ಬರೆದೆ. ಅದು ನಾನೇ ಖುದ್ದಾಗಿ ಬರೆದಿರುವ ಪತ್ರ. ಮೊನ್ನೆ ರಾತ್ರಿ ಬರೆದು ನಿನ್ನೆ ಮುದ್ರಿಸಿ‌ ಇಂದು ಜನರಿಗೆ ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ. ನಾನೋಬ್ಬ ಸಾಹಿತಿ ಕಾಗಕ್ಕ‌ಗುಬ್ಬಕ್ಕ‌ಕಥೆ ಬರೆಯುವವನು ನಾನಲ್ಲ. ಮನಸ್ಸಿನ ಮಾತು ಬರೆಯುವ ಲೇಖಕ ನಾನು. ಹೀಗಾಗಿ ಎಲ್ಲವನ್ನು ಜನರಿಗೆ ಹೇಳಲು ಪತ್ರ ಬರೆದಿದ್ದೇನೆ ಎಂದು ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಹಣ ಹಂಚಲು ನನ್ನ‌ಬಳಿ ಹಣ ಇಲ್ಲ. ಹಾಗಾಗಿ ನಾನು‌ ಕಂಡಿರುವ ಕನಸು ಹಂಚುತ್ತಿದ್ದೇನೆ. ಜೆಡಿಎಸ್‌ ಕಾಂಗ್ರೆಸ್‌ನವರಿಗೆ ಕನಸು ಕಾಣುವುದೇ ಗೊತ್ತಿಲ್ಲ. ಹೀಗಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.