Categories
Breaking News Sandalwood

ಪಾಪ್ ಕಾರ್ನ್ ಮಂಕಿ ಟೈಗರ್ ನಲ್ಲಿ ಸೌತ್ ಇಂಡಿಯಾ ಟಾಪ್ ಹೀರೋಯಿನ್ ಪತಿ..!? ಈ ಪೋಸ್ಟರ್ ನಲ್ಲಿರೋದು ಯಾರು..?

ಪಾಪ್ ಕಾರ್ನ್ ಮಂಕಿ ಟೈಗರ್ ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿರೋ, ವಿಶೇಷ ನಿರೀಕ್ಷೆಯನ್ನ ಹುಟ್ಟಿಸಿರೋ ಸಿನಿಮಾ. ಸುಕ್ಕಾ ಸೂರಿ- ಡಾಲಿ ಧನಂಜಯ ಕಾಂಬಿನೇಷನ್ ನಿಂದ ತುಂಬಾ ದೊಡ್ಡ ಮಟ್ಟದ ಭರವಸೆ ಹುಟ್ಟಿಸಿರೋ ಸಿನಿಮಾ. ಟೈಟಲ್ ಹಾಗೂ ಕೆಲ ಪೋಸ್ಟರ್ ಗಳಿಂದ್ಲೇ ಕನ್ನಡ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ಚಿತ್ರವಿದು. ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಶುರುಮಾಡಿ, ಸದ್ಯ ಅದ್ರಲ್ಲಿ ತಲ್ಲೀನನಾಗಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಟೀಮ್, ಗ್ಯಾಪ್ ನಲ್ಲೊಂದು ಪೋಸ್ಟರ್ ಬಿಟ್ಟು ಸಿನಿಮಾ ಮೇಲಿನ ಕುತೂಹಲವನ್ನ ಡಬಲ್ ಮಾಡಿದೆ.

ಈ ಪೋಸ್ಟರ್ ನಲ್ಲಿರೋದು ಯಾರು ಗೊತ್ತಾ..?
ಸೂರಿ ಸಿನಿಮಾ ಅಂದ್ರೆ ಅಲ್ಲಿ ಸುಕ್ಕಾ ಅಂದ್ರೆ ರಾ ಕಂಟೆಂಟ್ ಹೆಚ್ಚಿರುತ್ತೆ. ಅದು ಒಂದು ಬಗೆಯ ಕ್ಲಾಸ್ ಆಗಿ ಸಿನಿಪ್ರಿಯರನ್ನ ಸಳೆಯುತ್ತೆ ಅಂತ ವಿಶಿಷ್ಠ ಶೈಲಿಯಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾ ಸೆರೆ ಹಿಡಿತಾರೆ ನಿರ್ದೇಶಕ ಸೂರಿ. ಅಷ್ಟೇ ಅಲ್ಲ ಅವ್ರ ಕಥೆ ಮತ್ತು ಪಾತ್ರಗಳು ಮಾತ್ರ ಜನಮಾನಸದಲ್ಲಿ ಎಂದೂ ಉಳಿದುಕೊಳ್ಳುವಂತಹವಾಗಿರುತ್ತೆ. ಅಂತಹ ಇಂಪ್ಯಾಕ್ಟ್ ಅವ್ರ ಸಿನಿಮಾಗಳಿಂದ ಈಗಾಗ್ಲೇ ಸಾಕಷ್ಟು ಆಗಿವೆ. ಅದ್ರಂತೆ, ಇದೀಗ ತೆರೆಗೆ ಬರಲು ಸಿದ್ದವಾಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಪಾತ್ರಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸ್ತಿವೆ. ಈವರೆಗೂ ಯಾವುದೇ ದೃಶ್ಯಾವಳಿಗಳನ್ನ ಬಿಟ್ಟುಕೊಡದ ಸೂರಿ, ಜಸ್ಟ್ ಪೋಸ್ಟರ್ ಗಳನ್ನಷ್ಟೇ ರಿಲೀಸ್ ಮಾಡಿದ್ದು ಪ್ರತಿ ಪೋಸ್ಟರ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದ್ರಂತೆ, ಈಗ ರಿಲೀಸ್ ಮಾಡಿರೋ ಈ ಪೋಸ್ಟರ್ ಸಖತ್ ಸ್ಪೆಷಲ್ ಆಗಿದೆ. ಇದೊಂದು ಪೋಸ್ಟರ್ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೇಲೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಜೊತೆಗೆ ಒಂದು ಸರ್ಪೈಸ್ ನ ಕೊಡ ಕೊಟ್ಟಿದೆ.

ಜಾಕಿ ಭಾವನ ಪತಿ, ನಾಯಕ ನವೀನ್ ಈಸ್ ಬ್ಯಾಕ್  PMTನಲ್ಲಿ ಸೂರಿ ನವೀನ್ ಗೆ ಕೊಟ್ಟಿರೋ ಪಾತ್ರವೇನು..?
ಹೌದು, ಪಿಎಂಟಿ ಚಿತ್ರದ ಹೊಸ ಪೋಸ್ಚರ್ ನಲ್ಲಿ ಕಾಕ್ರೋಚ್ ಜೊತೆಗೆ ಕೂತಿರೋದು ನಟಿ ಜಾಕಿ ಭಾವನಾ ಅವರ ಪತಿ ನವೀನ್. ಈ ಚಿತ್ರದಲ್ಲಿ ನವೀನ್ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ ಅದು ಪಾಸಿಟೀವಾ ನೆಗೆಟೀವಾ ಅನ್ನೋದು ಗೊತ್ತಿಲ್ಲ. ಟಗರು ಖ್ಯಾತಿಯ ಕಾಕ್ರೋಚ್ ಜೊತೆಗೆ ಕೂದಲು ಬಿಟ್ಟುಕೊಂಡು ಬನಿಯನ್ ನಲ್ಲಿ ಕೂತಿರೋದು ಮಾತ್ರ ನವೀನ್ ಅನ್ನೋದು ಪಕ್ಕಾ ಆಗಿದೆ. ನವೀನ್ ಮೇಕ್ ಒವರ್ ನೋಡಿದ್ರೆ, ಈ ಸಲ ಉದ್ಯಮದಲ್ಲಿ ನಟನಾಗಿ ಪಕ್ಕಾ ನೆಲೆ ನಿಲ್ಲೋ ಹಾಗೇ ಕಾಣ್ತಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ದಿನೇ ದಿನೇ ಉದ್ಯಮದ ಜೊತೆಗೆ ಮಾಸ್ ಸಿನಿಪ್ರಿಯರಲ್ಲಿ ಕ್ರೇಜ್ ನ ಹೆಚ್ಚಿಸ್ತಿದೆ.

ದುನಿಯಾ ಸೂರಿ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ ಇರೋ ಈ ಚಿತ್ರವನ್ನ ಸುಧೀರ್ ಕೆ.ಎಂ ನಿರ್ಮಿಸ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್ ರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಡಾಲಿ ಧನಂಜಯ, ನಿವೇದಿತಾ,ಕಾಕ್ರೋಚ್, ನವೀನ್, ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರಗಳಲ್ಲಿ ಮಿಂಚಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್ಡೇಟ್ಸ್ ಕೊಡಲಿದೆಯಂತೆ.

Categories
Breaking News District Political State

ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ : ಯಾರಿಗೆಲ್ಲಾ ಒಲಿಯುತ್ತೆ ಸಚಿವ ಸ್ಥಾನ..?

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತೆರೆಮರೆಯಲ್ಲಿ ಬಹುವಾಗಿ ಶ್ರಮಿಸಿದ ಪಕ್ಷದ ಹಲವು ಶಾಸಕರು ಹಾಗೂ ಮುಖಂಡರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶಾಸಕರಾದ ಅರವಿಂದ್‌ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಅವರು ಸರ್ಕಾರ ರಚಿಸುವುದಕ್ಕೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಹಲವು ತಿಂಗಳುಗಳಿಂದ ತಂತ್ರಗಾರಿಕೆ ರೂಪಿಸಿ ಸಾಕಷ್ಟುಶ್ರಮ ವಹಿಸಿದ್ದರು. ಇವರನ್ನು ಹೊರತುಪಡಿಸಿ ಇತರ ಕೆಲವು ಶಾಸಕರು ಹಾಗೂ ಮುಖಂಡರಿದ್ದರೂ ಐವರ ಪಾತ್ರ ಮುಖ್ಯವಾದದ್ದು.

ಈ ಪೈಕಿ ಯಡಿಯೂರಪ್ಪ ಅವರ ಆಪ್ತ ಸಹಾಯಕವಾಗಿರುವ ಸಂತೋಷ್‌ ಅವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿಯೇ ಮುಂದುವರೆಯಲಿದ್ದಾರೆ. ಆದರೆ, ಇನ್ನುಳಿದ ನಾಲ್ವರ ಪೈಕಿ ಎಲ್ಲರೂ ಸಚಿವ ಸ್ಥಾನದ ಬಗ್ಗೆ ಆಕಾಂಕ್ಷೆ ಹೊಂದಿದ್ದಾರೆ. ಯಡಿಯೂರಪ್ಪ ಅವರಿಗೂ ಲಿಂಬಾವಳಿ, ಅಶ್ವತ್ಥನಾರಾಯಣ, ವಿಶ್ವನಾಥ್‌ ಹಾಗೂ ಯೋಗೇಶ್ವರ್‌ ಅವರೆಲ್ಲರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಒಲವಿದೆ. ಆದರೆ, ಪಕ್ಷದ ಹೈಕಮಾಂಡ್‌ ಎಷ್ಟುಮಂದಿಗೆ ಹಸಿರು ನಿಶಾನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಸದ್ಯಕ್ಕೆ ಲಭಿಸಿರುವ ಮಾಹಿತಿ ಅನುಸಾರ ಅರವಿಂದ್‌ ಲಿಂಬಾವಳಿ ಮತ್ತು ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂಬ ಮಾತು ಪಕ್ಷದಿಂದ ಕೇಳಿಬಂದಿದೆ. ಲಿಂಬಾವಳಿ ಅವರಿಗೆ ಹಿರಿತನ ಮತ್ತು ಪಕ್ಷ ಸಂಘಟನೆಯ ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷದ ಮುಂದಿನ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲೂ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಎರಡರಲ್ಲಿ ಒಂದು ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ಇನ್ನು ಡಾ.ಅಶ್ವತ್ಥ ನಾರಾಯಣ ಮತ್ತು ಎಸ್‌.ಆರ್‌.ವಿಶ್ವನಾಥ್‌ ಇಬ್ಬರೂ ಮೂರನೇ ಬಾರಿ ಶಾಸಕರಾಗಿದ್ದಾರೆ. ಆದರೆ, ಸರ್ಕಾರ ರಚನೆಯಲ್ಲಿ ವಿಶ್ವನಾಥ್‌ ಅವರಿಗೆ ಹೋಲಿಸಿದರೆ ಅಶ್ವತ್ಥನಾರಾಯಣ ಅವರ ಪಾತ್ರ ದೊಡ್ಡದು. ಹೆಚ್ಚೂ ಕಡಮೆ ತಿಂಗಳುಗಟ್ಟಲೇ ಇದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹ ಶಾಸಕರಿಗೂ ಭವಿಷ್ಯದಲ್ಲಿ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಬಿಜೆಪಿಗರಿಗೆ ಸಚಿವ ಸ್ಥಾನಗಳ ಕೊರತೆ ಎದುರಾಗಲಿದೆ. ಹೀಗಾಗಿ, ಅಶ್ವತ್ಥನಾರಾಯಣ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೊ ಅಥವಾ ಬೇರೊಂದು ಹುದ್ದೆಯನ್ನು ನೀಡಿ ಸಮಾಧಾನ ಮಾಡಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ.