ಕೊರೊನಾ: ಮನೆ ಖಾಲಿ ಮಾಡುವಂತೆ ಒತ್ತಾಯಿಸುವ ಮಾಲೀಕರೇ ಹುಷಾರ್‌.. ಇಲ್ಲಿದೆ ನೋಡಿ ಸರ್ಕಾರದ ಖಡಕ್‌ ಎಚ್ಚರಿಕೆ

ಕೊರೊನಾ ಕಾರಣಕ್ಕೆ ಬಾಡಿಗೆದಾರರನ್ನು, ವೈದ್ಯರು , ಅರೆವೈದ್ಯಕೀಯ, ಆರೋಗ್ಯ ಸಿಬ್ಬಂದಿಯನ್ನು ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುವ ಮನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮನೆ ಖಾಲಿ ಒತ್ತಾಯಿಸುವ ಭೂಮಾಲೀಕರು / ಮನೆ ಮಾಲೀಕರ ವಿರುದ್ಧ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಕೊರೊನಾ ಹರಡುತ್ತಿರುವ ಸಮಯದಲ್ಲಿ ರೋಗಿಗಳ ರಕ್ಷಣೆಗೆ ವೈದ್ಯರು ಮತ್ತು ದಾದಿಯರು ಜೀವದ ಹಂಗು ತೊರೆದು ನಿಂತಿದ್ದಾರೆ. ಆದರೆ ಅವರು ಬಾಡಿಗೆ ಮನೆಯಲ್ಲದಿದ್ದರೆ ಅದು ನಮಗೂ ಹರಡುತ್ತದೆ ಎಂಬ ಭಯದಿಂದ ಅವರನ್ನು ಅಲ್ಲಿಂದ ಖಾಲಿ ಮಾಡಿಸುತ್ತಿರುವ ಘಟನೆಗಳು ಸತತವಾಗಿ ವರದಿಯಾಗಿದ್ದವು.

ಈ ಬಗ್ಗೆ ಇಂದು ಸರ್ಕಾರ ಖಡಕ್‌ ನಿರ್ದೇಶನ ನೀಡಿದ್ದು, ವೈದ್ಯರು ಮತ್ತು ದಾದಿಯರು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಕರ್ನಾಟಕದಲ್ಲಿ ಕೊರೊನಾ ಹರಡಿರುವ ಯಾವುದೇ ವರದಿಗಳಿಲ್ಲ. ಹಾಗಿದ್ದರೂ ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕುವುದು ಅಮಾನವೀಯ ಎಂಬ ಎಂದು ಹೇಳಿದೆ.

ಈ ಕುರಿತು ಸಾರ್ವಜನಿಕ ವಲಯದಲ್ಲಿಯೂ ಮನೆ ಮಾಲೀಕರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸರ್ಕಾರದ ಈ ಕ್ರಮ ಅತ್ಯಗತ್ಯವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.