ತಮಿಳುನಾಡಿಗೆ 20 ಸಾವಿರ ಕ್ಯೂಸೆಕ್ಸ್‌ ನೀರು ಬಿಡಲು ಕುಮಾರಸ್ವಾಮಿ ಆದೇಶ

ಬೆಂಗಳೂರು : ತಮಿಳುನಾಡಿಗೆ ಕಬಿನಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರು ಬೀಡುವಂತೆ ಸಿಎಂ ಕುಮಾರಸ್ವಾಮಿ ಆದೇಶಿಸಿದ್ದಾರೆ.

ಶುಕ್ರವಾರ ತಮಿಳುನಾಡಿನ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ದೇವರ ದಯೆಯಿಂದ ರಾಜ್ಯದಲ್ಲಿ ತುಂಬಾ ಚೆನ್ನಾಗಿ ಮಳೆಯಾಗುತ್ತಿದೆ. ಮುಂದೆಯೂ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಹಾಗಾಗಿ ಕಾವೇರಿ ನೀರಿನಲ್ಲಿ ತಮಿಳುನಾಡಿಗೆ ನೀಡಬೇಕಾದ ಪಾಲನ್ನು ಜೂನ್ ನಲ್ಲಿ ನೀಡಲು ಸಾಧ್ಯ ಎಂದಿದ್ದಾರೆ.

ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಬಿನಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಮುಂಗಾರು ಚೆನ್ನಾಗಿ ಪ್ರಾರಂಭವಾಗಿದೆ. ಹೀಗೆಯೇ ಮುಂಗಾರು ಮುಂದುವರಿದರೆ ಕಾವೇರಿ ನೀರು ಹಂಚಿಕೆ ಆದೇಶದಂತೆ ಜೂನ್ ನಲ್ಲಿ ತಮಿಳುನಾಡಿನ ಪಾಲು 10 ಟಿಎಂಸಿ ನೀರು ನೀಡಲಾಗುವುದು ಎಂದು ಹೆಚ್ಡಿಕೆ ಹೇಳಿದ್ದಾರೆ.

Leave a Reply

Your email address will not be published.