ದಂಗಲ್ ದಶಕ : ಕುಸ್ತಿಪಟುಗಳ ಸಾಧನೆ ಅತಿದೊಡ್ಡ ಬ್ಲಾಕ್ ಬ್ಲಸ್ಟರ್ ಸಿನಿಮಾ….

2010ರ ದಶಕದಲ್ಲಿ ಹಲವಾರು ಸಿನಿಮಾಗಳು ಸದ್ದು ಮಾಡಿಹೋಗಿವೆ. ಅವುಗಳಲ್ಲಿ ವಿಶೇಷವಾಗಿ ಛಾಪು ಮೂಡಿಸಿದ್ದು ದಂಗಲ್ ಸಿನಿಮಾ.

ಕುಸ್ತಿಪಟುಗಳಾದ ಪೋಗಟ್ ಸೋದರಿಯರ ಸಾಧನೆ ಮತ್ತು ಅವರ ತಂದೆಯ ಹಠದೊಂದಿಗೆ ಎಣೆಯಲಾದ, ಅಮಿರ್ ಖಾನ್ ಅಭಿನಯದ ದಂಗಲ್ ಸಿನಿಮಾ 2,000 ಕೋಟಿ ಗಳಿಸಿ ಬಾಕ್ಸ್ ಆಫೀಸ್‍ನಲ್ಲಿ ಸದ್ದುಮಾಡಿತ್ತು.

‘ಯಾಹೂ ಇಂಡಿಯಾ ಡಿಕೇಡ್ ಇನ್ ರಿವೀವ್’ ವರದಿಯ ಪ್ರಕಾರ ದಂಗಲ್ ಸಿನಿಮಾ ಈ ದಶಕದ ಅತಿದೊಡ್ಡ ಬ್ಲಾಕ್ ಬ್ಲಸ್ಟರ್ ಸಿನಿಮಾ ಎಂದು ಹೇಳಿದೆ. ಅತಿ ಹೆಚ್ಚು ಲಾಭಗಳಿಸಿದ ಸಿನಿಮಾ ಇದಾಗಿದೆ.

ಈ ಸಿನಿಮಾವಲ್ಲದೆ ವಿಭಿನ್ನ ಪ್ರಯತ್ನ ಮತ್ತು ವಿಶೇಷತೆಯೊಂದಿಗೆ ಬಂದ ಬಜರಂಗಿ ಭಾಯಿಜಾನ್, ಪೀಕೆ, ಟೈಗರ್ ಜಿಂದಾ ಹೇ ಸಿನಿಮಾಗಳು ನಂತರದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ವಿಶೇಷವೆಂದರೆ ಈ ಎಲ್ಲಾ ಸಿನಿಮಾಗಳು ವೈಚಾರಿಕತೆ, ಸಹಿಷ್ಣುತೆ, ಕೋಮು ಸಹಬಾಳ್ವೆಯ ಮೌಲ್ಯಗಳನ್ನು ಹೊಂದಿರುವ ಸಿನಿಮಾಗಳು.

Leave a Reply