ಪೊಲೀಸ್ ಸೇವೆಗೆ ಸೇರಿದ “ರೂಬಿ” ಎಂಬ ಶ್ವಾನ ಸಾವು : ಸಕಲ ಗೌರವದೊಂದಿಗೆ ಶ್ರದ್ಧಾಂಜಲಿ

ಪೊಲೀಸ್ ಶ್ವಾನವೊಂದು ಸಾವನ್ನಪ್ಪಿದ್ದು ಪೊಲೀಸರಿಂದ ಅಂತ್ಯಕ್ರಿಯೆ ಮಾಡಲಾಯಿತು, ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದ “ರೂಬಿ” ಎಂಬ ಹೆಸರಿನ ಶ್ವಾನವು ಮರಣ ಹೊಂದಿದೆ.

ಈ ಶ್ವಾನವು 3.07.2006 ರಲ್ಲಿ ಸೇವೆಗೆ ನಿಯುಕ್ತಿಗೊಂಡು 13 ವರ್ಷ 6 ತಿಂಗಳು ಸುದೀರ್ಘ ಸೇವೆ ಮಾಡಿದೆ. ಬೆಂಗಳೂರಿನ ಆಡುಗೊಡೆಯಲ್ಲಿ ಸುಮಾರು ಒಂಬತ್ತು ತಿಂಗಳ ತರಬೇತಿ ಪಡೆದು,ಅಪರಾಧ ತನಿಖೆಗೆಂದು ನೇಮಕವಾದ ಈ ಶ್ವಾನವು ಸುಮಾರು 246 ಅಪರಾಧ ತನಿಖೆಗಳನ್ನು ಮಾಡಿ ಒಟ್ಟು 18 ತನಿಖೆಗಳನ್ನು ಪತ್ತೆ ಹಚ್ಚುವ ಮೂಲಕ ಇಲಾಖೆಗೆ ಗೌರವ ತಂದಿದೆ.

ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಅಂಬೇಡ್ಕರ್ ಪ್ರತಿಮೆ ವಿರೂಪಗೋಳಿಸಿದ ಕಿಡಿಗೆಡಿಗಳನ್ನು ಪತ್ತೆ ಮಾಡಿದೆ. ಶಕ್ತಿ ನಗರದ RTPS ಮುಂದೆ ಇಂಜಿನಿಯರ್ ಒಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ದಿನ ಇಲಾಖೆಯಿಂದ ಸಕಲ ಗೌರವಗಳನ್ನು ನೀಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Leave a Reply

Your email address will not be published.