ಜನ ಮೆಚ್ಚಿದ ಶಿಕ್ಷಕನಿಕೆ ಇದೆಂತ ಸ್ಥಿತಿ ವಿಧಿ ಆಟಕ್ಕೆ ಬಿದಿಗೆ ಬಿದ್ದ ಕುಟುಂಬ

ಆತ ಜನ ಮೆಚ್ಚಿದ ಶಿಕ್ಷಕ ಆ ಶಿಕ್ಷಕ ಅಂದ್ರೆ ಎಲ್ಲಾ ವಿಧ್ಯಾರ್ಥಿಗಳು ಅಚ್ಚು ಮೆಚ್ಚು ಕೂಡ ಹೆಂಡತಿ ಮೂರು ಮಕ್ಕಳು ಜೋತೆ ಒಳ್ಳೆಯ ಸಂಸಾರ ಕೂಡ ಕೂಡ ನಡೆಸ್ತಾ ಇದ್ರು ಆದ್ರೆ ಆ ಶಿಕ್ಷಕಣ ಬಾಳಿನಲ್ಲಿ ವಿಧಿ ಬೇರೆ ಆಟವನ್ನೆ ಆಡಿದ ಪರಿಣಾಮ ಈಡಿ ಕುಟುಂಬವೆ ಈಗ ಬೀದಿಗೆ ಬಂದಿದೆ.

ಇವರ ಹೆಸರು ಚಂದ್ರಶೇಖರ ಭೋಜನ್ನವರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ನಿವಾಸಿ ಕಳೆದ 20 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಶಿಕ್ಷಕನಾಗಿ ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದಿದಿದ್ದ ಎಲ್ಲವೂ ಸರಿಯಾಗೆ ನಡೆದಿತ್ತು ಆದ್ರೆ ಕಳೆದ ಆರು ತಿಂಗಳ ಹಿಂದೆ ವಿಧಿ ಈ ಶಿಕ್ಷಕಣ ಬಾಳಿನಲ್ಲಿ ಬೇರೆ ಆಟವನ್ನೆ ಆಡಿದ್ದಾನೆ. ಆರು ತಿಂಗಳ ಹಿಂದೆ ಇವರು ಪಾರ್ಶ್ವವಾಯು ಖಾಯಿಲೆಗೆ ತುತ್ತಾದ ಪರಿಣಾಮ ಇವರ ಮಾತುಗಳೆ ಹೊರಟು ಹೋಗಿವೆ.

ದೈಹಿಕವಾಗಿ ಚೆನ್ನಾಗಿದ್ರು ಮಾತು ಬಾರದ ಕಾರಣ ಇವರಿಗೆ ಶಾಲೆಗೆ ಬಾರದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಅಲ್ಲದೆ ಅಲ್ಲದೆ ಶಿಕ್ಷಕ ಚಂದ್ರಶೇಖರರ ಸಂಬಳವನ್ನು ತಡೆ ಹಿಡಿದ್ದಾರೆ ಸಂಬಳ ವಿಲ್ಲದೆ ಈಗ ಕುಟುಂಬ ಪರದಾಡುವಂತಾಗಿದೆ. ಮೊದಲೆ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಈ ಕುಟುಂಬ ಸಂಬಳದ ಮೇಲೆ ಆಶ್ರಯ ಪಡೆದಿತ್ತು ಆದ್ರೆ ಶಿಕ್ಷಣ ಇಲಾಖೆ ನಿರ್ಧಾರದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಮೂರು ಮಕ್ಕಳ ಶಾಲಾ ಖರ್ಚು, ಗಂಡನ ಆಸ್ಪತ್ರೆ ಖರ್ಚು ಭರಿಸಲಾಗದೆ ಶಿಕ್ಷಕಣ ಪತ್ನಿ ಶಾರದಾ ತನ್ನ ಗಂಡನನ್ನ ಕರೆದುಕೊಂಡು ಶಿಕ್ಷಣ ಇಲಾಖೆ ಕಛೇರಿಗಳಿಗೆ ಅಲೆದಾಡಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಯಾವುದೆ ಪ್ರಯೋಜನ ಮಾತ್ರ ಆಗಿಲ್ಲಾ.

ಇನ್ನು ಸರ್ಕಾರಿ ನಿಯಮದ ಪ್ರಕಾರ ಯಾವುದೆ ನೌಕರ ಖಾಯಿಲೆಯಿಂದ ಬಳಲುತ್ತಿದ್ದರೆ ಅಂತವರಿಗೆ ಗಳಿಕೆ ರಜೆ ಅಥವಾ ಅನಾರೋಗ್ಯದ ರಜೆ ಹಾಕಿ ಅಂತಹವರಿಗೆ ಸಂಬಳ ಕೊಡಬೇಕು ಆದ್ರೆ ಇದಾವುದನ್ನು ಮಾಡದ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾ ಏಕಿ ಶಿಕ್ಷಕಣ ಸಂಬಳವನ್ನ ತಡೆ ಹಿಡಿದಿದ್ದಾರೆ. ಇನ್ನು ಈ ಕುರಿತು ಅಥಣಿ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನ ಕೇಳಿದ್ರೆ ಕೆಲಸ ಮಾಡಿಲ್ಲಾ ಅಂದ್ರೆ ಸಂಬಳ ಇಲ್ಲಾ ಅವರು ಭೋದನೆ ಮಾಡುವ ಸಾಮರ್ಥ್ಯ ಹೊಂದಿಲ್ಲ ಹಾಗಾಗಿ ಅವರ ಸಂಬಳ ತಡೆ ಹಿಡಿದಿದ್ದಾಗಿ ಹೇಳುತ್ತಾರೆ.

ಒಟ್ಟಿನಲ್ಲಿ ವಿಧಿ ಆಡಿದ ಆಟ, ಶಿಕ್ಷಣ ಇಲಾಖೆ ನಡೆಯಿಂದ ಈ ಶಿಕ್ಷಕಣ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಇನ್ನಾದ್ರು ಶಿಕ್ಷಣ ಇಲಾಖೆ ಎಚ್ಚಿತ್ತುಕೊಂಡು ಶಿಕ್ಷಕಣ ಸಂಬಳ ನೀಡಬೇಕಾಗಿದೆ.