ಕಾಂಗ್ರೆಸ್ ಶಾಸಕರೊಂದಿಗೆ ಕ್ಷೇತ್ರಗಳ ಅಭಿವೃದ್ಧಿ ವಿಚಾರಕ್ಕೆ ರೆಸಾರ್ಟ್ನಲ್ಲಿ ಸಭೆ : ಡಿ.ಕೆ.ಸುರೇಶ್ ಸ್ಪಷ್ಟನೆ

ಬಿಜೆಪಿ ಆಪರೇಷನ್ ಕಮಲ ಬಹುತೇಕ ವಿಫಲವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮತ್ತಷ್ಟು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಸ್ಥಾನ ಗಳಿಕೆ ವಿಚಾರ ಒಂದು ಕಡೆಯಾದರೆ ಮತ್ತೊಂದು ಕಡೆಗೆ ಬಿಜೆಪಿ ಆಮಿಷಗಳಿಗೆ ಕಾಂಗ್ರೆಸ್ ಶಾಸಕರು ವಾಲದಂತೆ ನೋಡಿಕೊಳ್ಳುವುದು ಕೂಡ ಮತ್ತೊಂದು ವಿಚಾರ. ಈ ಎರೆಡು ವಿಚಾರವನ್ನ ತುಂಬಾ ಸೂಕ್ಷ್ಮವಾಗಿ ತಿಳಿದುಕೊಂಡು ಕಾರ್ಯತಂತ್ರ ರೂಪಿಸುವುದು ಸದ್ಯಕ್ಕೆ ಅವಶ್ಯವಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರು ರೆಸಾರ್ಟ್ನಲ್ಲಿ ಬಿಜೆಪಿ ವಿರುದ್ಧ ಆಪರೇಷನ ಕಮಲಕ್ಕೆ ಸಿದ್ಧತೆ ನಡೆಸಿದೆ ಅನ್ನೋ ಗುಲ್ಲೆದ್ದಿದೆ.

ಆದರೆ ಈ ವಿಚಾರವನ್ನು ತಳ್ಳಿ ಹಾಕಿದ ಸಂಸದ ಡಿ.ಕೆ.ಸುರೇಶ್. ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ನಮಗಷ್ಟು ಪುರುಸೊತ್ತು ಇಲ್ಲ.  ಸುದ್ದಿಗೋಷ್ಠಿ

‘ರೆಸಾರ್ಟ್ ನಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಶಾಸಕರೊಂದಿಗೆ ಆಯಾ ಕ್ಷೇತ್ರದ ಸಮಸ್ಯೆಗಳನ್ನು ತಿಳಿಯಲು ಬಗೆಹರಿಸಲು ಸಭೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿರಬೇಕು, ಒಮ್ಮತವಾಗಿರಬೇಕು, ಆಯಾ ಕ್ಷೇತ್ರದ ಸಮಸ್ಯೆಗಳನ್ನು ತಿಳಿಯಲು ಬಗೆಹರಿಸಲು ಚರ್ಚೆ ಮಾಡಬೇಕು ಎನ್ನುವ ದೃಷ್ಟಿಯಿಂದ ನಾವು ಸೇರಿದ್ದೇವೆ ಅಷ್ಟೇ.. ಕ್ಷೇತ್ರಗಳ ಬಗ್ಗೆ ಅಭಿವೃದ್ದಿ ವಿಚಾರಕ್ಕೆ ಸಭೆ ನಡೆಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published.