ದೇಶದ ರೈತರಿಗೆ ತೊಂದರೆಯಾಗುವ ಯಾವುದೇ ಒಪ್ಪಂದ ಬೇಡ – ಸಿದ್ದರಾಮಯ್ಯ

ಟ್ರಂಪ್ ಭಾರತ ಭೇಟಿ ವೇಳೆ ದೇಶದ ರೈತರಿಗೆ ತೊಂದರೆಯಾಗುವ ಯಾವುದೇ ಒಪ್ಪಂದ ಮಾಡಬಾರದು. ಹಾಲೋತ್ಪನ್ನ ಒಪ್ಪಂದದಿಂದ ನಮ್ಮ ರೈತರಿಗೆ ತೊಂದರೆಯಾಗುತ್ತೆ.  ಈ ಒಪ್ಪಂದ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಸಿದ್ದರಾಮಯ್ಯ ಆದೇಶಿಸಿದ್ದಾರೆ.

ದೆಹಲಿಯಲ್ಲಿ ಹಿಂಸಾಚಾರ, ಸಾವು ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಂಯ್ಯ, ದೆಹಲಿಯವರು ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ದೆಹಲಿ ಪೊಲೀಸರು ಅಮೀತ ಶಾ ಕೈಯಲ್ಲಿದ್ದಾರೆ. ಅವರು ಕ್ರಮ ಕೈಗೊಳ್ಳಬೇಕು. ಟ್ರಂಪ್ ಬಂದರೇನಂತೆ ಅಮಿತ ಶಾ ಏನು ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನಂತೆ ದೆಹಲಿಯಲ್ಲೂ ಆಗಬಾರದು. ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳ್ಳದ ಕಾರಣ ಮಂಗಳೂರಿನಲ್ಲಿ ಗೋಲಿಬಾರ್ ಆಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಟ್ರಂಪ್‌ರನ್ನ ಗಾಂಧಿ ಆಶ್ರಮಕ್ಕೆ ಕರೆದೊಯ್ದ ವಿಚಾರಕ್ಕೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಿಜೆಪಿಯವರಿಗೆ ತೋರಿಸಲು ಮಾಡಿದ ಸಾಧನೆಯಾದರೂ ಏನು?   ಹಿಸ್ಟಾರಿಕಲಿ, ಮೊನಿಮೆಂಟಲಿ ಇವರು ಮಾಡಿರೊದಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮಹಾದಾಯಿ ನೊಟೀಫೀಕೇಶನ್ ಆಗಬೇಕು. ಕೇಂದ್ರದ ಮೇಲೆ ಯಡಿಯೂರಪ್ಪ ಒತ್ತಡ ಹಾಕಬೇಕು ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ನಳೀನಕುಮಾರ ಕಟೀಲ ಹೇಳಿಕೆ ವಿಚಾರಕ್ಕೆ, ಕಟಿಲ್ ಅವರಿಗೆ ರಾಜಕೀಯ ಜ್ಞಾನವಿಲ್ಲ. ಅವರನ್ನು ಹೇಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೋ ಗೊತ್ತಿಲ್ಲ. ಬಿಜೆಪಿ ಶಾಸಕರಲ್ಲಿ ಅಸಮಾಧಾನ ಇರುವುದು ನಿಜ. ಆದರೆ ಯಾರೂ ನನ್ನ ಜೊತೆ ಮಾತನಾಡಿಲ್ಲ.

32 ಶಾಸಕರು ರಾಜೀನಾಮೆ ನೀಡಲಿದ್ದಾರೆ, ಇಬ್ರಾಹಿಂ ಹೇಳಿಕೆ ವಿಚಾರ ಇನ್ನೂ ನಮ್ಮಲ್ಲಿ ಚರ್ಚೆ ಆಗಿಲ್ಲ. ಅದನ್ನು ಇಬ್ರಾಹಿಂ ಅವರಿಗೆ ಕೇಳಿ. ವಿಜಯಪುರದಲ್ಲಿ ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ಹೇಳಿದ್ದಾರೆ.