ಮರದಿಂದ ಕೆಳಗೆ ಬಿದ್ದ ಪೆಲಿಕಾನ್ ಪಕ್ಷಿಗಳಿಗೆ ಇವರೇ ಅನಾಥ ರಕ್ಷಕ….

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಾನವೀಯತೆ ಮರೆಯಾ ಗ್ತಿದೆ.ಹೆತ್ತಮಕ್ಕಳೆ ವಯಸ್ಸಾದವರನ್ನು ವೃದ್ದಾಶ್ರಮ‌ ಕ್ಕೆ ಸೇರಿಸುತ್ತಿದ್ದಾರೆ.ಇಂತಹ ಸಮಾಜದಲ್ಲಿ ವೃದ್ದ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಇಳಿ ವಯಸ್ಸಿನಲ್ಲೂ ಮರದಿಂದ ಕೆಳಗೆ ಬಿದ್ದು ಅನಾಥವಾದ ಪೆಲಿಕಾನ್ ಪಕ್ಷಿಗಳಿಗೆ ಆಶ್ರಯ ನೀಡಿ ಪಾಲನೆ ಪೋಷಣೆ ಮಾಡ್ತಾ ಬರ್ತಿದ್ದಾರೆ.ಅವುಗಳಿಗೆ ಅನ್ನಾ ಹಾರ ನೀಡಿ ಹಾರಲು ಕಲಿಸಿ ಮತ್ತೆ ಅವುಗಳಿಗೆ ಹೊಸ ಬದು ಕು ನಿರ್ಮಿಸಿಕೊಡುವ ಮೂಲಕ ನಿಸ್ವಾರ್ಥ ಸೇವೆ ಮಾಡ್ತಿ ದ್ದಾರೆ.ಆಗಿದ್ರೆ ಆ ನಿಸ್ವಾರ್ಥ ಜೀವಿ ಯಾರು ಅಂತೀರಾ..?

ಹೌದು!.. ಪೆಲಿಕಾನ್ ಪಕ್ಷಿಯ ಮರಿಯನ್ನು ತೋಳು‌ ಮೇಲೆ ಕೂರಿಸಿಕೊಂಡು ಹಾರಲು ಕಲಿಸ್ತಿರೋ ಈ ವ್ಯಕ್ತಿಯ ಹೆಸರು ನಿಂಗೇಗೌಡ ಅಂತಾ.ಇವ್ರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದವರು. ಇವ್ರು ತಮ್ಮ ಇಳಿ ವಯಸ್ಸಿನಲ್ಲಿ ಕೂಡ ಊರಿನ‌ ಮರಗಳ‌ ಮೇಲಿಂದ ಬಿದ್ದ‌ ಪೆಲಿಕಾನ್ ಪಕ್ಷಿಗಳ‌ ಮರಿಗಳನ್ನು ತಂದು ತಮ್ಮದೇ ಜಮೀನ ಜಾಗದಲ್ಲಿ ಅವುಗಳ ಪಾಲನೆ ಪೋಷಣೆ ಮಾಡ್ತಾ ಬರ್ತಿದ್ದಾರೆ.ಅವುಗಳಿಗೆ ಕಾಲಕಾಲಕ್ಕೆ ಅನ್ನಾಹಾರ ನೀಡ್ತಾ ಪಶು ವೈದ್ಯರಿಂದ ಔಷಧಿ ಕೊಡಿಸಿ ಆ ಅನಾಥ ಪಕ್ಷಿ ಗಳಿಗೆ ಒಂದು ಹೊಸ ಬದುಕು ರೂಪಿಸಿ ಕೊಡುವ ಕಾಯಕ ಮಾಡ್ತಾ ಬರ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಮರಿಗಳಿಗೆ ಪ್ರತಿದಿನ‌ ತಮ್ಮ ಸ್ಚಂತ ಹಣದಲ್ಲಿ ಕಳೆದ ೩೦ ವರ್ಷಗಳಿಂದ ಮೀನು ತಂದು ಅವುಗಳಿಗೆ ನೀಡ್ತಾ ನಿಸ್ವಾರ್ಥ ಸೇವೆ ಮಾಡ್ತಾ ಇಂದಿನವರೆಗೆ ನೂರಾರು ಕೊಕ್ಕರೆಗಳಿಗೆ ಜೀವ ಉಳಿಸಿದ್ದಾರೆ.

ಇನ್ನು ಈ ಊರಲ್ಲಿ ಹೆಚ್ಚು ಪೆಲಿಕಾನ್ ಪಕ್ಷಿಗಳು ವಾಸ ಮಾಡೋ ಕಾರಣ ಕ್ಕೆ ಈ ಊರಿಗೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು ಬಂದಿದೆ. ಈ ಊರಿನ‌ ಬಹುತೇಕ ಮರಗಳ ಮೇಲೆ ಫೆಲಿಕಾನ್ ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ‌ ಮಾಡಿ ಅವುಗಳ ಪಾಲನೆ ಪೋಷಣೆ ಮಾಡುತ್ತವೆ.ಕೆಲವೊಮ್ಮೆ ಈ ಮರದ ಮೇಲಿಂದ ಪೆಲಿಕಾನ್ ಪಕ್ಷಿಗಳ ಮರಿಗಳು ಬಿದ್ದು ನಾಯಿ ಬೆಕ್ಕುಗಳ ಆಹಾರವಾಗ್ತಿದ್ದವು. ಇದನ್ನ ನೋಡಿದ್ದ ಯಾರೊಬ್ಬರು ಈ ಕಾರ್ಯಕ್ಕೆ ಮುಂದಾಗದಾಗ ಅಲ್ಲಿರೋ ನಿಂಗೇಗೌಡರ ಹೆಜ್ಜಾರ್ಲೆ ಬಳಗದ ಹೆಸರಲ್ಲಿ ಒಂದು ಸಂಘ ಮಾಡಿಕೊಂಡು ಈ ಕೊಕ್ಕರೆಗಳ ರಕ್ಷಣೆ ಮುಂದಾಗಿದ್ರಂತೆ. ಆದ್ರೆ ಆ ಸಂಘದಲ್ಲಿ ಸದಸ್ಯರ ಕೈ ಜೋಡಿಸದೇ ಇದ್ದಾಗ ಅಂದಿನಿಂದ ಇಂದಿಗೂ ಈ ಗ್ರಾಮದಲ್ಲಿ ಇವರೊಬ್ಬರೆ ನಿಂತು ಯಾವುದೇ ಮರದಿಂದ ಪೆಲಿಕಾನ್ ಪಕ್ಷಿ ಮರಿಗಳು ಬಿದ್ರು ಅದನ್ನು ತಂದು ಪೋಷಣೆ ಮಾಡ್ತಿದ್ದಾರೆ. ಇವ್ರ ಈ ನಿಸ್ವಾರ್ಥ ಸೇವೆಯ ಕಾರ್ಯಕ್ಕೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಯುವಕರಂತು ಈ ನಿಂಗೇಗೌಡ ಕಾರ್ಯವನ್ನು ಯುವ ಪೀಳಗೆಗೆ ಮಾದರಿ ಅನ್ನುತ್ತಾರೆ.

ಒಟ್ಟಾರೆ ಇಂದಿನ ಸ್ವಾರ್ಥ‌ ಜಗತ್ತಿನಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಇಳಿ ವಯಸ್ಸಿನಲ್ಲೂ ನಿಸ್ವಾರ್ಥದಿಂದ ಈ ಪೆಲಿ ಕಾನ್ ಪಕ್ಷಿಗಳ ಸೇವೆಗಾಗಿ ತಮ್ಮ ಬದುಕುನ್ನು ಮುಡಿಪಾಗಿಟ್ಟು ಸೇವೆ ಮಾಡ್ತಿರೋ ಈ ವೃದ್ದ ನಿಂಗೇಗೌಡರಿಗೆ ಹ್ಯಾಟ್ಸಪ್ ಹೇಳ್ತಾ ನಾವು‌ ಕೂಡ ಇಂತಹ ಸೇವೆಗಳ ಮೂಲಕ ಮಾನ ವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳ ಪಣ ತೊಡಬೇಕಿದೆ.