ಅಂತರಗಂಗೆ ಬೆಟ್ಟದಲ್ಲಿ ಲಕ್ಷ ದೀಪೋತ್ಸವ : ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

ದಕ್ಷಿಣ ಕಾಶಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ, ಲಕ್ಷ ದೀಪೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು.

ಕಾರ್ತಿಕ ಮಾಸದ ನಂತರ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಆಚರಿಸೊ ಲಕ್ಷ ದೀಪೋತ್ಸವ ಕಾರ್ಯಕ್ರಮ ಈ ಬಾರಿಯೂ ಕಳೆಗಟ್ಟಿತ್ತು, ದಕ್ಷಿಣ ಕಾಶಿಯೆಂದೆ ಖ್ಯಾತಿಯನ್ನು ಪಡೆದಿರುವ ಅಂತರಗಂಗೆ ಬೆಟ್ಟದಲ್ಲಿ ಭಕ್ತರು ಸಾಮೂಹಿಕವಾಗಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಬೆಟ್ಟದ ಪ್ರತಿ ಮೆಟ್ಟಿಲುಗಳ ಎರಡು ಬದಿಯಲ್ಲಿಯೂ ಎಣ್ಣೆ ದೀಪಗಳನ್ನು ಬೆಳಗಿ ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದ್ರು.

ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಆಕರ್ಷಣೀಯವಾಗಿ ಮೂಡಿಬರುತ್ತಿದ್ದು ಗಣನೀಯವಾಗಿ ಭಕ್ತರ ಸಂಖ್ಯೆಯೂ ಏರಿಕೆಯಾಗ್ತಿದೆ, ಕಾರ್ತಿಕ ಸೋಮವಾರಗಳ ನಂತರದ ಚಂದಿರನ ಬೆಳಕಿನಲ್ಲಿ ಆಚರಿಸೋ ಹಬ್ಬ ಇದಾಗಿದ್ದು, ಸಾವಿರಾರು ಭಕ್ತರು ಭಾಗಿಯಾಗಿ ದೀಪಗಳನ್ನ ಬೆಳಗಿ ತಮ್ಮ ತಮ್ಮ ಕೋರಿಕೆಗಳನ್ನ ಸಮರ್ಪಿಸಿದ್ರು, ಶಿವ ದೀಪೋತ್ಸವ ಹಿನ್ನಲೆ ಅಂತರಗಂಗೆ ಬೆಟ್ಟದ ಶಿವನ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು.

ಶಿವಲಿಂಗವನ್ನ ಹೂವಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳಯುತ್ತಿತ್ತು, ಲಕ್ಷ ದೀಪದಲ್ಲಿ ಭಾಗಿಯಾದ ಸಾವಿರಾರು ಭಕ್ತರು ದೀಪಗಳನ್ನ ಬೆಳಗಿ ತೆಪ್ಪೋತ್ಸವ ವೀಕ್ಷಿಸಿ ದೇವರ ದರ್ಶನ ಪಡೆದು ಪುನೀತರಾದ್ರು, ಇದೇ ವೇಳೆ ಮಾತನಾಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದು ಅಂತರಗಂಗೆ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರೆ, ಇಷ್ಟಾರ್ಥಗಳು ಸಿದ್ದಿಯಾಗುತ್ತೆ ಎಂದು ತಿಳಿಸಿದ್ರು.

Leave a Reply

Your email address will not be published.