ದುಬೈ, ಥೈಲ್ಯಾಂಡ್ ನಲ್ಲಿ ನಡೆದ ಥ್ರೋ ಬಾಲ್ ಪಂದ್ಯದಲ್ಲಿ ಮಿಂಚಿದ ಬಾಗಲಕೋಟೆ ಕುವರ…!

ಆತ ಅಪ್ಪಟ ಗ್ರಾಮೀಣ ಕ್ರೀಡಾ ಪ್ರತಿಭೆ.ಬಡತನದ ಮಧ್ಯೆಯೂ ಛಲಬಿಡದೆ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ್ದಾನೆ.ಆದ್ರೀಗ ಈ ಕ್ರೀಡಾಪಟುವಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಥ್ರೋ ಬಾಲ್ ಕ್ರೀಡೆಯಲ್ಲಿ ಭಾಗಿಯಾಗಲು ಹಣಕಾಸಿನ ಸಮಸ್ಯೆ ಎದುರಾಗಿದೆ.

ರಾಜ್ಯ ಸರ್ಕಾರದಿಂದ ಧನ ಸಹಾಯಕ್ಕಾಗಿ ಸಾಧಕ ಕ್ರೀಡಾಪಟು ಮೊರೆಯಿಡ್ತಿದ್ದಾನೆ.. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಬಾದೋಡಗಿ ಗ್ರಾಮದ ಮಲ್ಲಿಕಾರ್ಜುನಪ್ಪ ರತ್ನಮ್ಮ ದಂಪತಿಯ ಮೂರನೆ ಮಗ ನಾಗರಾಜ್ ಮಲ್ಲಪ್ಪ ಕಲಗೋಡಿ.ಈತ ಶಾಲಾದಿನಗಳಲ್ಲಿ ಥ್ರೋ ಬಾಲ್ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು ಪಿಯುಸಿಯವ್ರೆಗೆ ಓದಿ.ಥ್ರೋ ಬಾಲ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾನೆ.ಶಾಲಾ ಹಂತದಲ್ಲೂ ಥ್ರೋ ಬಾಲ್ ನಲ್ಲಿ ಈತನ ಕೈಚಳಕ ಕಂಡು ಶಿಕ್ಷಕರು ಪ್ರೋತ್ಸಾಹಿಸಿ,ಬೆನ್ನು ತಟ್ಟಿದ್ದಾರೆ.ಇದೀಗ ರಾಜ್ಯ, ರಾಷ್ಟ್ರ ಥ್ರೋಬಾಲ್ ತಂಡ ಪ್ರತಿನಿಧಿಸಿ ಸಾಧನೆ ತೋರಿದ್ದಾನೆ.‌೨೦೧೭-೧೮ರಲ್ಲಿ ಮೈಸೂರಿನ ಫ್ರೇಂಡ್ಸ್ ಸ್ಪೋರ್ಟ್ಸ್ ಅಕಾಡೆಮಿಯ ತರಬೇತಿಯಲ್ಲಿ ಉತ್ತಮ ಕ್ರೀಡಾಪಟು ಆಗಿ ಆಯ್ಕೆಯಾಗಿದ್ದಾನೆ..

ಮುಂದೆ ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯದಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡಿದ್ದಾನೆ.೨೦೧೯ರ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ತನ್ನ ಕೈಚಳಕ ತೋರಿಸಿದ್ದು.ಥೈಲ್ಯಾಂಡ್ ನಲ್ಲಿ ಪ್ರಥಮ ಸ್ಥಾನ ಹಾಗೂ ನವೆಂಬರ್ ನಲ್ಲಿ ದುಬೈಯಲ್ಲಿ ನಡೆದ ಪಂದ್ಯದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ,ದೇಶದ ಕೀರ್ತಿ ಹೆಚ್ಚಿಸಿದ್ದಾನೆ..ಭಾರತದ ಥ್ರೋ ಬಾಲ್ ತಂಡದಲ್ಲಿ ನಾಗರಾಜ್ ಬಾಲ್ ಎಸೆಯೋದ್ರಲ್ಲಿ ಎತ್ತಿದ ಕೈ..ಇದೀಗ ಮತ್ತೆ ರಾಷ್ಟ್ರ ಮಟ್ಟದ ಕೋಲ್ಕತ್ತಾ, ಮಲೇಶಿಯಾ ಹಾಗೂ ಜನೇವರಿ ೧೭ರಂದು ನೇಪಾಳದಲ್ಲಿ ನಡೆಯೋ ಅಂತಾರಾಷ್ಟ್ರೀಯ ಪಂದ್ಯಕ್ಕೆ ನಾಗರಾಜ್ ಆಯ್ಕೆಯಾಗಿದ್ದಾನೆ..

ಆದ್ರೆ ನಾಗರಾಜ್ ವಿದೇಶಕ್ಕೆ ಹೋಗಲು ಹಣಕಾಸಿನ ಸಮಸ್ಯೆ ಎದುರಾಗಿದ್ದು,ರಾಜ್ಯ ಸರ್ಕಾರದ ನೆರವು ಕೋರುತ್ತಿದ್ದಾನೆ.ಇನ್ನು ಬಡತನದ ಮಧ್ಯೆಯೂ ಇಷ್ಟೋಂದು ಸಾಧನೆ ಮಾಡಿರೋ ನಾಗರಾಜ್ ನ ಬಗ್ಗೆ ಹಿರೇಬಾದವಾಡಗಿ ಗ್ರಾಮಸ್ಥರಿಗೆ ಹೆಮ್ಮೆಯಿದೆ.ಇನ್ನು ಥೈಲ್ಯಾಂಡ್,ದುಬೈ ಸೇರಿದಂತೆ ಅಂತಾರಾಷ್ಟ್ರೀಯ, ರಾಷ್ಟ್ರಮಟ್ಟದಲ್ಲಿ ಭಾಗಿಯಾಗಲು ಸಂಘ ಸಂಸ್ಥೆಯವರು ಧನಸಹಾಯ ಮಾಡಿದ್ದಾರೆ.ಜಮಖಂಡಿಯ ಪ್ರಭುಲಿಂಗೇಶ್ವರ ಶುಗರ್ಸ್ ನವ್ರು ನಾಗರಾಜ್ ನಿಗೆ ಧನಸಹಾಯ ನೀಡಿದ್ದು, ಜೊತೆಗೆ ಸಾಲಸೋಲ ಮಾಡಿ ಛಲಬಿಡದೇ ಥ್ರೋ ಬಾಲ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾನೆ..

ಇದೀಗ ಮಲೇಶಿಯಾ ,ನೇಪಾಳ ದೇಶಕ್ಕೆ ಹೋಗಲು ೧ಲಕ್ಷ೪೦ಸಾವಿರ ಹಣದ ಅವಶ್ಯಕತೆಯಿದೆ.ಜೊತೆಗೆ ಕೋಲ್ಕತ್ತಾದಲ್ಲಿ ರಾಷ್ಟ್ರ ತಂಡ ಪ್ರತಿನಿಧಿಸಲು ೧೫ಸಾವಿರ ಮೊತ್ತ ಕಟ್ಟಬೇಕಾಗಿದೆ.ನಾಗರಾಜ್ ತಂದೆ ತಾಯಿ ಕೃಷಿಕರಾಗಿದ್ದು, ಬಡತನದಲ್ಲಿ ಕೈತೊಳೆಯುತ್ತಿದ್ದಾರೆ.ರಾಜ್ಯ ಸರ್ಕಾರ ಹಣಕಾಸು ನೆರವು ನೀಡ್ಬೇಕು ಅಂತಿದ್ದಾರೆ ಸ್ಥಳೀಯರು.ರಾಜ್ಯ ಸರ್ಕಾರ ಬಡ ಕ್ರೀಡಾಪಟುವಿಗೆ ಧನಸಹಾಯ ನೀಡುವ ಮೂಲಕ ಪ್ರೋತ್ಸಾಹಿಸಬೇಕಿದೆ‌..